ETV Bharat / bharat

ಬೆಳಕಿನ ಕಿರಣಗಳಿಗೆ ತಂದೆಯ ಕಣ್ಣುಗಳು ಪ್ರತಿಕ್ರಿಯಿಸಿವೆ: ಪ್ರಣಬ್ ಪುತ್ರಿ ಶರ್ಮಿಸ್ತಾ ಮುಖರ್ಜಿ - ಪ್ರಣಬ್​ ಮುಖರ್ಜಿ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿಲ್ಲ

ತೀವ್ರ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಸೇನೆಯ ರಿಸರ್ಚ್ ಆ್ಯಂಡ್ ರೆಫೆರೆಲ್ (ಆರ್ ಆ್ಯಂಡ್ ಆರ್) ಆಸ್ಪತ್ರೆಗೆ ಕೆಲ ದಿನಗಳ ಹಿಂದೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಅವರ ಆರೋಗ್ಯದಲ್ಲಿ ಕೊಂಚ ಮಟ್ಟಿನ ಚೇತರಿಕೆ ಕಂಡಿದೆ ಎಂದು ಪುತ್ರಿ ಶರ್ಮಿಸ್ತಾ ಮುಖರ್ಜಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Pranab Mukherjee
ಪ್ರಣಬ್​ ಮುಖರ್ಜಿ
author img

By

Published : Aug 14, 2020, 3:50 PM IST

ನವದೆಹಲಿ: ತಮ್ಮ ತಂದೆಯ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ನಿಜ. ಆದ್ರೆ, ಸಂಪೂರ್ಣವಾಗಿ ಹದಗೆಟ್ಟಿಲ್ಲ ಎಂದು ಪುತ್ರಿ ಶರ್ಮಿಸ್ತಾ ಮುಖರ್ಜಿ ಇಂದು ಬೆಳಗ್ಗೆ ತಿಳಿಸಿದ್ದಾರೆ.

ಮಾಜಿ ರಾಷ್ಟ್ರಪತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಆಸ್ಪತ್ರೆಗೆ ದಾಖಲಾದ ದಿನಕ್ಕೆ ಹೋಲಿಸಿದರೆ ಇಂದು ಅವರು ಕಣ್ಣುಗಳನ್ನು ಬಿಟ್ಟು ಪ್ರತಿಕ್ರಿಯಿಸುತ್ತಿದ್ದಾರೆ. ಇದರಿಂದಾಗಿ ನನ್ನ ತಂದೆಯ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಖಂಡಿದೆ ಎಂದು ಶರ್ಮಿಸ್ತಾ ಹೇಳಿದ್ದಾರೆ.

  • Without getting into medical jargons, whatever I could understand from last two days is that though my dads’ condition continues remain very critical, it hasn’t worsened. There’s little improvement in his eyes’ reaction to light.

    तमसो मा ज्योतिर्गमय🙏

    — Sharmistha Mukherjee (@Sharmistha_GK) August 14, 2020 " class="align-text-top noRightClick twitterSection" data=" ">

ಕಳೆದೆರಡು ದಿನಗಳಿಂದ ನಾನು ತಿಳಿದಿರುವ ಸಂಗತಿಯೆಂದರೆ, ನನ್ನ ತಂದೆಯ ಸ್ಥಿತಿ ತುಂಬಾ ಗಂಭೀರವಾಗಿದ್ದರೂ ಸಹ ಅದು ಸಂಪೂರ್ಣವಾಗಿ ಹದಗೆಟ್ಟಿಲ್ಲ. ಕಣ್ಣು ಬಿಡಲಾರದ ಸ್ಥಿತಿಯಲ್ಲಿದ್ದವರು, ಇಂದು ಬೆಳಕಿನ ಕಿರಣಕ್ಕೆ ಅವರ ಕಣ್ಣುಗಳು ಪ್ರತಿಕ್ರಿಯಿಸಿವೆ. ಆರೋಗ್ಯದಲ್ಲಿ ಸುಧಾರಣೆಯಾಗಿದೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

  • Rumours about my father is false. Request, esp’ly to media, NOT to call me as I need to keep my phone free for any updates from the hospital🙏

    — Sharmistha Mukherjee (@Sharmistha_GK) August 13, 2020 " class="align-text-top noRightClick twitterSection" data=" ">

ಕಷ್ಟದ ಸಮಯದಲ್ಲಿ ನಮ್ಮೊಂದಿಗೆ ನಿಂತಿದ್ದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ತಂದೆಯ ಆರೋಗ್ಯಕ್ಕಾಗಿ ನಿಮ್ಮ ಪ್ರಾರ್ಥನೆಯನ್ನು ಮುಂದುವರಿಸಲು ವಿನಂತಿಸುತ್ತೇನೆ. ದೇವರು ನಮ್ಮೆಲ್ಲರನ್ನೂ ಆಶೀರ್ವದಿಸಲಿ ಎಂದು ಅವರು ಬರೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.