ETV Bharat / bharat

ಯುಪಿಯ ಕೊರೊನಾ ವಾರಿಯರ್ಸ್‌ಗಳಾದ 7 ಪೊಲೀಸರ ಮೇಲೆ ಅಟ್ಯಾಕ್​..

author img

By

Published : May 11, 2020, 11:32 AM IST

ಗಾಯಾಳುಗಳಲ್ಲಿ ಹಿರಿಯ ಸಬ್ ಇನ್ಸ್‌ಪೆಕ್ಟರ್, ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳು ಮತ್ತು ಇಬ್ಬರು ಮಹಿಳಾ ಕಾನ್‌ಸ್ಟೇಬಲ್‌ಗಳೂ ಸೇರಿದ್ದಾರೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

Cops on lockdown duty attacked in UP's Kanpur Dehat
ಕೊರೊನಾ ವಾರಿಯರ್ಸ್​ ಮೇಲೆ ನಿಲ್ಲದ ಹಲ್ಲೆ: ಯುಪಿಯಲ್ಲಿ ಮತ್ತೆ 7 ಪೊಲೀಸರ ಮೇಲೆ ಅಟ್ಯಾಕ್​

ಕಾನ್ಪುರ(ಯುಪಿ): ಉತ್ತರಪ್ರದೇಶದ ಕಾನ್ಪುರ್ ದೇಹತ್‌ನಲ್ಲಿ ಭಾನುವಾರ ಜನರ ಗುಂಪೊಂದು ಲಾಕ್‌ಡೌನ್ ಕರ್ತವ್ಯದಲ್ಲಿದ್ದ ಏಳು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದೆ. ಇದರಿಂದ ಗಾಯಗೊಂಡ ಪೊಲೀಸರನ್ನ ಚಿಕಿತ್ಸೆಗೆ ದಾಖಲಿಸಲಾಗಿದೆ ಅಂತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಸೂಲಾಬಾದ್ ಪ್ರದೇಶದಲ್ಲಿ ಪೊಲೀಸರು ಕರ್ತವ್ಯದಲ್ಲಿದ್ದಾಗ ಈ ಘಟನೆ ನಡೆದಿದೆ. ಮಾಸ್ಕ್​ ಧರಿಸದೆ ಬೀದಿಗೆ ಬಂದಿದ್ದವರನ್ನು ಪೊಲೀಸ್​ ಸಿಬ್ಬಂದಿ ಪ್ರಶ್ನೆ ಮಾಡಿದ್ದೇ ತಡ, ಮೊದಲು ಜಗಳಕ್ಕಿಳಿದ ಆರೋಪಿಗಳು ನಂತರ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಇನ್ನೂ ತಪ್ಪಿಸಿಕೊಳ್ಳಲು ಅಲ್ಲಿಂದ ಓಡಲಾರಂಭಿಸಿದ ಪೊಲೀಸರ ಮೇಲೆ ಕಲ್ಲು ತೂರಾಟ ಕೂಡ ನಡೆಸಿದ್ದಾರೆ ಎಂದು ಕಾನ್ಪುರ್ ದೇಹತ್ ಎಎಸ್​ಪಿ ಅನೂಪ್ ಕುಮಾರ್ ಹೇಳಿದ್ದಾರೆ.

ಗಾಯಾಳುಗಳಲ್ಲಿ ಹಿರಿಯ ಸಬ್ ಇನ್ಸ್‌ಪೆಕ್ಟರ್, ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳು ಮತ್ತು ಇಬ್ಬರು ಮಹಿಳಾ ಕಾನ್‌ಸ್ಟೇಬಲ್‌ಗಳೂ ಸೇರಿದ್ದಾರೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಈ ಸಂಬಂಧ ಪೊಲೀಸರು ಹಿಸ್ಟರಿ ಶೀಟರ್ ಸರ್ಮಾನ್ ಸಿಂಗ್, ತಿರನ್ ಸಿಂಗ್ ಮತ್ತು ಬಲ್ವಾನ್ ಸಿಂಗ್ ಸೇರಿದಂತೆ 12 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.