2009ರಲ್ಲಿ H1N1 ಕಾಯಿಲೆ ಹರಡಿದಂತೆ ಕೋವಿಡ್-19 ಹರಡುತ್ತಿದೆ ಎಂದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಪ್ರಸ್ತುತ ಕೊರೊನಾ ವೈರಸ್ ಪ್ರಭಾವ ದೇಶದಾದ್ಯಂತ ಒಂದೇ ರೀತಿಯಲ್ಲಿ ಇರದಿರಬಹುದೆಂದು ಹೇಳಿದೆ. ಹೀಗಾಗಿ ನಿಯಂತ್ರಣ ಮಾರ್ಗೋಪಾಯಗಳನ್ನು ಪ್ರಾದೇಶಿಕವಾಗಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದೆ. ಹಾಟ್ಸ್ಪಾಟ್ಗಳಲ್ಲಿ ಕಠಿಣ ನಿಯಂತ್ರಣ ಕ್ರಮಗಳನ್ನು ಪ್ರೇರೇಪಿಸಿದ್ದು, ಕೋವಿಡ್ -19 ನಿಯಂತ್ರಣದ ಕುರಿತು ಶುಕ್ರವಾರ ಬಿಡುಗಡೆ ಮಾಡಿದ ಪರಿಷ್ಕೃತ ಮಾರ್ಗಸೂಚಿಗಳಲ್ಲಿ ತಿಳಿಸಿದೆ.
ಭಾರತದಲ್ಲಿ ಕಂಟೇನ್ಮೆಂಟ್ ನಿರ್ಣಯ ಕೈಗೊಳ್ಳುವ ಸಮಯದಲ್ಲಿ ವಿಭಿನ್ನ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು
- ಎಷ್ಟು ಕ್ಲಸ್ಟರ್‌ಗಳಿವೆ ಮತ್ತು ಅವುಗಳ ಗಾತ್ರ ಎಷ್ಟು?
- ಎಷ್ಟು ಪರಿಣಾಮಕಾರಿಯಾಗಿ ಭೌಗೋಳಿಕ ನಿರ್ಬಂಧವನ್ನು ಜಾರಿಗೊಳಿಸಬಹುದು?
- ಈ ವೈರಸ್ ಭಾರತೀಯರಲ್ಲಿ ಹೇಗೆ ಹರಡುತ್ತದೆ? ಇದಕ್ಕೆ ತಾಪಮಾನ ಮತ್ತು ತೇವಾಂಶದ ಕೊಡುಗೆ ಎಷ್ಟು?
- ಸಕ್ರಿಯ ಪ್ರಕರಣಗಳನ್ನು ಗುರುತಿಸುವುದು, ಹೆಚ್ಚಿನ ಸಂಖ್ಯೆಯ ಪರೀಕ್ಷೆಗಳನ್ನು ನಡೆಸುವುದು, ಶಂಕಿತರನ್ನು ಗುರುತಿಸುವುದು, ಅವರನ್ನು ಪ್ರತ್ಯೇಕವಾಗಿರಿಸುವುದು ಮತ್ತು ಅವರೊಂದಿಗೆ ಸಂಪರ್ಕ ಸಾಧಿಸಿದವರನ್ನು ಪ್ರತ್ಯೇಕಗೊಳಿಸುವುದು.
2009 ರಲ್ಲಿ ಹೆಚ್1ಎನ್1 ಜ್ವರ ಕೂಡ ದೊಡ್ಡ ನಗರಗಳಲ್ಲಿ ವ್ಯಾಪಕವಾಗಿ ಹರಡಿತ್ತು. ಜನರ ಸಂಚಾರ ಹೆಚ್ಚು ಇರುವ ಕಡೆ ಹೆಚ್ಚಿನ ಪ್ರಕರಣಗಳು ಕಂಡುಬಂದಿದ್ದವು. ಜನ ಸಾಂದ್ರತೆ ಕಡಿಮೆ ಇರುವ ಗ್ರಾಮಗಳು ಮತ್ತು ಸಣ್ಣ ಪಟ್ಟಣಗಳು, ವಾಹನ, ರೈಲು ಮತ್ತು ವಿಮಾನ ಸಂಪರ್ಕ ಇಲ್ಲದ ಪ್ರದೇಶಗಳಲ್ಲಿ ಕೆಲವೇ ಪ್ರಕರಣಗಳು ಕಂಡುಬಂದಿದ್ದವು. ಆದ್ದರಿಂದ ನಿಯಂತ್ರಣ ಕ್ರಮಗಳನ್ನು ಪ್ರಾದೇಶಿಕತೆ ಆದಾರದಕಲ್ಲಿ ಕೈಗೊಳ್ಳಬೇಕು.
ರ‍್ಯಾಪಿಡ್ ಪರೀಕ್ಷೆಗಳಿರುವುದು ಅದಕ್ಕಾಗಿ ಅಲ್ಲ..
ಪ್ರಾಥಮಿಕ ಹಂತದಲ್ಲಿ ಕೊರೊನ ವೈರಸ್ ಗುರ್ತಿಸಲು ಪಿಸಿಆರ್ ಆಧಾರಿತ ಪರೀಕ್ಷೆಗಳನ್ನು ಮಾತ್ರ ನಡೆಸಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮಹಾನಿರ್ದೇಶಕ ಬಲರಾಮ್ ಭಾರ್ಗವ ತಿಳಿಸಿದ್ದಾರೆ. ಯಾವುದೇ ಸಂದರ್ಭದಲ್ಲಿ, ರ‍್ಯಾಪಿಡ್ ಪ್ರತಿಕಾಯ ಪರೀಕ್ಷೆ ನಡೆಸದಂತೆ ರಾಜ್ಯಗಳಿಗೆ ಸಲಹೆ ನೀಡಿದ್ದಾರೆ.
- ಕ್ಷಿಪ್ರ ಪ್ರತಿಕಾಯ ಪರೀಕ್ಷೆಯು(rapid antibody test) ಒಂದು ನಿರ್ದಿಷ್ಟ ಪ್ರದೇಶದಲ್ಲಿ ಕೋವಿಡ್ -19 ವ್ಯಾಪ್ತಿಯನ್ನು ನಿರ್ಧರಿಸಲು ಬಳಸುವ ಹೆಚ್ಚುವರಿ ಸಾಧನವಾಗಿದೆ. ರೋಗಲಕ್ಷಣಗಳು ಪ್ರಾರಂಭವಾದ 7 ದಿನಗಳ ನಂತರ ಈ ಪರೀಕ್ಷೆಯನ್ನು ಮಾಡಬೇಕು.
- ಆಯಾ ರಾಜ್ಯಗಳಲ್ಲಿ ಹಾಟ್ಸ್ಪಾಟ್ಗಳಿಲ್ಲದಿದ್ದರೆ ಭವಿಷ್ಯದಲ್ಲಿ ಹಾಟ್‌ಸ್ಪಾಟ್ ಆಗಿ ಬದಲಾಗಬಹುದಾದ ಪ್ರದೇಶದಲ್ಲಿ ಇಂಥಾ ಪರೀಕ್ಷೆ ನಡೆಸಬೇಕು.
- ರ‍್ಯಾಪಿಡ್ ಟೆಸ್ಟ್ ಪ್ರಾರಂಭಿಸುವ ಮೊದಲು ಐಸಿಎಂಆರ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.
- ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ಜ್ವರ, ಕೆಮ್ಮು ಮತ್ತು ನೆಗಡಿಯಂತಹ ಲಕ್ಷಣಗಳು ಇರುವ ಜನರು ಏಳು ದಿನಗಳಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು. ಪಾಸಿಟಿವ್ ಎಂದು ಬಂದರೆ ಅವರನ್ನು ಸೋಂಕಿತರು, ನೆಗೆಟಿವ್ ಎಂದು ಬಂದರೆ ಅನುಮಾನಾಸ್ಪದವೆಂದು ಪರಿಗಣಿಸಬೇಕು.
- ಈ ಪ್ರದೇಶದಲ್ಲಿ ಜ್ವರದ ಲಕ್ಷಣಗಳು ಕಂಡು ಬರುವವರಿಗೆ ಏಳು ದಿನದ ನಂತರ ರ‍್ಯಾಪಿಡ್ ಟೆಸ್ಟ್ ನಡೆಸಬೇಕು. ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ಬಂದರೆ ಅವರನ್ನು ಕನಿಷ್ಠ ಏಳು ದಿನಗಳವರೆಗೆ ಕ್ವಾರಂಟೈನ್ನಲ್ಲಿ ಇಡಬೇಕು. ನೆಗೆಟಿವ್ ಬಂದರೂ ಕನಿಷ್ಠ ಏಳು ದಿನಗಳವರೆಗೆ ಕ್ವಾರಂಟೈನ್ನಲ್ಲಿ ಇಡಬೇಕು.
-