ರಾಂಚಿ (ಜಾರ್ಖಂಡ್): ಕಾಂಗ್ರೆಸ್ ಶಾಸಕಿ ದೀಪಿಕಾ ಪಾಂಡೆ ಸಿಂಗ್ ಬುಧವಾರ ಕೋವಿಡ್ -19 ಟೆಸ್ಟ್ ಮಾಡಿಸಿದ್ದು, ಅವರ ವರದಿ ಪಾಸಿಟಿವ್ ಬಂದಿದೆ.
ಅವರ ಕುಟುಂಬ ಸದಸ್ಯರಿಗೂ ಕೊರೊನಾ ದೃಢಪಟ್ಟಿದೆ. ವೈದ್ಯರ ಸಲಹೆಯಂತೆ ಶಾಸಕಿ ದೀಪಿಕಾ ಪಾಂಡೆ ಸಿಂಗ್ ಹಾಗೂ ಮನೆ ಸದಸ್ಯರು ಹೋಂ ಕ್ವಾರಂಟೈನ್ ಆಗಿದ್ದಾರೆ. ಈ ಬಗ್ಗೆ ದೀಪಿಕಾ ಪಾಂಡೆ ಟ್ವೀಟ್ ಸಹ ಮಾಡಿದ್ದಾರೆ.
ನನ್ನ ಮತ್ತು ನನ್ನ ಕುಟುಂಬದವರಿಗೆ ನಡೆಸಿದ COVID-19 ಟೆಸ್ಟ್ ವರದಿ ಪಾಸಿಟಿವ್ ಬಂದಿದೆ. ನಾನು ಈಗಾಗಲೇ ಹಲವರನ್ನು ಭೇಟಿ ಮಾಡಿದ್ದೇನೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರೂ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಸೋಂಕಿನ ಅಪಾಯ ತಪ್ಪಿಸುವ ಸಲುವಾಗಿ ತಮ್ಮನ್ನು ಸಂಪರ್ಕಿಸಲು ಬರುವ ಎಲ್ಲರಿಗೂ ಶಾಸಕಿ ಮನವಿ ಮಾಡಿದ್ದಾರೆ.