ನವದೆಹಲಿ: ಕೊರೊನಾ ವೈರಸ್ ಎಂಬ ಮಹಾಮಾರಿ ಪ್ರಪಂಚದಾದ್ಯಂತ ಜನರಲ್ಲಿ ಭಯಹುಟ್ಟಿಸಿದೆ. ಹೀಗೆ ಭೀತಿಗೊಳಿಸಿರುವ ಈ ಸೋಂಕನ್ನು ಹಸುವಿನ ಗೋಮೂತ್ರ ಮತ್ತು ಅದರ ಸಗಣಿಯಿಂದ ಗುಣಪಡಿಸಬಹುದೆಂದು ಹಿಂದೂ ಮಹಾಸಭಾದ ಅಧ್ಯಕ್ಷ ಸ್ವಾಮಿ ಚಕ್ರಪಾನಿ ಮಹಾರಾಜ್ ಹೇಳಿದ್ದಾರೆ.
ಅಲ್ಲದೇ ಈ ಸೋಂಕಿಗೆ ಒಳಗಾಗಿರುವ ವ್ಯಕ್ತಿ "ಓಂ ನಮಃ ಶಿವಾಯ ಎಂದು ಮಂತ್ರವನ್ನು ಜಪಿಸುತ್ತಾ, ಗೋ ಮಾತೆಯ ಗೋ ಮೂತ್ರ ಮತ್ತು ಸಗಣಿಯನ್ನು ದೇಹದ ಮೇಲೆ ಲೇಪನ ಮಾಡಿಕೊಳ್ಳುವುದರಿಂದ ರೋಗವನ್ನು ತಡೆಯ ಬಹುದಾಗಿದೆ"ಎಂಬ ಹೇಳಿಕೆ ನೀಡಿದ್ದಾರೆ.
ಚೀನಾದಲ್ಲಿ ಸಾವಿನ ಸಂಖ್ಯೆ 213ಕ್ಕೆ ಏರಿದ ನಂತರ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ. ಚೀನಾದ 31 ಪ್ರಾಂತೀಯ ಮಟ್ಟದಲ್ಲಿ 9,692 ಪ್ರಕರಣಗಳು ದೃಢಪಟ್ಟಿವೆ. ಈ ವೈರಸ್ ಹರಡಿರುವ ಹಿನ್ನೆಲೆ ವುಹಾನ್ ನಗರದಲ್ಲಿರುವ ಭಾರತೀಯರನ್ನು ಏರ್ ಇಂಡಿಯಾ ವಿಮಾನದ ಮೂಲಕ ಕರೆತರಲಾಗುತ್ತಿದೆ.