ETV Bharat / bharat

ವಿಶೇಷ ಅಂಕಣ: ಕೊರೊನಾ ಭೀತಿಗೆ ಹೇಳಿ ಬೈ-ಬೈ: ಆಯುರ್ವೇದಲ್ಲಿದೆ ಮದ್ದು! - Corona virus article as per Ayurveda

ವಿಶ್ವದಾದ್ಯಂತ ಜನರು ಕೊರೊನಾ ಭೀತಿ ಎದುರಿಸುತ್ತಿದ್ದಾರೆ. ಅದಕ್ಕಾಗಿ ಕೋಟ್ಯಂತರ ರೂಪಾಯಿ ವ್ಯಯಿಸಿ ಮಹಾಮಾರಿಗೆ ಔಷಧಿ ಕಂಡುಹಿಡಿಯಲು ವೈದ್ಯರು, ವಿಜ್ಞಾನಿಗಳು ಕಣ್ಣಿಗೆ ಎಣ್ಣೆ ಬಿಟ್ಕೊಂಡು ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಆದರೆ ಭಾರತದ ಅತ್ಯಂತ ಪ್ರಾಚೀನ ವೈದ್ಯಶಾಸ್ತ್ರ ಆಯುರ್ವೇದದ ಮೂಲಕ ಕೊರೊನಾ ಭೀತಿಯನ್ನು ತಡೆಗಟ್ಟಬಹುದು. ಈ ಕುರಿತಾದ ವಿಶೇಷ ಹಾಗೂ ಉಪಯುಕ್ತ ಮಾಹಿತಿ ಇಲ್ಲಿದೆ...

Corona virus article as per Ayurveda,  ಕೊರೋನಾ ಭೀತಿಗೆ ಆಯುರ್ವೇದಲ್ಲಿದೆ ಮದ್ದು
ಕೊರೋನಾ ಭೀತಿಗೆ ಹೇಳಿ ಬೈ-ಬೈ
author img

By

Published : Feb 5, 2020, 5:59 PM IST

ಮನುಷ್ಯನ ದೇಹವು ಹಲವು ರಕ್ಷಣಾ ಪದರಗಳಿಂದ (Immunity layers) ರಚಿತವಾದದ್ದು. ಆದರೆ ತಪ್ಪಾದ ಆಹಾರ ಪದ್ಧತಿ, ಒತ್ತಡ ಮತ್ತು ನೈರ್ಮಲ್ಯ ಕೊರತೆಯಿಂದ ದೇಹದ ಇಮ್ಯುನಿಟಿ ಅಂದ್ರೆ ರೋಗ ನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ.

ಯಾವುದೇ ಹೊಸ ರೀತಿಯ ರೋಗಕಾರಕವು(Pathogen) ನಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ. ಸಾಂಕ್ರಾಮಿಕ ರೋಗವಾಗಿ ಪರಿಣಮಿಸಬಹುದು. ಕೊರೊನಾ ವೈರಸ್ ಸಹ ಹೀಗೆಯೇ ಹರಡುತ್ತಿದೆ.

ಜಗತ್ತಿನಲ್ಲಿ 14,000 ಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 2020 ರ ಜನವರಿಯಲ್ಲಿ ನಮ್ಮ ದೇಶದ ಕೇರಳ ರಾಜ್ಯದಲ್ಲಿ ಮೂರು ಕೊರೊನಾ ವೈರಸ್​ ಪ್ರಕರಣಗಳು ದೃಢಪಟ್ಟಿವೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಚೀನಾದ ಪ್ರಯಾಣದಿಂದ ದೂರವಿರಲು ಸಾರ್ವಜನಿಕರಿಗೆ ತಿಳಿಸಿದೆ. 2020 ರ ಜನವರಿ 15 ರಿಂದ ಚೀನಾದಲ್ಲಿ ಪ್ರಯಾಣ ಇತಿಹಾಸ ಹೊಂದಿರುವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಕೊರೊನಾ ವೈರಸ್ ಏಕಾಏಕಿ ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ವಿಶ್ವದಾದ್ಯಂತ ವೈರಾಲಜಿಸ್ಟ್‌ಗಳು ವೈರಸ್‌ನ ಭೌತಿಕ ಮಾದರಿಗಳ ಮೇಲೆ ಸಂಶೋಧನೆಗಳನ್ನು ಮಾಡುತ್ತಿದ್ದಾರೆ. ಔಷಧಗಳು ಮತ್ತು ಲಸಿಕೆಗಳನ್ನು ಪರೀಕ್ಷಿಸಲು, ಸೋಂಕಿನ ಪ್ರಾಣಿಗಳ ಮಾದರಿಗಳನ್ನು ಅಭಿವೃದ್ಧಿಪಡಿಸಲು ಮತ್ತು ವೈರಸ್​​ನ ಜೀವಶಾಸ್ತ್ರದ ಬಗ್ಗೆ ಅಧ್ಯಯನ ಮಾಡಲು ಯೋಜನೆಗಳನ್ನು ರೂಪಿಸುತ್ತಿದ್ದಾರೆ.

ಕೊರೊನಾ ವೈರಸ್ ​ಎಂದರೇನು?

ಮಾನವನ ಉಸಿರಾಟದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಶೀತಜ್ವರ, ಮೈಕೈ ನೋವು, ನೆಗಡಿಯಂತಹ ಕಾಯಿಲೆಗಳನ್ನು ತಂದೊಡ್ಡುತ್ತದೆ. ಕೊರೊನಾ ವೈರಸ್​ಗಳು ಹಲವು ದಶಕಗಳ ಹಿಂದೆಯೇ ಪ್ರಾಣಿಗಳಿಂದ ಮನುಷ್ಯನಿಗೆ ಹಾರಿದ ಹೊಸ ವರ್ಗದ ವೈರಸ್‌ಗಳಿಗೆ ಸೇರಿವೆ.

ಕೊರೊನಾ ವೈರಸ್‌ಗಳಲ್ಲಿ ನಾಲ್ಕು ವರ್ಗಗಳಿವೆ. ಅವುಗಳಲ್ಲಿ ಮೂರು ಮಾನವರಿಗೆ ಸೋಂಕು ತಗುಲಿಸುತ್ತವೆ. ಕೊರೊನಾಗೂ ಮೊದಲು, 2002-03 ರಲ್ಲಿ ತೀವ್ರ ಉಸಿರಾಟದ ತೊಂದರೆ ಪ್ರಕರಣಗಳು ಚೀನಾದಲ್ಲೇ ಕಾಣಿಸಿಕೊಂಡಿದ್ದವು. ಒಂದು ದಶಕದ ನಂತರ ಮಧ್ಯಪ್ರಾಚ್ಯದಲ್ಲಿ ಉಸಿರಾಟದ ತೊಂದರೆ ವಾಸ್ತವವಾಗಿ ಕೊರೊನಾ ವೈರಸ್‌ನಿಂದ ಉಂಟಾಗಿದೆ. ಈ ಎರಡು ಜಾಗತಿಕ ಸಾಂಕ್ರಾಮಿಕ ರೋಗಗಳು ನೂರಾರು ಜನರನ್ನು ಬಲಿ ತೆಗೆದುಕೊಂಡಿವೆ. ಈ ಬಾರಿ ಕೊರೊನಾ ವೈರಸ್ ವುಹಾನ್ ಮಾಂಸ ಮಾರುಕಟ್ಟೆಯಿಂದ ಹುಟ್ಟಿಕೊಂಡಿದೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೀತಿಯನ್ನು ಸೃಷ್ಟಿಸಿದೆ.

ಕೊರೊನಾ ವೈರಸ್​ ಲಕ್ಷಣಗಳು:

  • ಜ್ವರ
  • ಕೆಮ್ಮು
  • ಉಸಿರಾಟದ ತೊಂದರೆ
  • ಚಳಿ
  • ಎದೆ ನೋವು
  • ಮೈ-ಕೈ ನೋವು
  • ಗಂಟಲು ನೋವು
  • ಅಸ್ವಸ್ಥತೆ
  • ತಲೆನೋವು
  • ಅತಿಸಾರ
  • ವಾಕರಿಕೆ
  • ವಾಂತಿ

ಗಂಭೀರ ಪ್ರಕರಣಗಳಲ್ಲಿ:

  • ಅಂಗಾಂಗ ವೈಫಲ್ಯ
  • ನ್ಯುಮೋನಿಯಾ

ಕೊರೊನಾ ವೈರಸ್​ ತಡೆಗಟ್ಟುವ ಕ್ರಮಗಳು:

  • ಸೋಪಿನಿಂದ ಆಗಾಗ್ಗೆ ಕೈಗಳನ್ನು ತೊಳೆಯಿರಿ
  • ಹಸಿ-ಬಿಸಿಯಾದ ಮಾಂಸಾಹಾರವನ್ನು ಸೇವಿಸಬೇಡಿ
  • ಅನ್​ಹೈಜನಿಕ್​ ಆಹಾರದಿಂದ ದೂರವಿರಿ
  • ಹಣ್ಣುಗಳು ಮತ್ತು ತರಕಾರಿಗಳನ್ನು ಸರಿಯಾಗಿ ತೊಳೆದು ತಿನ್ನಿ
  • ಇತರರೊಂದಿಗೆ ಹ್ಯಾಂಡ್‌ ಶೇಕ್‌ಗಳಂತಹ ದೈಹಿಕ ಸಂಪರ್ಕದಿಂದ ದೂರವಿರಿ
  • ವೈರಸ್‌ನಿಂದ ರಕ್ಷಿಸಲು N95 ನಂತಹ ಮಾಸ್ಕ್​ಗಳನ್ನು ಧರಿಸಿ
  • ಕಣ್ಣುಗಳ ಮೂಲಕ ವೈರಸ್ ದೇಹಕ್ಕೆ ಪ್ರವೇಶಿಸುವುದನ್ನು ತಡೆಯಲು ಕನ್ನಡಕಗಳನ್ನು ಬಳಸಿ
  • ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿ ಗಂಟೆಗೆ ಕ್ಲೆನ್ಸರ್​ ಬಳಸಿ ಕೈಗಳನ್ನು ಶುಚಿಗೊಳಿಸಿ
  • ಹೆಚ್ಚು ನೀರು ಕುಡಿಯಿರಿ

ಯಾರಿಗೆ ಕೊರೊನಾ ವೈರಸ್​ ಹರಡಬಹುದು?

  • ಮಧುಮೇಹಿಗಳು, ದೀರ್ಘಕಾಲದ ಶ್ವಾಸಕೋಶದ ಕಾಯಿಲೆಗಳು ಮತ್ತು ಹೃದಯ ಸಂಬಂಧಿ ಕಾಯಿಲೆ ಹೊಂದಿರುವವರು
  • ವಯೋವೃದ್ಧರು
  • ಮಕ್ಕಳು
  • ಅಂಗಾಂಗ ಕಸಿಗೆ ಒಳಗಾದವರು
  • ರೋಗನಿರೋಧಕ ಔಷಧಿಗಳನ್ನು ತೆಗೆದುಕೊಳ್ಳುವವರು
  • ಚಿಕಿತ್ಸೆಯಲ್ಲಿರುವ ಕ್ಯಾನ್ಸರ್ ರೋಗಿಗಳು

ಚಿಕಿತ್ಸೆ ಅಥವಾ ರೋಗವನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮ:

ಸಾಂಪ್ರದಾಯಿಕ ಭಾರತೀಯ ಔಷಧ ಪದ್ಧತಿಯಾದ ಆಯುರ್ವೇದವು ಕೊರೊನಾ ವೈರಸ್​ನಂತಹ ಹಲವಾರು ಉಸಿರಾಟದ ಸೋಂಕಿನ ಲಕ್ಷಣಗಳಿಗೆ ಮದ್ದನ್ನು ಹೊಂದಿದೆ. ಆದರೆ ರೋಗವು ಹೊಸದಾಗಿದ್ದು ಆಯುರ್ವೇದವು ರೋಗಕಾರಕಗಳ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ. ಆಯುರ್ವೇದದಲ್ಲಿ ವೈರಸ್‌ಗಳ ಬಗ್ಗೆ ಜ್ಞಾನವಿಲ್ಲದಿದ್ದರೂ, ಅದು ತನ್ನ ಪ್ರಾಯೋಗಿಕ ಜ್ಞಾನವನ್ನು ಆಧರಿಸಿದ ಸಮಸ್ಯೆಯನ್ನು ಪರಿಹರಿಸುತ್ತದೆ.

ಆಯುರ್ವೇದದ ಪ್ರಕಾರ ಕೊರೊನಾ ವೈರಸ್ ದಾಳಿಯನ್ನು ತಡೆಯುವ ಮಾರ್ಗಗಳು ಇಲ್ಲಿವೆ. ಹಲವಾರು ಆಯ್ಕೆಗಳನ್ನು ಇಲ್ಲಿ ನೀಡಲಾಗಿದೆ. ವೈರಸ್ ತಡೆಗಟ್ಟಲು ವಿವರಿಸಿದ ಔಷಧಿಗಳಲ್ಲಿ ಒಂದನ್ನು ಅನುಸರಿಸಿ. ಚಿಕಿತ್ಸೆಯನ್ನು ತೆಗೆದುಕೊಳ್ಳುವ ಮೊದಲು ಮೇಲೆ ವಿವರಿಸಿದ ಮುನ್ನೆಚ್ಚರಿಕೆಗಳು ಮುಖ್ಯ. 12 ವರ್ಷದೊಳಗಿನ ಮಕ್ಕಳಿಗೆ ಅರ್ಧದಷ್ಟು ಡೋಸ್ ಸಾಕು.

  • ಶದಂಗ ಪಣಿಯಮ್ : 10 ರಿಂದ 15 ದಿನಗಳವರೆಗೆ ಉಪಾಹಾರಕ್ಕೆ ಮೊದಲು ಬೆಳಗ್ಗೆ 15ml
  • ಅಗಸ್ತ್ಯ ಹರಿತಕಿ ರಸಾಯನ : 10-15 ದಿನಗಳವರೆಗೆ ಆಹಾರದ ಮೊದಲು ದಿನಕ್ಕೆ ಎರಡು ಬಾರಿ 5 ಗ್ರಾಂ.
  • ಹರಿದ್ರಾಖಂಡ: ಆಹಾರದ ಮೊದಲು ಅಥವಾ ನಂತರ 10-15 ದಿನಗಳವರೆಗೆ ದಿನಕ್ಕೆ ಎರಡು ಬಾರಿ 5 ಗ್ರಾಂ.
  • ಕಫಕೇತು ರಾಸ್: 10-15 ದಿನಗಳವರೆಗೆ ದಿನಕ್ಕೆ 200 ಗ್ರಾಂ.

ಚೂರ್ಣಗಳನ್ನು ಬೆಚ್ಚಗಿನ ನೀರಿನೊಂದಿಗೆ ಅಥವಾ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಬೇಕು.

  • ತ್ರಿಕಾತು ಚೂರ್ಣ: 25 ಗ್ರಾಂ + ಗುಡುಚಿ ಸತ್ವ 5 ಗ್ರಾಂ + ಯಶ್ತಿಮಾಧು ಚೂರ್ಣ 25 ಗ್ರಾಂ ಚೆನ್ನಾಗಿ ಮಿಶ್ರಣ ಮಾಡಿ,10-15 ದಿನಗಳವರೆಗೆ ಉಪಾಹಾರಕ್ಕೆ ಮೊದಲು ಎರಡು-ಮೂರು ಗ್ರಾಂ ಬೆಚ್ಚಗಿನ ನೀರು ಅಥವಾ ಜೇನುತುಪ್ಪದೊಂದಿಗೆ ಸೇವಿಸಬೇಕು.

ಕೊರೊನಾ ವೈರಸ್ ಹೊಸ ಜಾಗತಿಕ ಸಾಂಕ್ರಾಮಿಕ ರೋಗವಾಗಿದ್ದು, ಇದು ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. ಭಾರತವು ಈಗಾಗಲೇ ಮೂರು ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮವಾಗಿರುವುದರಿಂದ, ಚೀನಾದಿಂದ ಭಾರತಕ್ಕೆ ಪ್ರಯಾಣಿಸುವ ಜನರು ಶೀತ ಮತ್ತು ಜ್ವರದ ಯಾವುದೇ ರೋಗ ಲಕ್ಷಣಗಳನ್ನು ಎದುರಿಸುತ್ತಿದ್ದರೇ ಅವರನ್ನು ತಕ್ಷಣವೇ ತಪಾಸಣೆಗೆ ಒಳಪಡಿಸಬೇಕು. ಈ ರೋಗದ ವಿರುದ್ಧ ಹೋರಾಡುವ ಪ್ರಮುಖ ಅಂಶವೆಂದರೆ ಸ್ವಚ್ಛತೆಯನ್ನು ಕಾಪಾಡುವುದು, ಕಾಯಿಸಿ ಆರಿಸಿದ ಶುದ್ಧವಾದ ನೀರನ್ನು ಕುಡಿಯುವುದು ಮತ್ತು ಚೆನ್ನಾಗಿ ಶುಚಿಗೊಳಿಸಿ, ಸರಿಯಾಗಿ ಬೇಯಿಸಿದ ಆಹಾರವನ್ನು ಸೇವಿಸುವುದು.

ಲೇಖಕರು- ಡಾ. ಪಿ.ವಿ. ರಣನಾಯಕುಲು (ನಿವೃತ್ತ ಹೆಚ್‌ಒಡಿ, ವೈದ್ಯಕೀಯ ಶರೀರಶಾಸ್ತ್ರ ಎಸ್.ವಿ. ಆಯುರ್ವೇದ ಕಾಲೇಜು- ತಿರುಪತಿ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.