ಕೋಯಿಕೋಡ್/ಕೇರಳ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವುದಿಲ್ಲ ಎಂದು ಯಾವ ರಾಜ್ಯವೂ ಹೇಳುವಂತಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಹೇಳಿದ್ದಾರೆ.
ಕೇರಳ ಸಾಹಿತ್ಯೋತ್ಸವ - 2020 ಕಾರ್ಯಕ್ರಮದಲ್ಲಿ ಏರ್ಪಾಡಿಸಿದ್ದ''ದಿ ಐಡಿಯಾ ಆಫ್ ಇಂಡಿಯಾ'' ಚರ್ಚೆ ವೇಳೆ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಮಸೂದೆ ಸಂಸತ್ನಲ್ಲಿ ಅಂಗೀಕಾರಗೊಂಡು, ಈಗ ಕಾಯ್ದೆಯಾಗಿದೆ. ಹೀಗಾಗಿ ಎಲ್ಲಾ ರಾಜ್ಯಗಳು ಇದನ್ನು ಅನುಷ್ಠಾನಗೊಳಿಸಬೇಕು, ಇಲ್ಲದಿದ್ದರೆ ಅದು ಅಸಂವಿಧಾನಿಕ ನಡೆಯಾಗುತ್ತದೆ ಎಂದಿದ್ದಾರೆ.
ಎನ್ಆರ್ಸಿ ಅನುಷ್ಠಾನಗೊಳಿಸುವಲ್ಲಿ ಸ್ಥಳೀಯ ಆಡಳಿತವರ್ಗದ ಪಾತ್ರ ಬಹುಮುಖ್ಯ ಪಾತ್ರ ವಹಿಸಬೇಕು ಎಂದ್ರು. ಒಂದು ವೇಳೆ ಸ್ಥಳೀಯ ಆಡಳಿತ ಇದಕ್ಕೆ ಸಹಕರಿಸದಿದ್ದರೆ ರಾಜ್ಯ ಸರ್ಕಾರ ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಬಹುದು ಎಂದ್ರು.
ಸಂವಿಧಾನ ದೇಶದ ಅಡಿಪಾಯ ಇದ್ದಂತೆ. ಆದರೆ ಈ ತಳಪಾಯ ಈಗ ಬಿರುಕು ಬಿಟ್ಟಿದೆ , ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ 4 ಅಂಗಗಳಲ್ಲಿ ಈಗಾಗಲೇ 3 ಅಂಗಗಳನ್ನು ಕೇಂದ್ರ ಸರ್ಕಾರ ನಾಶ ಮಾಡಿದೆ ಎಂದು ಆರೋಪಿಸಿದ್ರು. ಆದರೆ ನಾಲ್ಕನೇ ಅಂಗವಾದ ಮಾಧ್ಯಮಗಳು ಆಗಾಗ ಸ್ವಲ್ಪಮಟ್ಟಿಗೆ ಇನ್ನೂ ತಮ್ಮ ಕಾರ್ಯನಿರ್ವಹಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರದ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಯಾವುದೇ ರಾಜಕೀಯ ಪ್ರೇರಿತವಲ್ಲ. ಕೇರಳದ ಗವರ್ನರ್ ಆರಿಫ್ ಮೊಹ್ಮದ್ ಖಾನ್ ಭಾರತದ ಸಂವಿಧಾನವನ್ನು ಓದಬೇಕು. ಒಂದು ವೇಳೆ ಸಂವಿಧಾನ ಓದುವಾಗ ಅರ್ಥ ಮಾಡಿಕೊಳ್ಳಲು ಅವರಿಗೇನಾದರೂ ಕಷ್ಟವಾದರೆ ನಾನು ಸಹಾಯ ಮಾಡ್ತೇನೆ ಎಂದು ಹೇಳಿದರು.