ETV Bharat / bharat

ಪ್ರಜಾಪ್ರಭುತ್ವದ ಆಧಾರ ಸ್ತಂಭಗಳು ಹಾಳಾಗಿವೆ: ಕೇಂದ್ರದ ವಿರುದ್ಧ ಸಿಂಘ್ವಿ ವಾಗ್ದಾಳಿ

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಮಾತನಾಡಿದ ರಾಜ್ಯಸಭಾ ಸದಸ್ಯ ಅಭಿಷೇಕ್ ಮನು ಸಿಂಘ್ವಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Abhishek Singhvi
ಅಭಿಷೇಕ್ ಸಿಂಘ್ವಿ
author img

By

Published : Sep 16, 2020, 12:59 PM IST

Updated : Sep 16, 2020, 1:10 PM IST

ಹೈದರಾಬಾದ್( ತೆಲಂಗಾಣ): ಪ್ರಜಾಪ್ರಭುತ್ವದ ಆಧಾರ ಸ್ತಂಭಗಳು ಈಗ ಸದ್ಯಕ್ಕೆ ಸಂಪೂರ್ಣವಾಗಿ ಹಾಳಾಗಿವೆ ಎಂದು ರಾಜ್ಯಸಭಾ ಸದಸ್ಯ ಅಭಿಷೇಕ್ ಮನು​ ಸಿಂಘ್ವಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ನಾಯಕರಾದ ಮರ್ರಿ ಶಶಿಧರ್ ರೆಡ್ಡಿ ಆಯೋಜಿಸಿದ್ದ ವೆಬಿನಾರ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದೊಂದಿಗೆ ಸಾಂಸ್ಥಿಕ ಹಾಗೂ ಸಾಂಸ್ಥಿಕವಲ್ಲದ ಸರ್ಕಾರದ ಅಂಗಗಳು ಸಂಪೂರ್ಣವಾಗಿ ಹಾಳಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯಸಭಾ ಸದಸ್ಯತ್ವದ ಜೊತೆಗೆ ಹಿರಿಯ ವಕೀಲರೂ ಆಗಿರುವ ಅವರು, ಭಾರತದಲ್ಲಿ ವಿವಿಧ ಸಂಸ್ಥೆಗಳ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡರು.

ಮಾಧ್ಯಮಗಳು ಸೆನ್ಸೇಷನ್ ಮಾಡುವ ಕಡೆಗೆ, ಸಮತೋಲನ ಮಾಡುವುದರಿಂದ ಹಿಡಿದು ಅತಿರೇಕದ ಕಡೆಗೆ ಮುಖ ಮಾಡುತ್ತಿವೆ. ಪ್ರಜಾಪ್ರಭುತ್ವವ ನಾಲ್ಕನೇ ಆಧಾರ ಸ್ತಂಭದಿಂದ ಮಾಧ್ಯಮಗಳು ಕುಸಿಯುತ್ತಿವೆ ಎಂದು ಹಿರಿಯ ಕಾಂಗ್ರೆಸ್ ನಾಯಕ ವಾಗ್ದಾಳಿ ನಡೆಸಿದ್ದಾರೆ.

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಈ ವೆಬಿನಾರ್ ಆಯೋಜಿಸಲಾಗಿದ್ದು, 2007ರ ನವೆಂಬರ್​ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲು ನಿರ್ಧಾರ ಮಾಡಲಾಗಿತ್ತು.

Last Updated : Sep 16, 2020, 1:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.