ನವದೆಹಲಿ: ಕೊರೊನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರಪತಿ ಭವನ ಪ್ರವೇಶಕ್ಕೆ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
-
As a precautionary measure against the spread of COVID-19 Novel Coronavirus, the Rashtrapati Bhavan will remain closed for exploratory tour visits from tomorrow, March 13, till further notice.
— President of India (@rashtrapatibhvn) March 12, 2020 " class="align-text-top noRightClick twitterSection" data="
">As a precautionary measure against the spread of COVID-19 Novel Coronavirus, the Rashtrapati Bhavan will remain closed for exploratory tour visits from tomorrow, March 13, till further notice.
— President of India (@rashtrapatibhvn) March 12, 2020As a precautionary measure against the spread of COVID-19 Novel Coronavirus, the Rashtrapati Bhavan will remain closed for exploratory tour visits from tomorrow, March 13, till further notice.
— President of India (@rashtrapatibhvn) March 12, 2020
ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ, ಶುಕ್ರವಾರದಿಂದ ಮುಂದಿನ ಸೂಚನೆ ಬರುವವರೆಗೆ ರಾಷ್ಟ್ರಪತಿ ಭವನಕ್ಕೆ ಸಾರ್ವಜನಿಕರು ಮತ್ತು ಪ್ರವಾಸಿರ ಭೇಟಿಯನ್ನು ನಿರ್ಬಂಧಿಸಲಾಗಿದೆ ಎಂದು ರಾಷ್ಟ್ರಪತಿ ಅವರ ಅಧಿಕೃತ ಟ್ವಿಟ್ಟರ್ನಲ್ಲಿ ಮಾಹಿತಿ ನೀಡಲಾಗಿದೆ.
ಕೊರೊನಾ ಭೀತಿಯಿಂದ ರಾಷ್ಟ್ರಪತಿ ಭವನದಲ್ಲಿರುವ ಮೊಘಲ್ ಗಾರ್ಡನ್ ಪ್ರವೇಶವನ್ನು ಸಾರ್ವಜನಿಕರಿಗೆ ಮುಚ್ಚಿದ ಒಂದು ವಾರದ ನಂತರ ಈ ಪ್ರಕಟಣೆ ಬಂದಿದೆ.
ರಾಷ್ಟ್ರ ರಾಜಧಾನಿಯಲ್ಲಿ ಇಲ್ಲಿಯವೆರೆಗೆ ಆರು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ದೆಹಲಿಯ ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ಸಿನಿಮಾ ಹಾಲ್‌ಗಳನ್ನು ಮಾರ್ಚ್ 31 ರವರೆಗೆ ಬಂದ್ ಮಾಡುವಂತೆ ದೆಹಲಿ ಸರ್ಕಾರ ಆದೇಶ ಹೊರಡಿಸಿದೆ.