ಮಧ್ಯಪ್ರದೇಶ: ಸರ್ದಾರ್ ಸರೋವರ್ ಅಣೆಕಟ್ಟು ಯೋಜನೆಯಿಂದ ನಿರ್ವಸಿತರಾದವರಿಗೆ ಪುನರ್ವಸತಿಗಾಗಿ ಕಳೆದ ಒಂಬತ್ತು ದಿನಗಳಿಂದ ಉಪವಾಸ ನಡೆಸಿದ್ದ ನರ್ಮದಾ ಬಚಾವೊ ಆಂದೋಲನ್ (ಎನ್‌ಬಿಎ) ನಾಯಕಿ ಮೇಧಾ ಪಾಟ್ಕರ್ ಉಪವಾಸ ಅಂತ್ಯಗೊಳಿಸಿದ್ದಾರೆ. ಸರ್ದಾರ್ ಸರೋವರ್ ಆಣೆಕಟ್ಟಿನ ಎಲ್ಲ ಗೇಟು ಮುಚ್ಚಿ, ನೀರಿನ ಮಟ್ಟವನ್ನು 138.68 ಮೀಟರ್‌ಗೆ ಏರಿಸುವ ಗುಜರಾತ್ ಸರ್ಕಾರದ ಕ್ರಮವನ್ನು ವಿರೋಧಿಸಿ ಅವರು ಪ್ರತಿಭಟಿಸುತ್ತಿದ್ದರು.
ಆಣೆಕಟ್ಟು ಯೋಜನೆಯಿಂದ ಸ್ಥಳಾಂತರಗೊಂಡವರ ಪುನರ್ವಸತಿ ಕೋರಿ ಕಳೆದ ಒಂಬತ್ತು ದಿನಗಳಿಂದ ಉಪವಾಸ ಪ್ರತಿಭಟನೆ ನಡೆಸುತ್ತಿದ್ದರು. ಪಾಟ್ಕರ್ ಅವರ ಆರೋಗ್ಯ ಹದಗೆಟ್ಟಿದೆ ಎಂದು ಅವರ ಸಹ ಪ್ರತಿಭಟನಾಕಾರರು ಭಾನುವಾರ ಹೇಳಿಕೆ ನೀಡಿದ್ದರು.
ಅವರ ಆರೋಗ್ಯ ಸ್ಥಿತಿಯನ್ನು ಖಚಿತಪಡಿಸಲು ಸಾಧ್ಯವಿಲ್ಲ, ವೈದ್ಯಕೀಯ ತಂಡವನ್ನು ಪರೀಕ್ಷಿಸಲು ಅವರು ಅನುಮತಿ ನೀಡದ ಕಾರಣ ಆರೋಗ್ಯದ ಸ್ಥಿತಿ ಬಗ್ಗೆ ನಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಅಮಿತ್ ತೋಮರ್ ತಿಳಿಸಿದ್ದಾರೆ.ಮೇಧಾ ಪಾಟ್ಕರ್ ಪ್ರತಿಭಟನೆ ನಡೆಸುತ್ತಿರುವ ಪ್ರದೇಶವು ಸರ್ದಾರ್ ಸರೋವರ್ ಅಣೆಕಟ್ಟಿನ ಜಲಾನಯನ ಪ್ರದೇಶದ ಭಾಗವಾಗಿದೆ.