ನವದೆಹಲಿ: ರಾಷ್ಟ್ರವ್ಯಾಪಿ ಲಾಕ್‌ಡೌನ್ ಮಧ್ಯೆ ವಲಸೆ ಕಾರ್ಮಿಕರನ್ನು ಸ್ಥಳಾಂತರ ಮಾಡುವ ಕೇಂದ್ರದ ನಿರ್ಧಾರವು ಮೂರು ವರ್ಷಗಳನ್ನು ತೆಗೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ಪಕ್ಷ ಖಂಡಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ, "ವಲಸೆ ಕಾರ್ಮಿಕರು ನಮ್ಮ ದೇಶದ ಅತ್ಯಂತ ದುರ್ಬಲ ವರ್ಗಕ್ಕೆ ಸೇರಿದವರು ಎಂದು ನಮಗೆಲ್ಲರಿಗೂ ತಿಳಿದಿದ್ದರೂ ಸಹ, ಕೇಂದ್ರ ಸರ್ಕಾರವು ಕಾರ್ಮಿಕರ ಆಲೋಚನೆಯಿಲ್ಲದೇ ಕೈಬಿಟ್ಟಿದೆ ಎಂದರು". ಗೃಹ ಸಚಿವಾಲಯದ ಆದೇಶವನ್ನು "ತುಘಲಕ್ ಫರ್ಮಾನ್" ಎಂದು ಆರೋಪಿಸಿದ ಸಿಂಘ್ವಿ, "ಇದು ತುಂಬಾ ವಿಲಕ್ಷಣ ಮತ್ತು ತಮಾಷೆಯಾಗಿದೆ. ಇದು ಅಜ್ಞಾನ ಮತ್ತು ಕಾಳಜಿಯಿಲ್ಲದ ವ್ಯಕ್ತಿಯಿಂದ ಹೊರಡಿಸಲ್ಪಟ್ಟಂತಹ ಆದೇಶ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್29 ರಂದು ಗೃಹ ಇಲಾಖೆಯು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿ, ವಿದ್ಯಾರ್ಥಿಗಳು, ವಲಸೆ ಕಾರ್ಮಿಕರು, ಪ್ರವಾಸಿಗರು ಮತ್ತು ಯಾತ್ರಿಕರನ್ನು ತಮ್ಮ ಸ್ವಂತ ರಾಜ್ಯಗಳಿಗೆ ಬಸ್‌ಗಳ ಮೂಲಕ ಮರಳಿ ಕರೆತರಲು ಅವಕಾಶ ಮಾಡಿಕೊಟ್ಟಿತು. ಲಾಕ್‌ಡೌನ್ ಘೋಷಿಸುವ ಮೊದಲು ಕೇಂದ್ರ ಸರ್ಕಾರ ಈ ಬಗ್ಗೆ ಯೋಚನೆ ಮಾಡಿರಲಿಲ್ಲವೇ ಎಂದರು.
ಕೇಂದ್ರ ಸರ್ಕಾರವು ತನ್ನ ಜವಾಬ್ದಾರಿಗಳನ್ನು ರಾಜ್ಯಗಳ ಮೇಲೆ ಹೇರಲು ಪ್ರಯತ್ನಿಸುತ್ತಿದೆ ಎಂದು ಸಿಂಘ್ವಿ ಆರೋಪಿಸಿದ್ದಾರೆ. ವಿಶೇಷ ರೈಲುಗಳ ಚಾಲನೆಯ ಕುರಿತು ಈಟಿವಿ ಭಾರತ್ ಪ್ರಶ್ನೆಗೆ ಉತ್ತರಿಸಿದ ಅವರು,"ಈಗ, ತುರ್ತು ಪರಿಸ್ಥಿತಿ ಇದ್ದಾಗ ಅಧಿಕಾರಶಾಹಿ ಮಿತಿಗಳು ಪ್ರಾರಂಭವಾಗಿವೆ. ಇತರ ಸಾರಿಗೆ ಸೌಲಭ್ಯವನ್ನು ಪ್ರಾರಂಭಿಸಲು ಪಿಎಂ ಮೋದಿಯವರ ಅನುಮತಿ ಮಾತ್ರ ಬೇಕಾಗುತ್ತದೆ. ಆದ್ದರಿಂದ ವಿಳಂಬಕ್ಕೆ ಮುಖ್ಯ ಕಾರಣ ಏನು, ತಪ್ಪಿಸುವ ತಂತ್ರ ಮತ್ತು ಜವಾಬ್ದಾರಿಯನ್ನು ಬದಲಾಯಿಸುವುದನ್ನು ಅನುಸರಿಸಲಾಗುತ್ತಿದೆ. ಇದು ಸಂಪೂರ್ಣ ಬೂಟಾಟಿಕೆ ಮತ್ತು ವಿರೋಧಾಭಾಸವಾಗಿದೆ ಎಂದು ಕೇಂದ್ರ ನಿಲುವನ್ನು ಕಠಿಣ ಪದಗಳಲ್ಲಿ ಟೀಕಿಸಿದ್ದಾರೆ.