ETV Bharat / bharat

ಭಯೋತ್ಪಾದಕರ ದಾಳಿ: ಮೂರು ವರ್ಷದ ಬಾಲಕನ ರಕ್ಷಿಸಿದ ಯೋಧರು - ಸೋಪೋರ್​ ದಾಳಿ

ಭಯೋತ್ಪಾದಕರು ಗಸ್ತಿನಲ್ಲಿದ್ದ ಸಿಆರ್​ಪಿಎಫ್​ ಯೋಧರ ಮೇಲೆ ದಾಳಿ ನಡೆಸಿದ ವೇಳೆ ಓರ್ವ ಯೋಧ ಹುತಾತ್ಮನಾಗಿದ್ದಾರೆ. ಈ ವೇಳೆ ಬಾಲಕನೊಬ್ಬನನ್ನು ರಕ್ಷಿಸಲಾಗಿದೆ.

boy rescued
ಬಾಲಕನ ರಕ್ಷಣೆ
author img

By

Published : Jul 1, 2020, 12:25 PM IST

Updated : Jul 2, 2020, 12:08 PM IST

ಶ್ರೀನಗರ (ಜಮ್ಮು ಕಾಶ್ಮೀರ): ಭಯೋತ್ಪಾದಕರು ಹಾಗೂ ಸೇನಾಪಡೆ ನಡುವೆ ನಡೆದ ಗುಂಡಿನ ದಾಳಿಯ ವೇಳೆ ಮೂರು ವರ್ಷದ ಓರ್ವ ಬಾಲಕನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ರಕ್ಷಿಸಿದ್ದಾರೆ.

ಬಾರಾಮುಲ್ಲಾ ಜಿಲ್ಲೆಯ ಸೋಪೋರ್​ ನಗರದಲ್ಲಿ ಭಯೋತ್ಪಾದಕರು ಗಸ್ತಿನಲ್ಲಿದ್ದ ಸಿಆರ್​ಪಿಎಫ್​ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಅಲ್ಲಿದ್ದ ಬಾಲಕನನ್ನು ಸೈನಿಕರು ರಕ್ಷಿಸಿದ್ದಾರೆ.

ಈ ಘಟನೆಯಲ್ಲಿ ಓರ್ವ ನಾಗರಿಕ ಸಾವನ್ನಪ್ಪಿ, ಮತ್ತೋರ್ವ ಯೋಧ ಹುತಾತ್ಮನಾಗಿದ್ದಾರೆ. ಮೂವರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯಕ್ಕೆ ಸೋಪೋರ್ ಪ್ರದೇಶದಲ್ಲಿ ಭಯೋತ್ಪಾದಕರಿಗಾಗಿ ಸೇನಾಪಡೆಯಿಂದ ಶೋಧ ಕಾರ್ಯ ಮುಂದುವರಿದಿದೆ.

Last Updated : Jul 2, 2020, 12:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.