ನವದೆಹಲಿ: ಆರ್ಥಿಕತೆಯ ಉತ್ತೇಜನಕ್ಕಾಗಿ ಸರ್ಕಾರವು ಹೊಸ ಆರ್ಥಿಕ ಚಟುವಟಿಕೆಗಳ ಪಟ್ಟಿಯನ್ನು ಹೊರಡಿಸಿದ್ದು, ಕೊರೊನಾ ವೈರಸ್ ಹಾಟ್‌ಸ್ಪಾಟ್‌ಗಳಲ್ಲದ ಪ್ರದೇಶಗಳಲ್ಲಿ ಕೆಲವು ವಿನಾಯಿತಿ ನೀಡಿದೆ. ನಾಳೆ ಅಂದರೆ ಏಪ್ರಿಲ್ 20 ರಿಂದ ದೇಶಾದ್ಯಂತ ಕಾರ್ಯನಿರ್ವಹಿಸುವ ಸೇವೆಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ.
ಇ-ಕಾಮರ್ಸ್ ಸಂಸ್ಥೆಗಳಿಂದ ಅಗತ್ಯವಲ್ಲದ ವಸ್ತುಗಳನ್ನು ಸರಬರಾಜು ಮಾಡಲು ನಾಳೆಯಿಂದ ಅವಕಾಶ ನೀಡುವುದಿಲ್ಲ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ. ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಏಪ್ರಿಲ್ 20 ರಿಂದ ದೇಶಾದ್ಯಂತ ಆರಂಭವಾಗುವ ಸೇವೆಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಇವು ಕಂಟೈನ್ಮೆಂಟ್ ವಲಯಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
-
Here is a list of what will remain open all over India with effect from 20th April 2020.
— Ravi Shankar Prasad (@rsprasad) April 18, 2020 " class="align-text-top noRightClick twitterSection" data="
This will NOT be applicable in the containment zones.
Let us all fight together against #Covid19#IndiaFightsCorona#StayHomeStaySafe pic.twitter.com/d1EG0CMEOa
">Here is a list of what will remain open all over India with effect from 20th April 2020.
— Ravi Shankar Prasad (@rsprasad) April 18, 2020
This will NOT be applicable in the containment zones.
Let us all fight together against #Covid19#IndiaFightsCorona#StayHomeStaySafe pic.twitter.com/d1EG0CMEOaHere is a list of what will remain open all over India with effect from 20th April 2020.
— Ravi Shankar Prasad (@rsprasad) April 18, 2020
This will NOT be applicable in the containment zones.
Let us all fight together against #Covid19#IndiaFightsCorona#StayHomeStaySafe pic.twitter.com/d1EG0CMEOa
ಏಪ್ರಿಲ್ 20 ರಿಂದ ಭಾರತದಲ್ಲಿ ಪ್ರಾರಂಭವಾಗುವ ಸೇವೆಗಳ ಪಟ್ಟಿ:
- ಎಲ್ಲಾ ಆರೋಗ್ಯ ಸೇವೆಗಳು (ಆಯುಷ್ ಸೇರಿದಂತೆ)
- ಎಲ್ಲಾ ಕೃಷಿ ಮತ್ತು ತೋಟಗಾರಿಕಾ ಚಟುವಟಿಕೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿವೆ
- ಮೀನುಗಾರಿಕೆ (ಸಾಗರ / ಒಳನಾಡು) ಜಲಚರ ಸಾಕಣೆ ಉದ್ಯಮದ ಕಾರ್ಯಾಚರಣೆ
- ತೋಟಗಾರಿಕೆ ಚಟುವಟಿಕೆಗಳಾದ ಚಹಾ, ಕಾಫಿ ಮತ್ತು ರಬ್ಬರ್ ತೋಟಗಳು ಗರಿಷ್ಠ 50% ಕಾರ್ಮಿಕರೊಂದಿಗೆ ಕಾರ್ಯನಿರ್ವಹಿಸಲಿವೆ
- ಪಶುಸಂಗೋಪನೆ ಚಟುವಟಿಕೆಗಳು
- ಹಣಕಾಸು ವಲಯವು ಕ್ರಿಯಾತ್ಮಕವಾಗಿ ಉಳಿಯಲಿದೆ
- ಸಾಮಾಜಿಕ ಅಂತ ಮತ್ತು ಮಾಸ್ಕ್ ನಿಯಮ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದರೊಂದಿಗೆ MNREGA ಕಾರ್ಯಕ್ಕೆ ಅನುಮತಿ
- ಸರಕುಗಳ ಲೋಡಿಂಗ್ ಮತ್ತು ಅನ್ಲೋಡಿಂಗ್ಗೆ ಅನುಮತಿ
- ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳು ಕಾರ್ಯನಿರ್ವಹಿಸಲು ಅನುಮತಿ.
- ಕೈಗಾರಿಕೆಗಳು / ಕೈಗಾರಿಕಾ ಸಂಸ್ಥೆಗಳು (ಸರ್ಕಾರಿ ಮತ್ತು ಖಾಸಗಿ ಎರಡೂ) ಕಾರ್ಯನಿರ್ವಹಿಸಲು ಅನುಮತಿ
- ನಿರ್ಮಾಣ ಚಟುವಟಿಕೆಗಳಿಗೆ ವಿನಾಯಿತಿ
- ಭಾರತ ಸರ್ಕಾರದ ಕಚೇರಿಗಳು ಮತ್ತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸರ್ಕಾರಿ ಕಚೇರಿಗಳು ಓಪನ್
- ವೈದ್ಯಕೀಯ, ಪಶುವೈದ್ಯಕೀಯ ಆರೈಕೆ ಮತ್ತು ಅಗತ್ಯ ಸರಕುಗಳನ್ನು ಖರೀದಿಸಲು ವಿನಾಯಿತಿ ಪಡೆದ ವಿಭಾಗಗಳಲ್ಲಿ ಕೆಲಸದ ಸ್ಥಳಕ್ಕೆ ಪ್ರಯಾಣಿಸುವ ಎಲ್ಲಾ ಸಿಬ್ಬಂದಿಗಳನ್ನು ಒಳಗೊಂಡಂತೆ ತುರ್ತು ಸೇವೆಗಳಿಗಾಗಿ ಖಾಸಗಿ ವಾಹನಗಳಿಗೆ ಅವಕಾಶ ನೀಡಲಾಗಿದೆ.