ETV Bharat / bharat

ಸಂಜೆ ಅಥವಾ ನಾಳೆ ಕಂಟೇನರ್‌ಗಳ ಮೂಲಕ ಕೋವಿಶೀಲ್ಡ್ ಲಸಿಕೆ ಬಿಡುಗಡೆ? - ಕೊರೊನಾ ಲಸಿಕೆ ವಿತರಣೆ

ಕೋವಿಡ್​-19 ಕಾರ್ಯಕ್ರಮಗಳ ಸಿದ್ಧತೆ ಪರಿಶೀಲನೆ ಕುರಿತು ಇಂದು ಪ್ರಧಾನಿ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಆನ್​ಲೈನ್​ ಮೂಲಕ ಸಭೆ ನಡಸಿದರು. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು ಹಿರಿಯರಿಗೆ ಲಸಿಕೆ ನೀಡುವ ನಿರೀಕ್ಷೆಯಿದೆ..

covishield-vaccine
ಕೋವಿಶೀಲ್ಡ್ ಲಸಿಕೆ
author img

By

Published : Jan 11, 2021, 7:11 PM IST

ಪುಣೆ : ಜನವರಿ 16ರಿಂದ ಕೊರೊನಾ ಲಸಿಕೆ ವಿತರಣಾ ಅಭಿಯಾನ ಆರಂಭವಾಗಲಿದೆ. 24 ಗಂಟೆಯೊಳಗೆ ಸೆರೆಮ್ ಸಂಸ್ಥೆಯಿಂದ ಕೋವಿಶೀಲ್ಡ್ ಲಸಿಕೆಯನ್ನು ಕಂಟೇನರ್​ ಮೂಲಕ ಕಳುಹಿಸಲಾಗುತ್ತದೆ ಎಂದು ಸಂಸ್ಥೆಯ ಸಿಇಒ ಆದರ್ ಪೂನವಾಲಾ ಹೇಳಿದರು.

ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್‌ ಮತ್ತು ಆಕ್ಸ್‌ಫರ್ಡ್‌–ಅಸ್ಟ್ರಾಜೆನೆಕಾ ಮತ್ತು ಸೆರೆಮ್​​ ಸಂಸ್ಥೆಯ ಕೋವಿಶೀಲ್ಡ್‌ ಲಸಿಕೆಗಳನ್ನು ತುರ್ತು ಬಳಕೆಗೆ ಕೇಂದ್ರ ಅನುಮತಿಸಿದೆ.

ಇದನ್ನೂ ಓದಿ...ಕೋವಿಡ್​-19 ಲಸಿಕಾ ವಿತರಣೆಗೆ ದಿನಗಣನೆ : ಅದರ ಪ್ರಕ್ರಿಯೆ ಕುರಿತ ಯೋಜನೆ ಹೀಗಿದೆ..

ಕೇಂದ್ರ ಸರ್ಕಾರ ಪ್ರತಿ ಲಸಿಕೆಗೆ 200 ರೂಪಾಯಿ ದರ ನಿಗದಿಪಡಿಸಿದೆ. ಎರಡು ದಿನಗಳಿಂದ ಸೆರೆಮ್ ಸಂಸ್ಥೆಯ ಹೊರಗೆ ಪೊಲೀಸರು ಹೆಚ್ಚಿನ ಭದ್ರತೆ ಕೈಗೊಂಡಿದ್ದಾರೆ. ಇಂದು ಸಂಜೆ ಅಥವಾ ನಾಳೆ ಲಸಿಕೆ ತುಂಬಿರುವ ಕಂಟೇನರ್​ಗಳನ್ನು ರಸ್ತೆಗೆ ಇಳಿಸಲಿದ್ದೇವೆ ಎಂದು ಮಾಹಿತಿ ನೀಡಿದರು.

ಕೋವಿಡ್​-19 ಕಾರ್ಯಕ್ರಮಗಳ ಸಿದ್ಧತೆ ಪರಿಶೀಲನೆ ಕುರಿತು ಇಂದು ಪ್ರಧಾನಿ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಆನ್​ಲೈನ್​ ಮೂಲಕ ಸಭೆ ನಡಸಿದರು. ಇದೇ 16ರಿಂದ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು ಹಿರಿಯರಿಗೆ ಲಸಿಕೆ ನೀಡುವ ನಿರೀಕ್ಷೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.