ETV Bharat / bharat

ಕಾಂಗ್ರೆಸ್​​ಗೆ"ಐತಿಹಾಸಿಕ ಕುಸಿತ’’​: ರಾಜ್ಯಸಭೆಗೆ ಆಯ್ಕೆಯಾದ 11 ಸದಸ್ಯರಲ್ಲಿ ಒಬ್ಬರೂ ಕಾಂಗ್ರೆಸಿಗರಿಲ್ಲ! - ರಾಜ್ಯಸಭೆಯಲ್ಲಿ 40 ರಿಂದ 38 ಕ್ಕೆ ಇಳಿದ ಕಾಂಗ್ರೆಸ್​ ಬಲ

ಭಾರತೀಯ ರಾಜಕೀಯದಲ್ಲಿ ಒಂದು ಕಾಲದಲ್ಲಿ ಉತ್ತುಂಗಕ್ಕೇರಿದ ಕಾಂಗ್ರೆಸ್​ ಪಕ್ಷದ ವರ್ಚಸ್ಸು ದಿನೇ ದಿನೆ ಕ್ಷೀಣಿಸುತ್ತಿದೆ ಎಂಬುದು ಇದೀಗ ಮತ್ತೊಮ್ಮೆ ಸ್ಪಷ್ಟವಾಗಿದೆ. ಸೋಮವಾರ ಉತ್ತರ ಪ್ರದೇಶದಿಂದ 10 ಸಂಸದರು ಮತ್ತು ಉತ್ತರಾಖಂಡದಿಂದ ರಾಜ್ಯಸಭೆಗೆ ಒಬ್ಬರು ಆಯ್ಕೆಯಾಗಿದ್ದಾರೆ. ಆದರೆ ಈ 11 ಜನರಲ್ಲಿ ಭಾರತದ ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್​​ನ ಒಬ್ಬರೂ ಆಯ್ಕೆಯಾಗಿಲ್ಲ. ಹೀಗಾಗಿ ಮೇಲ್ಮನೆಯಲ್ಲಿ ಕಾಂಗ್ರೆಸ್​ ಸದಸ್ಯರ ಸಂಖ್ಯೆ 40 ರಿಂದ 38 ಕ್ಕೆ ಇಳಿದಿದೆ.

eat among 11 elected to RS
11 ಸದಸ್ಯರಲ್ಲಿ ಒಬ್ಬರೂ ಕಾಂಗ್ರೆಸಿಗರಿಲ್ಲ
author img

By

Published : Nov 3, 2020, 4:48 PM IST

ನವದೆಹಲಿ: ಬಿಜೆಪಿ ಅಧಿಕಾರಕ್ಕೆ ಬಂದ ಕಳೆದ ಆರು ವರ್ಷಗಳಲ್ಲಿ ಭಾರತೀಯ ರಾಜಕೀಯ ರಂಗದಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ ನಿರಂತರವಾಗಿ ಕೆಳ ಮುಖವಾಗುತ್ತಿದೆ. ಇದನ್ನು ಉತ್ತರ ಪ್ರದೇಶದ 10 ಸಂಸದರು ಮತ್ತು ಉತ್ತರಾಖಂಡದಿಂದ ರಾಜ್ಯಸಭೆಗೆ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯು ಎತ್ತಿ ತೋರಿಸಿದೆ.

ಹೊಸ ಸಂಸದರ ಚುನಾವಣೆಯ ನಂತರ, ಮೇಲ್ಮನೆಯಲ್ಲಿ ಕಾಂಗ್ರಸ್​ ಸಂಖ್ಯೆ 40 ರಿಂದ 38 ಕ್ಕೆ ಇಳಿದಿದೆ. 2014 ರಿಂದ ಸತತ ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ ಸೋತ ಕಾಂಗ್ರೆಸ್​ ಪಕ್ಷವು 51 ಲೋಕಸಭಾ ಸಂಸದರನ್ನು ಹೊಂದಿದೆ. ಆದರೆ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಹರಿಯಾಣ, ದೆಹಲಿ, ರಾಜಸ್ಥಾನ, ಗುಜರಾತ್, ಆಂಧ್ರಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ, ತ್ರಿಪುರ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಮಣಿಪುರ ರಾಜ್ಯಗಳಿಂದ ಒಂದೇ ಒಂದು ಸ್ಥಾನವನ್ನೂ ಹೊಂದಿಲ್ಲ. ಇಷ್ಟು ಸಾಲದು ಎಂಬಂತೆ ಸೋಮವಾರ, ಉತ್ತರಪ್ರದೇಶದಿಂದ ಚುನಾಯಿತರಾದ 8 ಸದಸ್ಯರು ಬಿಜೆಪಿಗೆ ಸೇರಿದವರಾಗಿದ್ದು, ಉಳಿದ ಒಬ್ಬರು ಸಮಾಜವಾದಿ ಪಕ್ಷ ಮತ್ತೊಬ್ಬರು ಬಿಎಸ್​​ಪಿಗೆ ಸೇರಿದವರಾಗಿದ್ದಾರೆ. ನಿನ್ನೆಯ ಚುನಾವಣೆಯಲ್ಲಿ ಒಬ್ಬನೇ ಒಬ್ಬ ಸದಸ್ಯನನ್ನು ರಾಜ್ಯಸಭೆಗೆ ಕಳಿಸುವಲ್ಲಿ ಕಾಂಗ್ರೆಸ್​ ವಿಫಲವಾಗಿದೆ.

ನವೆಂಬರ್ 25 ರಂದು ನಿವೃತ್ತಿ ಹೊಂದುತ್ತಿರುವ ಉತ್ತರ ಪ್ರದೇಶದ 10 ರಾಜ್ಯಸಭಾ ಸದಸ್ಯರಲ್ಲಿ ಬಿಜೆಪಿಯ ಮೂವರು ಸೇರಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಅರುಣ್ ಸಿಂಗ್ ಮತ್ತು ನೀರಜ್ ಶೇಖರ್, ಎಸ್​ಪಿ ಯಿಂದ ನಾಲ್ವರು - ಚಂದ್ರಪಾಲ್ ಸಿಂಗ್ ಯಾದವ್, ರಾಮ್ ಗೋಪಾಲ್ ಯಾದವ್, ರಾಮ್ ಪ್ರಕಾಶ್ ವರ್ಮಾ, ಮತ್ತು ಜಾವೇದ್ ಅಲಿ ಖಾನ್, ಬಿಎಸ್​​ಪಿಯಿಂದ ಇಬ್ಬರು - ರಾಜಾರಾಮ್ ಮತ್ತು ವೀರ್ ಸಿಂಗ್, ಮತ್ತು ಕಾಂಗ್ರೆಸ್ ನ ಪಿಎಲ್ ಪುನಿಯಾ. ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್ ಉತ್ತರಾಖಂಡದಿಂದ ರಾಜ್ಯಸಭಾ ಸದಸ್ಯರಾಗಿ ನಿವೃತ್ತರಾಗುತ್ತಿದ್ದಾರೆ. ಈ ಸ್ಥಾನವನ್ನು ಬಿಜೆಪಿಯ ನರೇಶ್ ಬನ್ಸಾಲ್ ಪಡೆದುಕೊಂಡಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ನೀರಜ್ ಶೇಖರ್, ಅರುಣ್ ಸಿಂಗ್ ಮತ್ತು ರಾಮ್ ಗೋಪಾಲ್ ಯಾದವ್ ಅವರನ್ನು ಬಿಜೆಪಿ ಸದಸ್ಯರಾಗಿ ಮತ್ತೆ ಮೇಲ್ಮನೆಗೆ ಆಯ್ಕೆ ಮಾಡಲಾಗಿದೆ.

ಕಾಂಗ್ರೆಸ್ ಪಕ್ಷದ 22 ಶಾಸಕರು ರಾಜೀನಾಮೆ ನೀಡಿದ ಹಿನ್ನೆಲೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಕಳೆದುಕೊಂಡು ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್​ ನಾಲ್ಕನೇ ಬಾರಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವಂತಾಯ್ತು. ಇದು ಕಾಂಗ್ರೆಸ್​ಗೆ ದೊಡ್ಡ ಹೊಡೆತವನ್ನೇ ನೀಡಿದೆ.

ಪಕ್ಷದ ಸ್ಥಾನಗಳು ನಿರಂತರವಾಗಿ ಕಡಿಮೆಯಾಗುತ್ತಿರುವುದರಿಂದ ಉತ್ತರ ಪ್ರದೇಶ, ಬಿಹಾರ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಂತಹ ದೊಡ್ಡ ರಾಜ್ಯಗಳಲ್ಲಿಯೂ ಕಾಂಗ್ರೆಸ್ ತನ್ನ ಇರುವಿಕೆಯನ್ನು ಕಳೆದುಕೊಂಡಿದೆ. ಮತ್ತೊಂದು ಕಡೆ ಮೇಲ್ಮನೆಯಲ್ಲಿ ಬಿಜೆಪಿಯ ಸದಸ್ಯ ಬಲ ಈಗ 86 ರಿಂದ 92 ಕ್ಕೆ ಏರಿದೆ. ಈ ಹೆಚ್ಚಳ ರಾಜ್ಯಸಭೆಯಲ್ಲಿ ಬಿಜೆಪಿಗೆ ಮತ್ತಷ್ಟು ಬಲ ತಂದು ಕೊಡಲಿದೆ.

ಮೇಲ್ಮನೆಯಲ್ಲಿ ಕಾಂಗ್ರೆಸ್​ ಪಕ್ಷದ ಸದಸ್ಯ ಬಲವು "ಐತಿಹಾಸಿಕ ಕುಸಿತ" ಕಂಡಿದೆ ಆದರೆ, ಬಿಹಾರ ವಿಧಾನಸಭಾ ಚುನಾವಣೆ ಮತ್ತು ಮಧ್ಯಪ್ರದೇಶ ವಿಧಾನಸಭಾ ಉಪಚುನಾವಣೆಗಳಿಂದ "ಒಳ್ಳೆಯ ಸುದ್ದಿ"ಯನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಹೆಸರು ಹೇಳಲು ಇಚ್ಛಿಸದ ಕಾಂಗ್ರೆಸ್​ನ ರಾಜ್ಯಸಭಾ ಸಂಸದರೊಬ್ಬರು ಹೇಳಿದ್ದಾರೆ.

ಇನ್ನು ಕಾಂಗ್ರೆಸ್ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಜೊತೆ ಮೈತ್ರಿ ಮಾಡಿಕೊಂಡಿದ್ದು, ಬಿಹಾರದ 243 ಸದಸ್ಯರ ಚುನಾವಣೆಯಲ್ಲಿ 70 ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.