ETV Bharat / bharat

ಜೆಎನ್‌ಯು: ಪುಂಖಾನುಪುಂಖ ಆಕ್ರೋಶ, ಮತ್ತೀಗ ಈ ಬಗೆಯ ಹಿಂಸೆ ! - hassle in JNU

ಜೆಎನ್​ಯುನಲ್ಲಿ ನಡೆದ ರಕ್ತಸಿಕ್ತ ದೃಶ್ಯಗಳು, ಕಿರುಚಾಟ ಕ್ಯಾಮೆರಾಗಳಲ್ಲಿ ಸೆರೆಯಾದವು. ಮಾಧ್ಯಮ ಜಾಲಗಳು ಈ ದೃಶ್ಯಗಳನ್ನು ದೇಶ ಮಾತ್ರವಲ್ಲ ಪ್ರಪಂಚದ ಉದ್ದಗಲಕ್ಕೂ ಪ್ರಸಾರ ಮಾಡಿದವು. ಇಂತಹ ಆಘಾತಕಾರಿ ಘಟನೆಗಳು ಮೋದಿ ಸರ್ಕಾರದ ಜನಪ್ರಿಯವಲ್ಲದ ನಿರ್ಧಾರಗಳ ವಿರುದ್ಧ ನಡೆಯುತ್ತಿರುವ ಚಳವಳಿಗೆ ದೊಡ್ಡ ಮೊತ್ತದ ಪ್ರೇರಣೆ ಒದಗಿಸಿವೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, Complete details of JNU issue
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ
author img

By

Published : Jan 10, 2020, 1:10 PM IST

ವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಕಳೆಗುಂದಲು ಆರಂಭಿಸಿದೆ. ಕೆಲ ದಿನಗಳಿಂದ ನಡೆಯುತ್ತಿದ್ದ ವಿದ್ಯಾರ್ಥಿ ಸಂಘರ್ಷದ ಪ್ರಕರಣಗಳ ಹೊರತಾಗಿಯೂ ಶ್ರೇಷ್ಠ ಶೈಕ್ಷಣಿಕ ಮಾನದಂಡ ಮತ್ತು ವಿದ್ಯಾರ್ಥಿ ಒಕ್ಕೂಟಗಳ ಚುನಾವಣೆಯಿಂದ ಮನ್ನಣೆ ಗಳಿಸಿದ್ದ ವಿಶ್ವವಿದ್ಯಾಲಯ 2020ರ ಜನವರಿ 5ರಂದು ಘನಘೋರ ದುಷ್ಕೃತ್ಯಗಳ ತಾಣವಾಗಿ ಮಾರ್ಪಟ್ಟಿತು.

ರಕ್ತಸಿಕ್ತ ದೃಶ್ಯಗಳು, ಕಿರುಚಾಟ ಕ್ಯಾಮೆರಾಗಳಲ್ಲಿ ಸೆರೆಯಾದವು. ಮಾಧ್ಯಮ ಜಾಲಗಳು ಈ ದೃಶ್ಯಗಳನ್ನು ದೇಶ ಮಾತ್ರವಲ್ಲ ಪ್ರಪಂಚದ ಉದ್ದಗಲಕ್ಕೂ ಪ್ರಸಾರ ಮಾಡಿದವು. ಇಂತಹ ಆಘಾತಕಾರಿ ಘಟನೆಗಳು ಮೋದಿ ಸರ್ಕಾರದ ಜನಪ್ರಿಯವಲ್ಲದ ನಿರ್ಧಾರಗಳ ವಿರುದ್ಧ ನಡೆಯುತ್ತಿರುವ ಚಳವಳಿಗೆ ದೊಡ್ಡ ಮೊತ್ತದ ಪ್ರೇರಣೆ ಒದಗಿಸಿವೆ. ಬಾಲಿವುಡ್ ದಿಗ್ಗಜರು ಜೆಎನ್​ಯು ವಿದ್ಯಾರ್ಥಿ ಹೋರಾಟದ ಪರವಾಗಿ ನಿಂತಿದ್ದು ಅದರಲ್ಲಿಯೂ ನಟಿ ದೀಪಿಕಾ ಪಡುಕೋಣೆ ಖುದ್ದು ಪ್ರತಿಭಟನಾ ಸ್ಥಳಕ್ಕೆ ತೆರಳಿ ಗಾಯಾಳು ಆಗಿದ್ದ ಜೆಎನ್​ಯುಎಸ್ ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆ ಐಷಾ ಘೋಷ್ ಅವರನ್ನು ಭೇಟಿಯಾಗಿದ್ದು ಸ್ವಾಭಾವಿಕವಾಗಿ ಯಾವುದೇ ಸರ್ಕಾರಗಳನ್ನು ಕೆಣಕುವಂತೆ ಇದೆ. ಈಗಿನ ಸರ್ಕಾರ ಗಡುಸು ಸ್ವಭಾವದ್ದಾಗಿದ್ದು, ಹಿಂದಡಿ ಇಡುವ ಯಾವುದೇ ಲಕ್ಷಣಗಳು ತೋರುತ್ತಿಲ್ಲ.

Complete details of JNU issue
ಜೆಎನ್​ಯು ಪರ ಹೋರಾಟ

ಕೇವಲ ಮೂರು ವಾರಗಳ ಹಿಂದೆ ನಡೆದ ಜಾಮಿಯಾ ಹಿಂಸಾಚಾರದಲ್ಲಿ ಪೊಲೀಸರು ತೋರಿದ ಅಚಾತುರ್ಯ ಮತ್ತು ವ್ಯಗ್ರತೆ ಬಹುಬೇಗ ನೋಡುಗರ ಗಮನ ಸೆಳೆದಿತ್ತು. ಆದರೆ ಜೆಎನ್‌ಯುವಿನಲ್ಲಿ ಬಹುತೇಕ ಕಾಲೆಳೆಯುವ ರೀತಿಯ ಹಿಂಜರಿಕೆಯ ಅಂಶಗಳು ಕಾಣಿಸಿಕೊಂಡವು. ಎರಡೂ ಪ್ರಕರಣಗಳ ವಿರೋಧಾಭಾಸ ಗಮನಿಸಿ; ಅಲ್ಲಿ ಕ್ಯಾಂಪಸ್ ತೊರೆಯುವಂತೆ ಜಾಮಿಯಾ ವಿದ್ಯಾರ್ಥಿಗಳು ಪಟ್ಟುಹಿಡಿದಿದ್ದರು. ಆದರೆ ಜೆಎನ್‌ಯು ಹಿಂಸಾಚಾರದಲ್ಲಿ ಮುಖವಾಡ ತೊಟ್ಟ ಹೊರಗಿನವರು ಕ್ಯಾಂಪಸ್ ಹೊಕ್ಕು ಅಲ್ಲಿಂದ ಆಚೆ ಬಂದಿದ್ದರು.

ಜೆಎನ್​ಯು ವಿಚಾರಕ್ಕೆ ಬಂದಾಗ ಪ್ರಸ್ತುತ ಘಟನಾವಳಿಗಳು ಬೆಂಬಿಡದೆ ಕಾಡಲಿವೆ ಎನಿಸುತ್ತದೆ. ಹಿಂಸಾಚಾರ ನಡೆಯುತ್ತಿರುವಾಗ ವಿಶ್ವವಿದ್ಯಾಲಯದ ಆವರಣದ ಹೊರಗೆ ಸ್ವರಾಜ್ ಅಭಿಯಾನದ ಯೋಗೇಂದ್ರ ಯಾದವ್ ಹಲ್ಲೆಗೆ ಒಳಗಾದರು. ಇದು ಜೆಎನ್‌ಯು ವಿರುದ್ಧ ಬೌದ್ಧಿಕ ದಾಳಿ ನಡೆದಿರುವುದರ ಸೂಚಕ. ಬಳಿಕ ದೇಶದ್ರೋಹದ ಹೆಸರಿನಲ್ಲಿ ನಡೆದ ರಾಜಕೀಯ ದಾಳಿಗಳು ವಿಶ್ವವಿದ್ಯಾಲಯಕ್ಕೆ ವ್ಯವಸ್ಥಿತವಾಗಿ ರಾಕ್ಷಸ ರೂಪ ನೀಡಿದವು. ಈಗ ಘರ್ಷಣೆ ಸಂಪೂರ್ಣ ದೈಹಿಕ ಹಿಂಸೆಯ ಮಟ್ಟ ತಲುಪಿದೆ. ಮೊದಲ ದಾಳಿ ನಡೆದದ್ದು ಬಿಜೆಪಿ ಜೊತೆ ಗುರುತಿಸಿಕೊಂಡು ಆಗಿನ್ನೂ ಪಕ್ಷದಲ್ಲಿದ್ದ ಸ್ವಪನ್ ದಾಸ್ ಗುಪ್ತ ಮತ್ತು ಚಂದನ್ ಮಿತ್ರರಂತಹ ಮೆದುವಾಗಿ ಇಂಗ್ಲಿಷ್​ನಲ್ಲಿ ಮಾತನಾಡುವ ಬುದ್ಧಿಜೀವಿಗಳ ರೂಪದಲ್ಲಿ.

Complete details of JNU issue
ಜೆಎನ್​ಯು ಪರ ಹೋರಾಟ

ಜೆಎನ್‌ಯುನ ಎಡಪಂಥೀಯರು, ಬಲಪಂಥೀಯ ಬುದ್ಧಿಜೀವಿಗಳನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ ಮತ್ತು ಅವರು ಬೆಳವಣಿಗೆ ಸಹಿಸುವುದಿಲ್ಲ ಎಂಬುದು ಅವರ ಸಾಮಾನ್ಯ ದೂರಾಗಿತ್ತು. ಈ ವಾದದಲ್ಲಿ ಹುರಳು ಇದೆ ಎಂದೇ ಒಂದು ಕ್ಷಣ ಒಪ್ಪಿಕೊಳ್ಳೋಣ. ಆದರೆ, ರಾಷ್ಟ್ರೀಯತೆ, ಮುಕ್ತ ಮಾರುಕಟ್ಟೆ , ಹವಾಮಾನ ಬದಲಾವಣೆ ಹಾಗೂ ಮೋದಿಯವರಂತಹ ಪ್ರಬಲ ನಾಯಕರ ಸದ್ಗುಣಗಳ ಬಗ್ಗೆ ಮಾತನಾಡಿ ಜೆಎನ್‌ಯುವಿನ ಎಡ ಉದಾರವಾದಿಗಳ ಗಂಭೀರ ಅಕಾಡೆಮಿಕ್ ವಾದ ಮತ್ತು ಸವಾಲಿಗೆ ಸಡ್ಡು ಹೊಡೆಯಬಲ್ಲ ಬಲಪಂಥೀಯ ಪ್ರಮುಖ, ವಿಶ್ವಾಸಾರ್ಹ ಬುದ್ಧಿಜೀವಿಗಳು ಎಲ್ಲಿ ಇದ್ದಾರೆ? ಇದೆಲ್ಲದರ ನಡುವೆ ಬಿಜೆಪಿಯ ಒಳಗೇ ಬೌದ್ಧಿಕತೆಯ ಸಮಸ್ಯೆ ಇದೆ ಎಂದು ತೋರುತ್ತದೆ. ಇದು ಬಹುಶಃ ಜೆಎನ್‌ಯು ಮೇಲೆ ಮುಂದಿನ ಹಂತದ ರಾಜಕೀಯ ದಾಳಿ ನಡೆಯಲು ಕಾರಣ ಆಗಬಹುದಾಗಿದ್ದು ಒಂದೆಡೆ ಜೆಎನ್‌ಯುವಿನ ಬೌದ್ಧಿಕತೆಯನ್ನು ಅಪಹಾಸ್ಯ ಮಾಡಲಾಗುತ್ತಿದೆ ಮತ್ತೊಂದೆಡೆ ಇಲ್ಲಿ ಗಂಭೀರ ಬೋಧನೆ ಹಾಗೂ ಕಲಿಕೆ ನಡೆಯುತ್ತಿಲ್ಲ ಎಂಬಂತಹ ಸಂಪೂರ್ಣ ಹಾಸ್ಯಾಸ್ಪದ ಹೇಳಿಕೆಗಳನ್ನು ಏಕಕಾಲಕ್ಕೆ ನೀಡಲಾಗುತ್ತಿದೆ.

Complete details of JNU issue
ಮುಸುಕುದಾರಿಗಳಿಂದ ನಡೆದ ದೊಡ್ಡ ದಾಂಧಲೆ

ಪ್ರಸ್ತುತ ಆಡಳಿತಕ್ಕೆ ಜೆಎನ್‌ಯು ತೀವ್ರ ವಿರೋದ ವ್ಯಕ್ತಪಡಿಸುತ್ತಿದೆ ಎಂದರೆ ಅದಕ್ಕೂ ವಿಶ್ವವಿದ್ಯಾಲಯಕ್ಕೂ ಏನೋ ನಂಟು ಇರಬಹುದು. ಹಾಲಿ ಉಪಕುಲಪತಿ ಪ್ರೊ. ಮಮಿದಾಲ ಜಗದೀಶ್ ಕುಮಾರ್ ಅವರು ಅಧಿಕಾರವಹಿಸಿಕೊಂಡ ಕಳೆದ ನಾಲ್ಕು ವರ್ಷಗಳಿಂದ ಜೆಎನ್‌ಯು ಮೇಲೆ ನಿರಂತರ ದಾಳಿ ನಡೆಯುತ್ತಿದ್ದು, ಈಗ ಅದು ಘೋರ ಸ್ಥಿತಿ ತಲುಪಿದೆ. ಎಂದಿನಂತೆ ನಡೆಯಬೇಕಿದ್ದ ಶೈಕ್ಷಣಿಕ ಚಟುವಟಿಕೆಗಳು ಕಳೆದ 70 ದಿನಗಳಿಂದ ಸ್ಥಗಿತಗೊಂಡಿವೆ. ಬಿಕ್ಕಟ್ಟು ಕೊನೆಗೊಳಿಸಲು ಉಪಕುಲಪತಿಗಳು ಯಾವುದೇ ಗಂಭೀರ ಪ್ರಯತ್ನ ಮಾಡಿಲ್ಲ. ಸ್ವತಃ ಜೆಎನ್‌ಯುವಿನ ಹಳೆ ವಿದ್ಯಾರ್ಥಿ ಹಾಗೂ ಉನ್ನತ ಶಿಕ್ಷಣ ಕಾರ್ಯದರ್ಶಿ ಆರ್. ಸುಬ್ರಹ್ಮಣ್ಯಂ ಅವರ ಪ್ರಯತ್ನಗಳ ಮೂಲಕ ಡಿಸೆಂಬರ್‌ನಲ್ಲಿ ಸಮಸ್ಯೆ ಬಗೆಹರಿಸುವ ಸಾಧ್ಯತೆಯೊಂದು ಇತ್ತು. ಆದರೆ, ಅವರನ್ನು ಹಠಾತ್ತಾಗಿ ಎತ್ತಂಗಡಿ ಮಾಡಲಾಯಿತು.

ಅಧಿಕಾರದಲ್ಲಿ ಮುಂದುವರಿಯುವ ಯಾವುದೇ ನೈತಿಕತೆ ಜೆಎನ್‌ಯು ಉಪಕುಲಪತಿ ಅವರಿಗೆ ಇಲ್ಲ. ಕ್ಯಾಂಪಸ್‌ ಹಿಂಸಾಚಾರದಿಂದಾಗಿ ಅವರ ವಿಶ್ವಾಸಾರ್ಹತೆ ಕುಸಿದಿದ್ದರೂ ಅಧಿಕಾರದಲ್ಲಿ ಮುಂದುವರಿದಿರುವುದು ಎಂತಹವರಲ್ಲೂ ಅಚ್ಚರಿ ಮೂಡಿಸುತ್ತದೆ. ಕ್ಯಾಂಪಸ್‌ನಲ್ಲಿ ಹಿಂಸಾಚಾರ ಸಂಭವಿಸಿದ ಬಳಿಕ ಎರಡು ದಿನಗಳ ಕಾಲ ಅವರು ತುಟಿ ಬಿಚ್ಚದೆ ಇದ್ದುದ್ದಕ್ಕೆ ಭಾರಿ ಟೀಕೆ ವ್ಯಕ್ತವಾಗಿದೆ. ದೀಪಿಕಾ ಪಡುಕೋಣೆ ಅವರು ಕ್ಯಾಂಪಸ್‌ಗೆ ಭೇಟಿ ನೀಡಿದಾಗ ಕುಲಪತಿಗಳ ‘ಶ್ರೇಷ್ಠ ವ್ಯಕ್ತಿಗಳು’ ಆಕೆಯನ್ನು ಅವಹೇಳನ ಮಾಡಿದ ರೀತಿ ನೋಡಿದರೆ ಕುಲಪತಿಗಳು ಮತ್ತು ಅವರ ಆದ್ಯತೆ ಎಷ್ಟು ಕೆಳಮಟ್ಟದ್ದು ಎಂದು ತಿಳಿಯುತ್ತದೆ. ಅವರಿಂದ ಹೆಚ್ಚಿನದೇನನ್ನಾದರೂ ನಿರೀಕ್ಷಿಸುವುದು ಇದ್ದರೆ ಅದು ನೈತಿಕತೆ ಮೇಲೆ ಅವರು ನೀಡುವ ರಾಜೀನಾಮೆಯನ್ನು ಮಾತ್ರ.

Complete details of JNU issue
ಹಿಂಸಾಚಾರ

ವಿರೋಧಿಗಳ ದೃಷ್ಟಿಯಲ್ಲಿ ಉಪಕುಲಪತಿಗೆ ವಿಶ್ವವಿದ್ಯಾಲಯ ನಡೆಸುವ ಕನಿಷ್ಠ ಆಸಕ್ತಿ ಇಲ್ಲ. ಮಾತ್ರವಲ್ಲ, ಅದನ್ನು ನೆಲಕಚ್ಚುವಂತೆ ಮಾಡುತ್ತಿದ್ದಾರೆ.ಆದರೆ, ಅವರನ್ನು ಬೆಂಬಲಿಸುವವರ ಪ್ರಕಾರ ಜೆಎನ್‌ಯು ಕೊಳೆ ತೊಳೆಯುವಲ್ಲಿ ಆತ ಮಗ್ನರಾಗಿದ್ದಾರೆ. ಮಾಧ್ಯಮಗಳೇ ಹೇಳುವಂತೆ ಕುಲಪತಿಯವರ ಮೂಸೆಯಲ್ಲಿ ನಡೆದ ಬೋಧಕ ವರ್ಗದ ನೇಮಕಾತಿಗಳ ಗುಣಮಟ್ಟ ತುಂಬಾ ಆಘಾತಕಾರಿ ಆಗಿದೆ ಎಂಬುದು ಅಚ್ಚರಿಯ ಸಂಗತಿ. ಕುಲಪತಿಗಳ ಇದುವರೆಗಿನ ಕ್ರಮಗಳಲ್ಲೇ ಅತ್ಯಂತ ನಿಕೃಷ್ಠವಾದುದು ಎಂದರೆ, ವಿವಿ ಪ್ರಕ್ಷುಬ್ಧಗೊಂಡಿರುವುದರಿಂದ ವಿದ್ಯಾರ್ಥಿಗಳಿಗೆ ಪ್ರಶ್ನೆಗಳಿರುವ ಇಮೇಲ್‌ ಕಳುಹಿಸಿ ಹಿಂದಿನ ಸೆಮಿಸ್ಟರ್‌ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಸೂಚಿಸಿದ್ದು. ನಂತರ ಉತ್ತರಗಳನ್ನು ಇಮೇಲ್ ಮತ್ತು ವಾಟ್ಸಾಪ್ ಮೂಲಕ ವಿದ್ಯಾರ್ಥಿಗಳಿಂದ ಪಡೆದುಕೊಳ್ಳುವ ಸಾಧ್ಯತೆ ಇತ್ತು. ಅದೃಷ್ಟವಶಾತ್, ಹೆಚ್ಚಿನ ಸಂಖ್ಯೆಯ ಬೋಧಕವರ್ಗ ಈ ಬಗೆಯ ಪ್ರಹಸನವನ್ನು ಖಂಡಿಸಿತು.

ಈ ದೀರ್ಘಾವಧಿ ದುಸ್ಸಾಹಸದ ಕೆಟ್ಟ ಭಾಗ ಎಂದರೆ ‘ ತುಕ್ಡೆ- ತುಕ್ಡೆ ಗ್ಯಾಂಗ್ ’ ಎಂಬ ಪದ ಪ್ರಯೋಗ ಮಾಡಿದ್ದು. ಬೊಬ್ಬಿಡುವ, ಹಾರಾಡುವ ಟಿವಿ ನಿರೂಪಕ ಅರ್ನಾಬ್ ಗೋಸ್ವಾಮಿ ಬಾಯಿಯಲ್ಲಿ ಜೆಎನ್‌ಯು ಜೊತೆ ನೇರ ಸಂಬಂಧ ಕಲ್ಪಿಸುವ ಈ ಪದ ಹರಿಯಿತು. ಆ ಮೂಲಕ ವಿಶ್ವವಿದ್ಯಾಲಯದ ವಿರುದ್ಧ ವಿವೇಚನಾ ರಹಿತವಾಗಿ ದ್ವೇಷದ ಅಭಿಯಾನ ನಡೆಸಲು ಸಹಕಾರಿ ಆಯಿತು. ಜೆಎನ್‌ಯು ಘನತೆಗೆ ಧಕ್ಕೆ ತರುವ ಇಂತಹ ಆಧಾರರಹಿತ ಅಪಪ್ರಚಾರವನ್ನು ಪ್ರಶ್ನಿಸುವ ಗೋಜಿಗೆ ವಿವಿ ಕುಲಪತಿ ಎಂದಿಗೂ ಹೋಗಿಲಿಲ್ಲ. ಇನ್ನು ಯಾವ ವಿಶ್ವವಿದ್ಯಾಲಯದ ಕುಲಪತಿ ಅದನ್ನು ಮಾಡಬೇಕು?

ಅಮೀರ್ ಅಲಿ
( ರಾಜಕೀಯ ಅಧ್ಯಯನ ಕೇಂದ್ರ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ನವದೆಹಲಿ)

Intro:Body:

ಜೆಎನ್‌ಯು: ಪುಂಖಾನುಪುಂಖ ಆಕ್ರೋಶ, ಮತ್ತೀಗ ಈ ಬಗೆಯ ಹಿಂಸೆ . . .

  •          

    ಅಮೀರ್ ಅಲಿ

( ರಾಜಕೀಯ ಅಧ್ಯಯನ ಕೇಂದ್ರ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ನವದೆಹಲಿ) .

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ( ಜೆಎನ್‌ಯು ) ಕಳೆಗುಂದಲು ಆರಂಭಿಸಿದೆ. ಕೆಲ ದಿನಗಳಿಂದ ನಡೆಯುತ್ತಿದ್ದ ವಿದ್ಯಾರ್ಥಿ ಸಂಘರ್ಷದ ಪ್ರಕರಣಗಳ ಹೊರತಾಗಿಯೂ ಶ್ರೇಷ್ಠ ಶೈಕ್ಷಣಿಕ ಮಾನದಂಡ ಮತ್ತು ವಿದ್ಯಾರ್ಥಿ ಒಕ್ಕೂಟಗಳ ಚುನಾವಣೆಯಿಂದ ಮನ್ನಣೆ ಗಳಿಸಿದ್ದ ವಿಶ್ವವಿದ್ಯಾಲಯ 2020ರ ಜನವರಿ 5ರಂದು ಘನಘೋರ ದುಷ್ಕೃತ್ಯಗಳ ತಾಣವಾಗಿ ಮಾರ್ಪಟ್ಟಿತು. ರಕ್ತಸಿಕ್ತ ದೃಶ್ಯಗಳು, ಕಿರುಚಾಟ ಕ್ಯಾಮೆರಾಗಳಲ್ಲಿ ಸೆರೆಯಾದವು. ಮಾಧ್ಯಮ ಜಾಲಗಳು ಈ ದೃಶ್ಯಗಳನ್ನು ದೇಶ ಮಾತ್ರವಲ್ಲ ಪ್ರಪಂಚದ ಉದ್ದಗಲಕ್ಕೂ ಪ್ರಸಾರ ಮಾಡಿದವು. ಇಂತಹ ಆಘಾತಕಾರಿ ಘಟನೆಗಳು ಮೋದಿ ಸರ್ಕಾರದ ಜನಪ್ರಿಯವಲ್ಲದ ನಿರ್ಧಾರಗಳ ವಿರುದ್ಧ ನಡೆಯುತ್ತಿರುವ ಚಳವಳಿಗೆ ದೊಡ್ಡ ಮೊತ್ತದ ಪ್ರೇರಣೆ ಒದಗಿಸಿವೆ. ಬಾಲಿವುಡ್ ದಿಗ್ಗಜರು ಜೆಎನ್ ಯು ವಿದ್ಯಾರ್ಥಿ ಹೋರಾಟದ ಪರವಾಗಿ ನಿಂತಿದ್ದು ಅದರಲ್ಲಿಯೂ ನಟಿ ದೀಪಿಕಾ ಪಡುಕೋಣೆ ಖುದ್ದು ಪ್ರತಿಭಟನಾ ಸ್ಥಳಕ್ಕೆ ತೆರಳಿ ಗಾಯಾಳು ಆಗಿದ್ದ ಜೆಎನ್ ಯುಎಸ್ ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆ ಐಷಾ ಘೋಷ್ ಅವರನ್ನು ಭೇಟಿಯಾಗಿದ್ದು ಸ್ವಾಭಾವಿಕವಾಗಿ ಯಾವುದೇ ಸರ್ಕಾರಗಳನ್ನು ಕೆಣಕುವಂತೆ ಇದೆ. ಈಗಿನ ಸರ್ಕಾರ ಗಡುಸು ಸ್ವಭಾವದ್ದಾಗಿದ್ದು ಹಿಂದಡಿ ಇಡುವ ಯಾವುದೇ ಲಕ್ಷಣಗಳು ತೋರುತ್ತಿಲ್ಲ.  

ಕೇವಲ ಮೂರು ವಾರಗಳ ಹಿಂದೆ ನಡೆದ ಜಾಮಿಯಾ ಹಿಂಸಾಚಾರದಲ್ಲಿ ಪೊಲೀಸರು ತೋರಿದ ಅಚಾತುರ್ಯ ಮತ್ತು ವ್ಯಗ್ರತೆ ಬಹುಬೇಗ ನೋಡುಗರ ಗಮನ ಸೆಳೆದಿತ್ತು. ಆದರೆ ಜೆಎನ್‌ಯುವಿನಲ್ಲಿ ಬಹುತೇಕ ಕಾಲೆಳೆಯುವ ರೀತಿಯ ಹಿಂಜರಿಕೆಯ ಅಂಶಗಳು ಕಾಣಿಸಿಕೊಂಡವು. ಎರಡೂ ಪ್ರಕರಣಗಳ ವಿರೋಧಾಭಾಸ ಗಮನಿಸಿ: ಅಲ್ಲಿ ಕ್ಯಾಂಪಸ್ ತೊರೆಯುವಂತೆ ಜಾಮಿಯಾ ವಿದ್ಯಾರ್ಥಿಗಳು ಪಟ್ಟುಹಿಡಿದಿದ್ದರು. ಆದರೆ ಜೆಎನ್‌ಯು ಹಿಂಸಾಚಾರದಲ್ಲಿ ಮುಖವಾಡ ತೊಟ್ಟ ಹೊರಗಿನವರು ತಮ್ಮ ಕೂದಲು ಕೂಡ ಕೊಂಕದ ರೀತಿಯಲ್ಲಿ ಕ್ಯಾಂಪಸ್ ಹೊಕ್ಕು ಅಲ್ಲಿಂದ ಆಚೆ ಬಂದಿದ್ದರು.  

ಜೆಎನ್ ಯು ವಿಚಾರಕ್ಕೆ ಬಂದಾಗ ಪ್ರಸ್ತುತ ಘಟನಾವಳಿಗಳು ಬೆಂಬಿಡದೆ ಕಾಡಲಿವೆ ಎನಿಸುತ್ತದೆ. ಹಿಂಸಾಚಾರ ನಡೆಯುತ್ತಿರುವಾಗ ವಿಶ್ವವಿದ್ಯಾಲಯದ ಆವರಣದ ಹೊರಗೆ ಸ್ವರಾಜ್ ಅಭಿಯಾನದ ಯೋಗೇಂದ್ರ ಯಾದವ್ ಹಲ್ಲೆಗೆ ಒಳಗಾದರು. ಇದು ಜೆಎನ್‌ಯು ವಿರುದ್ಧ ಬೌದ್ಧಿಕ ದಾಳಿ ನಡೆದಿರುವುದರ ಸೂಚಕ. ಬಳಿಕ ದೇಶದ್ರೋಹದ ಹೆಸರಿನಲ್ಲಿ ನಡೆದ ರಾಜಕೀಯ ದಾಳಿಗಳು ವಿಶ್ವವಿದ್ಯಾಲಯಕ್ಕೆ ವ್ಯವಸ್ಥಿತವಾಗಿ ರಾಕ್ಷಸ ರೂಪ ನೀಡಿದವು. ಈಗ ಘರ್ಷಣೆ ಸಂಪೂರ್ಣ ದೈಹಿಕ ಹಿಂಸೆಯ ಮಟ್ಟ ತಲುಪಿದೆ. ಮೊದಲ ದಾಳಿ ನಡೆದದ್ದು ಬಿಜೆಪಿ ಜೊತೆ ಗುರುತಿಸಿಕೊಂಡು ಆಗಿನ್ನೂ ಪಕ್ಷದಲ್ಲಿದ್ದ ಸ್ವಪನ್ ದಾಸ್ ಗುಪ್ತ ಮತ್ತು ಚಂದನ್ ಮಿತ್ರರಂತಹ ಮೆದುವಾಗಿ ಇಂಗ್ಲಿಷ್ನಲ್ಲಿ ಮಾತನಾಡುವ ಬುದ್ಧಿಜೀವಿಗಳ ರೂಪದಲ್ಲಿ. ಜೆಎನ್‌ಯುನ ಎಡಪಂಥೀಯರು, ಬಲಪಂಥೀಯ ಬುದ್ಧಿಜೀವಿಗಳನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ ಮತ್ತು ಅವರು ಬೆಳವಣಿಗೆ ಸಹಿಸುವುದಿಲ್ಲ ಎಂಬುದು ಅವರ ಸಾಮಾನ್ಯ ದೂರಾಗಿತ್ತು. ಈ ವಾದದಲ್ಲಿ ಹುರಳು ಇದೆ ಎಂದೇ ಒಂದು ಕ್ಷಣ ಒಪ್ಪಿಕೊಳ್ಳೋಣ. ಆದರೆ ರಾಷ್ಟ್ರೀಯತೆ, ಮುಕ್ತ ಮಾರುಕಟ್ಟೆ , ಹವಾಮಾನ ಬದಲಾವಣೆ ಹಾಗೂ ಶ್ರೀ ಮೋದಿಯವರಂತಹ ಪ್ರಬಲ ನಾಯಕರ ಸದ್ಗುಣಗಳ ಬಗ್ಗೆ ಮಾತನಾಡಿ ಜೆಎನ್‌ಯುವಿನ ಎಡ- ಉದಾರವಾದಿಗಳ ಗಂಭೀರ ಅಕಾಡೆಮಿಕ್ ವಾದ ಮತ್ತು ಸವಾಲಿಗೆ ಸಡ್ಡುಹೊಡೆಯಬಲ್ಲ ಬಲಪಂಥೀಯ ಪ್ರಮುಖ, ವಿಶ್ವಾಸಾರ್ಹ ಬುದ್ಧಿಜೀವಿಗಳು ಎಲ್ಲಿ ಇದ್ದಾರೆ? ಇದೆಲ್ಲದರ ನಡುವೆ ಬಿಜೆಪಿಯ ಒಳಗೇ ಬೌದ್ಧಿಕತೆಯ ಸಮಸ್ಯೆ ಇದೆ ಎಂದು ತೋರುತ್ತದೆ. ಇದು ಬಹುಶಃ ಜೆಎನ್‌ಯು ಮೇಲೆ ಮುಂದಿನ ಹಂತದ ರಾಜಕೀಯ ದಾಳಿ ನಡೆಯಲು ಕಾರಣ ಆಗಬಹುದಾಗಿದ್ದು ಒಂದೆಡೆ ಜೆಎನ್‌ಯುವಿನ ಬೌದ್ಧಿಕತೆಯನ್ನು ಅಪಹಾಸ್ಯ ಮಾಡಲಾಗುತ್ತಿದೆ ಮತ್ತೊಂದೆಡೆ ಇಲ್ಲಿ ಗಂಭೀರ ಬೋಧನೆ ಹಾಗೂ ಕಲಿಕೆ ನಡೆಯುತ್ತಿಲ್ಲ ಎಂಬಂತಹ ಸಂಪೂರ್ಣ ಹಾಸ್ಯಾಸ್ಪದ ಹೇಳಿಕೆಗಳನ್ನು ಏಕಕಾಲಕ್ಕೆ ನೀಡಲಾಗುತ್ತಿದೆ.

ಪ್ರಸ್ತುತ ಆಡಳಿತಕ್ಕೆ ಜೆಎನ್‌ಯು ತೀವ್ರ ವಿರೋದ ವ್ಯಕ್ತಪಡಿಸುತ್ತಿದೆ ಎಂದರೆ ಅದಕ್ಕೂ ವಿಶ್ವವಿದ್ಯಾಲಯಕ್ಕೂ ಏನೋ ನಂಟು ಇರಬಹುದು.  ಹಾಲಿ ಉಪಕುಲಪತಿ ಪ್ರೊ. ಮಮಿದಾಲ ಜಗದೀಶ್ ಕುಮಾರ್ ಅವರು ಅಧಿಕಾರವಹಿಸಿಕೊಂಡ ಕಳೆದ ನಾಲ್ಕು ವರ್ಷಗಳಿಂದ ಜೆಎನ್‌ಯು ಮೇಲೆ ನಿರಂತರ ದಾಳಿ ನಡೆಯುತ್ತಿದ್ದು ಈಗ ಅದು ಘೋರ ಸ್ಥಿತಿ ತಲುಪಿದೆ. ಎಂದಿನಂತೆ ನಡೆಯಬೇಕಿದ್ದ ಶೈಕ್ಷಣಿಕ ಚಟುವಟಿಕೆಗಳು ಕಳೆದ 70 ದಿನಗಳಿಂದ ಸ್ಥಗಿತಗೊಂಡಿವೆ ಮತ್ತು ಬಿಕ್ಕಟ್ಟು ಕೊನೆಗೊಳಿಸಲು ಉಪಕುಲಪತಿಗಳು ಯಾವುದೇ ಗಂಭೀರ ಪ್ರಯತ್ನ ಮಾಡಿಲ್ಲ. ಸ್ವತಃ ಜೆಎನ್‌ಯುವಿನ  ಹಳೆ ವಿದ್ಯಾರ್ಥಿ ಹಾಗೂ ಉನ್ನತ ಶಿಕ್ಷಣ ಕಾರ್ಯದರ್ಶಿ ಆರ್. ಸುಬ್ರಹ್ಮಣ್ಯಂ ಅವರ ಪ್ರಯತ್ನಗಳ ಮೂಲಕ ಡಿಸೆಂಬರ್‌ನಲ್ಲಿ ಸಮಸ್ಯೆ ಬಗೆಹರಿಸುವ ಸಾಧ್ಯತೆಯೊಂದು ಇತ್ತು. ಆದರೆ ಅವರನ್ನು ಹಠಾತ್ತಾಗಿ ಎತ್ತಂಗಡಿ ಮಾಡಲಾಯಿತು. 

ಅಧಿಕಾರದಲ್ಲಿ ಮುಂದುವರಿಯುವ ಯಾವುದೇ ನೈತಿಕತೆ ಜೆಎನ್‌ಯು ಉಪಕುಲಪತಿ ಅವರಿಗೆ ಇಲ್ಲ. ಕ್ಯಾಂಪಸ್‌ ಹಿಂಸಾಚಾರದಿಂದಾಗಿ ಅವರ ವಿಶ್ವಾಸಾರ್ಹತೆ ಕುಸಿದಿದ್ದರೂ ಅಧಿಕಾರದಲ್ಲಿ ಮುಂದುವರಿದಿರುವುದು ಎಂತಹವರಲ್ಲೂ ಅಚ್ಚರಿ ಮೂಡಿಸುತ್ತದೆ.  ಕ್ಯಾಂಪಸ್‌ನಲ್ಲಿ ಹಿಂಸಾಚಾರ ಸಂಭವಿಸಿದ ಬಳಿಕ ಎರಡು ದಿನಗಳ ಕಾಲ ಅವರು ತುಟಿ ಬಿಚ್ಚದೆ ಇದ್ದುದ್ದಕ್ಕೆ ಭಾರಿ ಟೀಕೆ ವ್ಯಕ್ತವಾಗಿದೆ. ದೀಪಿಕಾ ಪಡುಕೋಣೆ ಅವರು ಕ್ಯಾಂಪಸ್‌ಗೆ ಭೇಟಿ ನೀಡಿದಾಗ ಕುಲಪತಿಗಳ ‘ಶ್ರೇಷ್ಠ ವ್ಯಕ್ತಿಗಳು’ ಆಕೆಯನ್ನು ಅವಹೇಳನ ಮಾಡಿದ ರೀತಿ ನೋಡಿದರೆ ಕುಲಪತಿಗಳು ಮತ್ತು ಅವರ ಆದ್ಯತೆ ಎಷ್ಟು ಕೆಳಮಟ್ಟದ್ದು ಎಂದು ತಿಳಿಯುತ್ತದೆ. ಅವರಿಂದ ಹೆಚ್ಚಿನದೇನನ್ನಾದರೂ ನಿರೀಕ್ಷಿಸುವುದು ಇದ್ದರೆ ಅದು ನೈತಿಕತೆ ಮೇಲೆ ಅವರು ನೀಡುವ ರಾಜೀನಾಮೆಯನ್ನು ಮಾತ್ರ. 

ವಿರೋಧಿಗಳ ದೃಷ್ಟಿಯಲ್ಲಿ ಉಪಕುಲಪತಿಗೆ ವಿಶ್ವವಿದ್ಯಾಲಯ ನಡೆಸುವ ಕನಿಷ್ಠ ಆಸಕ್ತಿ ಇಲ್ಲ ಮಾತ್ರವಲ್ಲ, ಅದನ್ನು ನೆಲಕಚ್ಚುವಂತೆ ಮಾಡುತ್ತಿದ್ದಾರೆ.  ಆದರೆ ಅವರನ್ನು ಬೆಂಬಲಿಸುವವರ ಪ್ರಕಾರ ಜೆಎನ್‌ಯು ಕೊಳೆ ತೊಳೆಯುವಲ್ಲಿ ಆತ ಮಗ್ನರಾಗಿದ್ದಾರೆ. ಮಾಧ್ಯಮಗಳೇ ಹೇಳುವಂತೆ ಕುಲಪತಿಯವರ ಮೂಸೆಯಲ್ಲಿ ನಡೆದ ಬೋಧಕ ವರ್ಗದ ನೇಮಕಾತಿಗಳ ಗುಣಮಟ್ಟ ತುಂಬಾ ಆಘಾತಕಾರಿ ಆಗಿದೆ ಎಂಬುದು ಅಚ್ಚರಿಯ ಸಂಗತಿ.  ಕುಲಪತಿಗಳ ಇದುವರೆಗಿನ ಕ್ರಮಗಳಲ್ಲೇ ಅತ್ಯಂತ ನಿಕೃಷ್ಠವಾದುದು ಎಂದರೆ, ವಿವಿ ಪ್ರಕ್ಷುಬ್ಧಗೊಂಡಿರುವುದರಿಂದ ವಿದ್ಯಾರ್ಥಿಗಳಿಗೆ ಪ್ರಶ್ನೆಗಳಿರುವ ಇಮೇಲ್‌ ಕಳುಹಿಸಿ ಹಿಂದಿನ ಸೆಮಿಸ್ಟರ್‌ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಸೂಚಿಸಿದ್ದು. ನಂತರ ಉತ್ತರಗಳನ್ನು ಇಮೇಲ್ ಮತ್ತು ವಾಟ್ಸಾಪ್ ಮೂಲಕ ವಿದ್ಯಾರ್ಥಿಗಳಿಂದ ಪಡೆದುಕೊಳ್ಳುವ ಸಾಧ್ಯತೆ ಇತ್ತು. ಅದೃಷ್ಟವಶಾತ್, ಹೆಚ್ಚಿನ ಸಂಖ್ಯೆಯ ಬೋಧಕವರ್ಗ ಈ ಬಗೆಯ ಪ್ರಹಸನವನ್ನು ಖಂಡಿಸಿತು.

ಈ ದೀರ್ಘಾವಧಿ ದುಸ್ಸಾಹಸದ ಕೆಟ್ಟ ಭಾಗ ಎಂದರೆ ‘ ತುಕ್ಡೆ- ತುಕ್ಡೆ ಗ್ಯಾಂಗ್ ’ ಎಂಬ ಪದ ಪ್ರಯೋಗ ಮಾಡಿದ್ದು. ಬೊಬ್ಬಿಡುವ, ಹಾರಾಡುವ ಟಿವಿ ನಿರೂಪಕ ಅರ್ನಾಬ್ ಗೋಸ್ವಾಮಿ ಬಾಯಿಯಲ್ಲಿ ಜೆಎನ್‌ಯು ಜೊತೆ ನೇರ ಸಂಬಂಧ ಕಲ್ಪಿಸುವ ಈ ಪದ ಹರಿಯಿತು. ಆ ಮೂಲಕ ವಿಶ್ವವಿದ್ಯಾಲಯದ ವಿರುದ್ಧ ವಿವೇಚನಾ ರಹಿತವಾಗಿ ದ್ವೇಷದ ಅಭಿಯಾನ ನಡೆಸಲು ಸಹಕಾರಿ ಆಯಿತು. ಜೆಎನ್‌ಯು ಘನತೆಗೆ ಧಕ್ಕೆ ತರುವ ಇಂತಹ ಆಧಾರರಹಿತ ಅಪಪ್ರಚಾರವನ್ನು ಪ್ರಶ್ನಿಸುವ ಗೋಜಿಗೆ ವಿವಿ ಕುಲಪತಿ ಎಂದಿಗೂ ಹೋಗಿಲಿಲ್ಲ. ಇನ್ನು ಯಾವ ವಿಶ್ವವಿದ್ಯಾಲಯದ ಕುಲಪತಿ ಅದನ್ನು ಮಾಡಬೇಕು?

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.