ನವದೆಹಲಿ: ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಪದಾಧಿಕಾರಿಗಳ ನೇಮಕಗೊಳಿಸಿ ಆದೇಶ ಹೊರಹಾಕಿದ್ದು, ತಂಡದಲ್ಲಿ ಕರ್ನಾಟಕದ ಮೂವರಿಗೆ ಅವಕಾಶ ನೀಡಲಾಗಿದೆ. ಹೊಸದಾಗಿ ಆಯ್ಕೆಯಾಗಿರುವ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.
ಕಮಲ ಪಾಳಯಕ್ಕೆ ನೂತನ ಸಾರಥಿಗಳ ಘೋಷಣೆ: ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ತೇಜಸ್ವಿ ಸೂರ್ಯ!
ಪ್ರಮುಖವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಂಡಿದ್ದು, ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಪಟ್ಟಿಯಲ್ಲಿ ಹಾಗೂ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ರಾಷ್ಟ್ರೀಯ ವಕ್ತಾರರಾಗಿ ನೇಮಕಗೊಂಡಿದ್ದಾರೆ. ಇನ್ನು ರಾಜ್ಯದ ಬಿ.ಎಲ್ ಸಂತೋಷ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾಗಿ ಮುಂದುವರೆಯಲಿದ್ದಾರೆ.
-
Congratulations and best wishes to the new team. I am confident they will uphold the glorious tradition of our Party of serving the people of India selflessly and with dedication. May they work hard to empower the poor and marginalised. https://t.co/5beiCTkcsA
— Narendra Modi (@narendramodi) September 26, 2020 " class="align-text-top noRightClick twitterSection" data="
">Congratulations and best wishes to the new team. I am confident they will uphold the glorious tradition of our Party of serving the people of India selflessly and with dedication. May they work hard to empower the poor and marginalised. https://t.co/5beiCTkcsA
— Narendra Modi (@narendramodi) September 26, 2020Congratulations and best wishes to the new team. I am confident they will uphold the glorious tradition of our Party of serving the people of India selflessly and with dedication. May they work hard to empower the poor and marginalised. https://t.co/5beiCTkcsA
— Narendra Modi (@narendramodi) September 26, 2020
ಹೊಸದಾಗಿ ನೇಮಕಗೊಂಡಿರುವ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಭಾರತದ ಜನರಿಗಾಗಿ ನಿಸ್ವಾರ್ಥ ಮತ್ತು ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸುವ ನಮ್ಮ ಪಕ್ಷದ ಅದ್ಭುತ ಸಂಪ್ರದಾಯ ಎತ್ತಿ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ. ಬಡವರ ಸಬಲೀಕರಣಗೊಳಿಸಲು ಶ್ರಮಿಸಿ ಎಂದು ಮನವಿ ಮಾಡಿದ್ದಾರೆ.