ಹೈದರಾಬಾದ್: ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾದ ಅಡೆ ತಡೆಗಳಿಂದ ಭಾರತದ ಸಂಘಟಿತ ಡೈನ್-ಇನ್ ರೆಸ್ಟೋರೆಂಟ್‌ಗಳು ಈ ಹಣಕಾಸು ವರ್ಷದಲ್ಲಿ 40-50ರಷ್ಟು ಆದಾಯ ಕಳೆದುಕೊಳ್ಳಲಿವೆ ಎಂದು ಮೂಲವೊಂದು ತಿಳಿಸಿದೆ.
ವರದಿಗಳ ಪ್ರಕಾರ, ಸಂಘಟಿತ ರೆಸ್ಟೋರೆಂಟ್‌ಗಳು ಭಾರತದ ರೆಸ್ಟೋರೆಂಟ್ ಉದ್ಯಮದ ಶೇ. 35 ರಷ್ಟಿದೆ, 2019 ರ ಆರ್ಥಿಕ ವರ್ಷದಲ್ಲಿ ಇವುಗಳ ವಹಿವಾಟು 4.2 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಮಾರ್ಚ್ 25 ರಂದು ಸರ್ಕಾರ ಮೊದಲ ಲಾಕ್‌ಡೌನ್ ಘೋಷಿಸುವುದಕ್ಕಿಂತ ಮೊದಲು ಮುಂಬೈ, ನವದೆಹಲಿಯ ಮತ್ತು ಬೆಂಗಳೂರಿನಲ್ಲಿ ಡೈನ್ - ಇನ್ ಮತ್ತು ಸಾರ್ವಜನಿಕ ಮನರಂಜನಾ ಸ್ಥಳಗಳನ್ನು ಮಾರ್ಚ್ 13-14 ರಿಂದಲೇ ಮುಚ್ಚಲಾಗಿದೆ. ಮುಂಬೈನಂತಹ ಆಯ್ದ ನಗರಗಳಲ್ಲಿ ಆನ್‌ಲೈನ್ ವಿತರಣೆ ಲಭ್ಯವಿದೆ. ದೆಹಲಿ ಎನ್‌ಸಿಆರ್, ಬೆಂಗಳೂರು, ಕೋಲ್ಕತಾ, ಪುಣೆ ಮತ್ತು ಭುವನೇಶ್ವರದಲ್ಲಿ ಕಡಿಮೆ ಸೇವಾ ಮಟ್ಟದಲ್ಲಿ ಆನ್‌ಲೈನ್ ಡೆಲಿವರಿ ಲಭ್ಯವಿದೆ.
ಸಂಘಟಿತ ವಲಯವು ಲಾಕ್‌ಡೌನ್ ನಂತರ ಮಾರಾಟದಲ್ಲಿ ಶೇ. 90 ರಷ್ಟು ಕಡಿತವನ್ನು ಕಂಡಿದೆ. ಡೈನ್-ಇನ್ ಕಾರ್ಯನಿರ್ವಹಿಸುತ್ತಿಲ್ಲ. ಆನ್‌ಲೈನ್ ಡೆಲಿವರಿ ಶೇ 50-70 ರಷ್ಟು ಕುಸಿದಿವೆ. ಲಾಕ್‌ಡೌನ್ ಅನ್ನು ತೆಗೆದುಹಾಕಿದ ನಂತರ ಶೀಘ್ರದಲ್ಲೆ ಎಲ್ಲಾ ಸರಿಯಾಗುತ್ತದೆ ಎಂದು ಎನಿಸುವುದಿಲ್ಲ. ಏಕೆಂದರೆ ಭಾರತದಲ್ಲಿನ ಶೇ 30 ರಷ್ಟು ಕೊರೊನ ಪ್ರಕರಣಗಳು ಮುಂಬೈ ಮತ್ತು ನವದೆಹಲಿ ಎನ್‌ಸಿಆರ್ ಪ್ರದೇಶದಲ್ಲಿದ್ದು ಇವು ರೆಡ್ ಝೋನ್ ಎಂದು ಗುರುತಿಸಿಕೊಂಡಿವೆ. ಆದರೆ, ಭಾರತದ ಸಂಘಟಿತ ರೆಸ್ಟೋರೆಂಟ್ ಉದ್ಯಮದ ಅರ್ಧದಷ್ಟು ಭಾಗವನ್ನು ಈ ಪ್ರದೆಶಗಳು ಹೊಂದಿವೆ ಎಂದು ಸಿಆರ್ಐಎಸ್ಐಎಲ್ ರಿಸರ್ಚ್ ನಿರ್ದೇಶಕ ರಾಹುಲ್ ಪೃಥಿಯಾನಿ ಹೇಳಿದ್ದಾರೆ.
ರೆಸ್ಟೋರೆಂಟ್ ಆದಾಯದಲ್ಲಿನ ಕುಸಿತವು ತೋಟಗಾರಿಕೆ ರೈತರು, ಡೈರಿ ಉತ್ಪಾದಕರು, ಆಹಾರ ಸಂಸ್ಕಾರಕಗಳು, ಪೂರೈಕೆದಾರರು ಮತ್ತು ಲಾಜಿಸ್ಟಿಕ್ಸ್ ಮತ್ತು ವಿತರಣಾ ಪಾಲುದಾರರ ಮೇಲೆ ಪರಿಣಾಮ ಬೀರಲಿದೆ ಎಂದು ಸಂಶೋಧನೆ ಹೇಳಿದೆ.