ETV Bharat / bharat

ವಲಸಿಗರು ಹಿಂದಿರುಗಿದ ನಂತರ ವೈರಸ್ ಹರಡುವಿಕೆ ತಡೆ ದೊಡ್ಡ ಸವಾಲು.. ಸಿಎಂ ಗೆಹ್ಲೋಟ್​ - ಅಶೋಕ್​ ಗೆಹ್ಲೋಟ್​ ವಿಡಿಯೋ ಕಾನ್ಫರೆನ್ಸ್​​ ಸುದ್ದಿ

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​​ ಮುಂಬರುವ ದಿನಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಪುನಾರಂಭಿಸಲು ಜೈಪುರ್ ಮತ್ತು ಅಜ್ಮೀರ್ ವಿಭಾಗಗಳ ಸಂಸದರು ಮತ್ತು ಶಾಸಕರ ಸಲಹೆಗಳನ್ನು ಪಡೆದುಕೊಂಡರು. ಜೊತೆಗೆ ವಲಸೆ ಕಾರ್ಮಿಕರಿಂದ ಕೊರೊನಾ ಹಳ್ಳಿಗಳಿಗೆ ಹರಡದಂತೆ ತಡೆಯಲು ಸೂಚನೆ ನೀಡಿದರು.

Gehlot
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್
author img

By

Published : May 12, 2020, 7:58 PM IST

ಜೈಪುರ : ಲಕ್ಷಾಂತರ ವಲಸಿಗರು ಗ್ರಾಮೀಣ ಪ್ರದೇಶಗಳಿಗೆ ಮರಳಿದ ನಂತರ ಕೊರೊನಾ ವೈರಸ್ ಹರಡುವುದನ್ನು ತಡೆಯುವುದು ರಾಜ್ಯ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ವಿಡಿಯೋ ಕಾನ್ಫರೆನ್ಸ್​ ಮೂಲಕ ಜೈಪುರ ಮತ್ತು ಅಜ್ಮೀರ್ ವಿಭಾಗಗಳ ಶಾಸಕರು ಮತ್ತು ಸಂಸದರೊಂದಿಗೆ ಸಂವಾದ ನಡೆಸಿದ ಅವರು, ಸುಮಾರು 19 ಲಕ್ಷ ವಲಸಿಗರು ಮನೆಗೆ ಮರಳಲು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ 4-5 ಲಕ್ಷ ಜನರು ರಾಜಸ್ಥಾನದಿಂದ ಬೇರೆ ಬೇರೆ ರಾಜ್ಯಗಳಿಗೆ ಹೋಗುವವರಿದ್ದಾರೆ. ವಲಸಿಗರನ್ನು ಕರೆಸಿಕೊಂಡು ಅವರಿಂದ ಗ್ರಾಮಗಳಿಗೆ ವೈರಸ್ ಹರಡದಂತೆ ನೋಡಿಕೊಳ್ಳಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಶಾಸಕರನ್ನು ಕರೆಸಿಕೊಂಡು ಸೂಚನೆ ನೀಡಿದರು.

ಒಬ್ಬ ಕೊರೊನಾ ರೋಗಿಯಿಂದ ಅನೇಕರಿಗೆ ಸೋಂಕು ತಗುಲಬಹುದು. ಆದರೆ, ಸರ್ಕಾರದ ನಿರ್ದೇಶನ ಪಾಲಿಸುವುದರಿಂದ ಕೊರೊನಾ ಹರಡುವುದನ್ನು ತಡೆಯಬಹುದು ಎಂದು ಗೆಹ್ಲೋಟ್ ತಿಳಿಸಿದರು. ಆರ್ಥಿಕ ಚಟುವಟಿಕೆಗಳ ಪುನರ್​ ಆರಂಭಿಸುವುದು ನಿರ್ಣಾಯಕವಾಗಿದೆ. ಜೊತೆಗೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಹಣಕಾಸು ಪ್ಯಾಕೇಜ್ ಘೋಷಿಸಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.