ETV Bharat / bharat

ಕೊರೊನಾ ವಾರಿಯರ್ಸ್​​: ತಂದೆ ಕ್ಲಿನಿಕ್​​ನಲ್ಲಿ, ತಾಯಿ ಪೊಲೀಸ್ ಇಲಾಖೆ, 7 ವರ್ಷದ ಮಗು ಮನೆಯಲ್ಲಿ ಲಾಕ್​! - ಪೊಲೀಸ್ ತಾಯಿ, ತಂದೆ ಆಸ್ಪತ್ರೆಯಲ್ಲಿ ಕಾಂಪೌಂಡರ್​

ಮಹಾಮಾರಿ ಕೊರೊನಾ ತಂದಿಟ್ಟಿರುವ ಸಂಕಷ್ಟಕ್ಕೆ ಇಡೀ ಭಾರತವೇ ಬೆಚ್ಚಿಬಿದ್ದಿದ್ದು, ಇದರ ವಿರುದ್ಧದ ಹೋರಾಟ ಮುಂದುವರಿದಿದೆ. ಇದರ ಮಧ್ಯೆ ಕೆಲವೊಂದು ಹೃದಯ ಹಿಂಡುವ ಘಟನೆಗಳು ವರದಿಯಾಗುತ್ತಲೇ ಇವೆ.

Corona Warrior
Corona Warrior
author img

By

Published : Apr 14, 2020, 12:35 PM IST

ಬಿಲ್ವಾರ್​​(ರಾಜಸ್ಥಾನ): ದೇಶದಲ್ಲಿ ಕೊರೊನಾ ಮಹಾಮಾರಿ ಹೊಗಲಾಡಿಸಲು ದೇಶ ಒಗ್ಗಟ್ಟಿನಿಂದ ಹೋರಾಟ ನಡೆಸಿದ್ದು, ಇದರ ಭಾಗವಾಗಿ ವೈದ್ಯರು ಹಾಗೂ ಪೊಲೀಸರು ದಿನದ 24 ಗಂಟೆ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅನೇಕ ಮಕ್ಕಳು ತಂದೆ - ತಾಯಿ ಮುಖ ನೋಡದಂತಹ ಸ್ಥಿತಿ ನಿರ್ಮಾಣಗೊಂಡಿದೆ.

ರಾಜಸ್ಥಾನದ ಬಿಲ್ವಾರ್​ದಲ್ಲಿರುವ ಮಹಾತ್ಮ ಗಾಂಧಿ ಜಿಲ್ಲಾಸ್ಪತ್ರೆಯಲ್ಲಿ 7 ವರ್ಷದ ಮಗುವಿನ ತಂದೆ ಐಸೋಲೇಷನ್​ ವಾರ್ಡ್​​ನಲ್ಲಿ ಆಗಿ ಸೇವೆ ಸಲ್ಲಿಸುತ್ತಿದ್ದು, ತಾಯಿ ಬಿಲ್ವಾರ್​ದ ಪೊಲೀಸ್​ ಠಾಣೆಯಲ್ಲಿ ಪೊಲೀಸ್ ಕಾನ್ಸ್​ಟೇಬಲ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಏಳು ವರ್ಷದ ಮಗಳು ಮನೆಯಲ್ಲೇ ಜೀವನ ಸಾಗಿಸುತ್ತಿದ್ದು, ಅನೇಕ ದಿನಗಳಿಂದ ಇಬ್ಬರ ಮುಖ ಸರಿಯಾಗಿ ನೋಡದಂತಹ ಸ್ಥಿತಿ ನಿರ್ಮಾಣಗೊಂಡಿದೆ.

Corona Warrior
ಕೊರೊನಾ ವಾರಿಯರ್ಸ್​​

ರಾಜಸ್ಥಾನದ ಬಿಲ್ವಾರ್​ದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣ ಕಂಡು ಬರುತ್ತಿರುವ ಕಾರಣ ದಿನದ 24 ಗಂಟೆ ಪೊಲೀಸ್ ಡ್ಯೂಟಿ ಹಾಗೂ ಆಸ್ಪತ್ರೆಯಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ಹೀಗಾಗಿ ಮನೆಗೆ ತೆರಳಿ ಮಗುವಿನ ಮುಖ ನೋಡಲು ಸಾಧ್ಯವಾಗುತ್ತಿಲ್ಲ. ​ಕೆಲವೊಮ್ಮೆ ಮನೆಗೆ ಆಗಮಿಸುವ ತಾಯಿ ತಕ್ಷಣವೇ ಡ್ಯೂಟಿಗೆ ತೆರಳುತ್ತಿದ್ದು, ಇದರಿಂದ ಮನೆಯಲ್ಲಿ ಮಗು ಏಕಾಂಗಿಯಾಗಿ ಜೀವನ ನಡೆಸಬೇಕಾಗಿದೆ.

ತಾಯಿ ಮನೆಯಿಂದ ಹೊರಹೋಗುವಾಗ ಬಾಗಿಲು ಲಾಕ್​ ಮಾಡಿಕೊಂಡು ಹೋಗುವುದರಿಂದ ಅಭ್ಯಾಸ ಮಾಡುವುದು, ಟಿವಿ ನೋಡುವುದು ಮಾಡ್ತಿದ್ದು, ತಾಯಿ ಆಗಮನಕ್ಕಾಗಿ ಕಾಯುತ್ತಿರುತ್ತಾಳೆ ಎಂದು ಹೇಳಿದ್ದು, ಕೆಲವೊಮ್ಮೆ ತಾಯಿಗೆ ಫೋನ್​ ಮಾಡಿ ಮಾತನಾಡುತ್ತಾಳೆ ಎಂದು ಪೋಷಕರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.