ETV Bharat / bharat

ಗಡಿ ಬಿಕ್ಕಟ್ಟಿನ ಮಧ್ಯೆಯೂ ಚೀನಾ ಮೂಲದ ಬ್ಯಾಂಕಿನಿಂದ ಸಾಲ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕೆ

author img

By

Published : Sep 16, 2020, 6:26 PM IST

ಎಲ್‌ಎಸಿಯ ಉದ್ದಕ್ಕೂ ಚೀನಾದ ಯಾವುದೇ ಒಳನುಸುಳುವಿಕೆಯಾಗಿಲ್ಲ ಎಂದಿರುವ ಸರ್ಕಾರದ ವಿರುದ್ಧ ವಿರೋಧ ಪಕ್ಷ ವಾಗ್ದಾಳಿ ನಡೆಸಿದೆ. ಗಡಿ ಬಿಕ್ಕಟ್ಟಿನ ಮಧ್ಯೆಯೂ ಬಿಜೆಪಿ ಪಕ್ಷವು ಚೀನಾದಿಂದ ಎರಡು ಸಾಲ ತೆಗೆದುಕೊಂಡಿದೆ ಎಂದು ಕಾಂಗ್ರೆಸ್ ದೂರಿದೆ.

cong
cong

ನವದೆಹಲಿ: ವಾಸ್ತವ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಯಾವುದೇ ಒಳನುಸುಳುವಿಕೆ ವರದಿಯಾಗಿಲ್ಲ ಎಂದು ಗೃಹ ಸಚಿವಾಲಯವು ಸಂಸತ್ತಿಗೆ ತಿಳಿಸಿದ ಬೆನ್ನಲ್ಲೇ, ಕೇಂದ್ರ ಸರ್ಕಾರ ಚೀನಾಕ್ಕೆ 'ಕ್ಲೀನ್ ಚಿಟ್' ನೀಡಿದೆ ಎಂದು ಕಾಂಗ್ರೆಸ್ ಪಕ್ಷ ವಾಗ್ದಾಳಿ ನಡೆಸಿದೆ.

ಪ್ರತಿಪಕ್ಷಗಳು ಕೇಂದ್ರದ ಈ ಕ್ರಮವನ್ನು ಖಂಡಿಸಿದ್ದು, ಗಾಲ್ವಾನ್ ವ್ಯಾಲಿ ಸಂಘರ್ಷದಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಭಾರತೀಯ ಸೈನಿಕರಿಗೆ ಈ ಹೇಳಿಕೆ ಅವಮಾನ ತರಿಸಿದೆ ಎಂದಿವೆ.

ಗಡಿ ಬಿಕ್ಕಟ್ಟಿನ ಮಧ್ಯೆಯೂ ಬಿಜೆಪಿ ಪಕ್ಷವು ಚೀನಾದಿಂದ ಎರಡು ಸಾಲ ತೆಗೆದುಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಬೀಜಿಂಗ್ ಮೂಲದ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕಿನಿಂದ ಭಾರತ ಸಾಲ ತೆಗೆದುಕೊಂಡಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ.

ಕಾಂಗ್ರೆಸ್ ಮಾಜಿ ಅಧ್ಯಕ್ಷ ಮತ್ತು ಸಂಸದ ರಾಹುಲ್ ಗಾಂಧಿ ಈ ಕುರಿತು ಟ್ವೀಟ್ ಮಾಡಿದ್ದು, "ನಮ್ಮ ಪ್ರದೇಶಕ್ಕೆ ಯಾರೂ ಪ್ರವೇಶಿಸಲಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಬಳಿಕ ಚೀನಾ ಮೂಲದ ಬ್ಯಾಂಕ್​ನಿಂದ ಭಾರಿ ಸಾಲವನ್ನು ಪಡೆಯಲಾಗಿದೆ ಎಂದು ಸರ್ಕಾರ ಹೇಳಿದೆ. ಮೋದಿ ಸರ್ಕಾರವು ಭಾರತೀಯ ಸೇನೆಯೊಂದಿಗೆ ಇದೆಯೇ ಅಥವಾ ಚೀನಾದೊಂದಿಗೆ ಇದೆಯೇ" ಎಂದು ಪ್ರಶ್ನಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.