ನವದೆಹಲಿ: ಡೆಡ್ಲಿ ವೈರಸ್ ಕೋವಿಡ್-19 ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಲಾಕ್ಡೌನ್ ಆದೇಶ ಹೊರಹಾಕಿದ್ದರೂ ಇದು ಹತೋಟಿಗೆ ಬರುತ್ತಿಲ್ಲ. ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಕಂಡು ಬರುತ್ತಿದೆ.
ಕಳೆದ 12 ಗಂಟೆಯಲ್ಲಿ ದೇಶದಲ್ಲಿ ಕೋವಿಡ್-19 ಸೋಂಕಿತ 240 ಹೊಸ ಕೇಸ್ ಕಂಡು ಬಂದಿವೆ. ಈ ಮೂಲಕ ದೇಶದಲ್ಲಿ 1637 ಪ್ರಕರಣಗಳಾಗಿದ್ದು, ಸದ್ಯ 1466 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, 133 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಸೋಂಕಿನಿಂದ 38 ಜನರು ಸಾವನ್ನಪ್ಪಿದ್ದಾರೆ.
ಕೇರಳ,ಮಹಾರಾಷ್ಟ್ರ, ಉತ್ತರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಕರಣ ಕಂಡು ಬಂದಿದ್ದು, ಇದೇ ಮೂವರು ಸಾವನ್ನಪ್ಪಿದ್ದಾರೆ. ವಿಶ್ವದಾದ್ಯಂತ 8 ಲಕ್ಷ ಜನರು ಈ ಸೋಂಕಿನಿಂದ ಬಳಲುತ್ತಿದ್ದು, ಇಲ್ಲಿಯವರೆಗೆ 42,000 ಜನರು ಸಾವನ್ನಪ್ಪಿದ್ದಾರೆ. ಇಟಲಿಯಲ್ಲೇ 12,428 ಜನರು ಸಾವನ್ನಪ್ಪಿದ್ದು, ಅತಿ ಹೆಚ್ಚು ಜನರನ್ನು ಕೊರೊನಾ ಬಲಿ ಪಡೆದುಕೊಂಡಿದೆ.