ಗೋಧ್ರಾ (ಗುಜರಾತ್ ) : ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಕ್ಲಸ್ಟರ್ ಕಂಟೈನ್‌ಮೆಂಟ್ ಡ್ರೈವ್‌ನ ಭಾಗವಾಗಿ ಪಟ್ಟಣದ ಒಂದು ಪ್ರದೇಶವನ್ನು ಸೀಲ್ ಡೌನ್ ಮಾಡಲು ತೆರಳಿದ್ದ ಪೊಲೀಸರ ಮೇಲೆ ಸ್ಥಳೀಯ ನಿವಾಸಿಗಳು ಹಲ್ಲೆ ನಡೆಸಿದ್ದಾರೆ.
ಪಟ್ಟಣದ ಝಹೂರ್ ಮಾರುಕಟ್ಟೆ ಪ್ರದೇಶವನ್ನು ಸೀಲ್ ಡೌನ್ ಮಾಡಲು ತೆರಳಿದ ವೇಳೆ ಗುಹ್ಯಾ ಮೊಹಲ್ಲಾ ನಿವಾಸಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಒಬ್ಬ ಪೊಲೀಸ್ ಅಧಿಕಾರಿ ಗಾಯಗೊಂಡಿರುವುದಾಗಿ ಇನ್ಸ್ಪೆಕ್ಟರ್ ಎಂಪಿ ಪಾಂಡ್ಯಾ ತಿಳಿಸಿದ್ದಾರೆ.
ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು 5 ಸುತ್ತು ಅಶ್ರುವಾಯು ಸಿಡಿಸಿದ್ದಾರೆ. ಸದ್ಯ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪಾಂಡ್ಯಾ ಹೇಳಿದ್ದಾರೆ.
ಗೋಧ್ರಾ ಪಟ್ಟಣದಲ್ಲಿ ಇದುವರೆಗೆ 22 ಕೊರೊನಾ ಪ್ರಕರಣಗಳು ದಾಖಲಾಗಿದೆ.