ಲಖನೌ: ಕೊರೊನಾ ಭೀತಿ ಹಿನ್ನೆಲೆ ಲಖನೌ ಜಿಲ್ಲಾಡಳಿತವೂ ಎಲ್ಲ ಬಾರ್, ಕೆಫೆ, ವಿಶ್ರಾಂತಿ ಕೊಠಡಿಗಳು, ಹೇರ್ ಸಲೂನ್, ಬ್ಯೂಟಿ ಪಾರ್ಲರ್ಗಳನ್ನು ಮಾರ್ಚ್.31 ರ ತನಕ ಮುಚ್ಚುವಂತೆ ಆದೇಶ ಹೊರಡಿಸಿದೆ.
ಎಲ್ಲವನ್ನು ಮಾರ್ಚ್ 31 ರವರೆಗೆ ಅಥವಾ ಮುಂದಿನ ಆದೇಶದವರೆಗೆ ತಕ್ಷಣದಿಂದಲೇ ಮುಚ್ಚಬೇಕು. ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿಷೇಕ್ ಪ್ರಕಾಶ್ ತಿಳಿಸಿದ್ದಾರೆ.
ಪ್ರತ್ಯೇಕ ಆದೇಶದಲ್ಲಿ, ಎಲ್ಲಾ ತಿನ್ನುವ ಸ್ಥಳಗಳು, ಸಿಹಿ ಅಂಗಡಿ, ಆಹಾರ ಮಳಿಗೆಗಳು, ಕಾಫಿ ಶಾಪ್ ಇತ್ಯಾದಿಗಳನ್ನು ಮಾರ್ಚ್ 31 ರವರೆಗೆ ಮುಚ್ಚುವಂತೆ ಆದೇಶಿಸಲಾಗಿದೆ. ಈ ಆದೇಶವನ್ನು ಪಾಲಿಸದಿದ್ದರೇ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.