ETV Bharat / bharat

ಸಂದರ್ಶನ: ಕೊರೊನಾ ಲಾಕ್​ಡೌನ್​​​​ನಲ್ಲಿ​ ಮಕ್ಕಳಲ್ಲಿ ಒತ್ತಡ ತಂದಿತ್ತ 'ಬೇಸರ'

author img

By

Published : Jul 9, 2020, 11:44 PM IST

ಕೋವಿಡ್​-19 ಮಕ್ಕಳನ್ನು ತೀವ್ರ ಒತ್ತಡಕ್ಕೊಳಪಡಿಸಿದೆ. ಅವರಲ್ಲಿ ಬಹಳಷ್ಟು ಮಕ್ಕಳು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಕುರಿತು ನವಜಾತ ಶಿಶು ವೈದ್ಯೆ ವಿಜಯಾನಂದ್ ಜಮಾಲ್‌ಪುರಿ ಅವರು ಮಕ್ಕಳ ಆರೋಗ್ಯದ ಮೇಲೆ ಬೀರುವ ಪರಿಣಾಮದ ಬಗ್ಗೆ ಮಾತನಾಡಿದ್ದಾರೆ.

Common illness In Kids During Covid-19
ಕೋವಿಡ್ -19 ಸಮಯದಲ್ಲಿ ಮಕ್ಕಳಲ್ಲಿ ಸಾಮಾನ್ಯ ಕಾಯಿಲೆ

ಕೊರೊನಾ ಪ್ರೇರಿತ ಲಾಕ್​​ಡೌನ್​​ ಸಂದರ್ಭದಲ್ಲಿ ಒತ್ತಡಕ್ಕೊಳಗಾದ ಮಕ್ಕಳು ಹಲವು ಇತರ ಆರೋಗ್ಯ ಸಮಸ್ಯೆಗಳಿಗೊಳಗಾಗಿ ಹೆಚ್ಚು ಅಪಾಯಕ್ಕೆ ಸಿಲುಕಿದ್ದಾರೆ. ಅಸ್ತಮಾ, ದಡಾರ, ಸಿಡುಬು ಸೇರಿದಂತೆ ಹಲವು ರೋಗಗಳು ಕಂಡು ಬಂದಿವೆ. ಅದು ಹೆಚ್ಚಾಗಿ ಲಾಕ್​ಡೌನ್​ ಸಂದರ್ಭದಲ್ಲೇ. ಅದಕ್ಕೆ ಕಾರಣ ಏನು? ಮಕ್ಕಳಲ್ಲಿ ಕಾಣಿಸಿಕೊಂಡ ರೋಗಗಳು ಯಾವುವು? ಹೀಗೆ ಎಲ್ಲ ಪ್ರಶ್ನೆಗಳಿಗೂ ಈ ಟಿವಿ ಭಾರತಕ್ಕೆ ಉತ್ತರ ನೀಡಿದ್ದಾರೆ ಹೈದರಾಬಾದ್‌ನ ರೈನ್​ಬೋ ಆಸ್ಪತ್ರೆಗಳ ಸಮಾಲೋಚಕ ನವಜಾತ ಶಿಶುವೈದ್ಯೆ ವಿಜಯಾನಂದ್ ಜಮಾಲ್‌ಪುರಿ.

  • ಕೋವಿಡ್​-19 ಸಮಯದಲ್ಲಿ ಮಕ್ಕಳಲ್ಲಿ ಕಂಡುಬಂದ ಸಮಸ್ಯೆಗಳು ಯಾವುವು?

ನಿತ್ಯ ಶಾಲೆಗೆ ಹೋಗುತ್ತಿದ್ದ ಮಕ್ಕಳಿಗೆ ಏಕಾಏಕಿ (ಲಾಕ್​ಡೌನ್​) ಮನೆಯಿಂದ ಹೊರ ಬರದಂತೆ ನಿರ್ಬಂಧ ವಿಧಿಸಿದ ಪರಿಣಾಮ ಮನಸ್ಸಿಗೆ ಬೇಸರ ತರಿಸಿದೆ. ಬೇಸರ ಕೂಡ ಮಾನಸಿಕ ಖಿನ್ನತೆಗಳಲ್ಲಿ ಒಂದು. ಅದಕ್ಕೆ ಕಾರಣ ಲಾಕ್​ಡೌನ್ನಲ್ಲಿ ಒತ್ತಡಕ್ಕೆ ಸಿಲುಕಿದ್ದು. ಒಂದಿಲ್ಲೊಂದು ಆಟದಲ್ಲಿ ಮಗ್ನರಾಗುತ್ತಿದ್ದ ಮಕ್ಕಳಿಗೆ ಕಳೆದ ನಾಲ್ಕು ತಿಂಗಳಲ್ಲಿ ಅದು ಸಾಧ್ಯವಾಗಲಿಲ್ಲ. ಇದರಿಂದಾಗಿ ತಲೆಚಿಟ್ಟು ಹಿಡಿಸಿದಂತಾಗುತ್ತದೆ. ಮನೆಯಲ್ಲೇ ಕೂತು ಹೊರಗಿನ ಪ್ರಪಂಚ ಮರೆತು ವಿಚಿತ್ರವಾಗಿ ತಯಾರಾಗಿದ್ದಾರೆ. ಅವರು ಸಾಮಾನ್ಯ ಸ್ಥಿತಿಗೆ ಮರಳಲು ಸಮಯ ಬೇಕಾಗುತ್ತದೆ.

  • ಯಾವ ಮಕ್ಕಳಿಗೆ ತೀವ್ರ ಕಾಯಿಲೆ ಬರುವ ಸಾಧ್ಯತೆ ಇದೆ?

ದೀರ್ಘಕಾಲದ ಶ್ವಾಸಕೋಶದ ಕಾಯಿಲೆ ಅಥವಾ ತೀವ್ರವಾದ ಆಸ್ತಮಾ, ಹೃದ್ರೋಗ, ಕ್ಯಾನ್ಸರ್​​ನಂತಹ ರೋಗ ನಿರೋಧಕ ಶಮನಕಾರಿ ಕಾಯಿಲೆ ಹೊಂದಿರುವ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಹಾಗೂ ದೀರ್ಘಕಾಲೀನ ಸ್ಟೆರಾಯ್ಡ್​ ಔಷಧ ಸೇವಿಸುವವರಲ್ಲಿ ಈ ಲಕ್ಷಣ ಕಂಡು ಬರುತ್ತದೆ. ಈ ಸೋಂಕುಗಳ ವಿರುದ್ಧ ಹೋರಾಡಲು ಅವರಿಗೆ ಸಾಧ್ಯವಾಗದ ಕಾರಣ, ಎಲ್ಲರೂ ಹೆಚ್ಚಿನ ಅಪಾಯಕ್ಕೆ ಸಿಲುಕಿದ್ದಾರೆ. ಆದ್ದರಿಂದ, ಅಂತಹ ಮಕ್ಕಳ ಪೋಷಕರು ಹೆಚ್ಚು ಜಾಗರೂಕರಾಗಿರಬೇಕು.

  • ಮಗುವಿಗೆ ದದ್ದು ಉಂಟಾಗುವುದು ಅಥವಾ ಜ್ವರ ಬರುವುದು ತುಂಬಾ ಸಾಮಾನ್ಯವಾಗಿದೆ. ಹಾಗಾದರೆ, ವೈದ್ಯರನ್ನು ಭೇಟಿ ಮಾಡಬೇಕೆಂದು ಪೋಷಕರಿಗೆ ಹೇಗೆ ಗೊತ್ತಾಗಲಿದೆ?

ದಡಾರ, ಸಿಡುಬು ಮುಂತಾದ ಸ್ಫೋಟಕ ಜ್ವರಗಳು ದದ್ದು ಮತ್ತು ಜ್ವರದಿಂದ ಕೂಡಿರುತ್ತವೆ ಎಂಬುದು ನಿಜ. ಆದರೆ, ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು, ಜ್ವರದಿಂದ ಬಳಲುತ್ತಿರುವ ಮತ್ತು ದದ್ದು ಉಂಟಾಗಿರುವ ಯಾವುದೇ ಮಗುವಿಗೆ ವೈದ್ಯರು ಚಿಕಿತ್ಸೆ ನೀಡಲೇಬೇಕು. ರೋಗ ಕಾಣಿಸಿಕೊಂಡಾಗ ಮಗುವಿನ ಚಲನವಲನ ಮತ್ತು ನಿತ್ಯ ಚಟುವಟಿಕೆಗಳಲ್ಲಿ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ. ಪೋಷಕರು ಭಯಪಡುವ ಅಗತ್ಯವಿಲ್ಲ. ವೈದ್ಯರನ್ನು ಭೇಟಿಯಾದರೆ ಸಾಕು.

  • ಆಸ್ತಮಾ ಹೊಂದಿರುವ ಮಕ್ಕಳಿಗೆ ಉಸಿರಾಟದ ತೊಂದರೆ ಉಂಟಾಗಬಹುದೆ?

ಅಸ್ತಮಾ ಹೊಂದಿರುವ ಮಕ್ಕಳು ನಿಯಮಿತ ಔಷಧಗಳನ್ನು ಸೇವಿಸಿದರೆ, ಅವರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದರೆ, ಮಗು ಅದರಿಂದ ಹೊರಬರಲು ತುಂಬಾ ಸಮಯ ಬೇಕಾಗುತ್ತದೆ. ವಾತಾವರಣದಲ್ಲಿನ ಬದಲಾವಣೆಯೂ ಉಸಿರಾಟದ ತೊಂದರೆಗೆ ಕಾರಣವಾಗಬಹುದು. ಅಂತಹ ಅಂದರ್ಭದಲ್ಲಿ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.

ಈಚಿನ ದಿನಗಳಲ್ಲಿ ಮನೆಯಲ್ಲಿ ನೆಬ್ಯುಲೈಜರ್​ ಬಳಕೆ ಸಾಮಾನ್ಯವಾಗಿಬಿಟ್ಟಿದೆ. ಒಂದು ನೆಬ್ಯುಲೈಜರ್ ಏರೋಸಾಲ್​​​​ಗಳನ್ನು ಹರಡುತ್ತದೆ. ಆದ್ದರಿಂದ ಸಾಧ್ಯವಾದಷ್ಟು ನೆಬ್ಯುಲೈಜರ್ ಅನ್ನು ತಪ್ಪಿಸಿ. ಮತ್ತು ಅದು ನಿಜವಾಗಿಯೂ ಅಗತ್ಯವಿದ್ದರೆ ಶಿಶುವೈದ್ಯರ ಶಿಫಾರಸಿನ ಮೇರೆಗೆ ಮಾತ್ರ ಬಳಸಿ. ಬದಲಾಗಿ, ಮಗುವಿನ ವಯಸ್ಸಿನ ಆಧಾರದ ಮೇಲೆ ಫೇಸ್​​ಮಾಸ್ಕ್, ಇನ್​​ಹಾಲರ್​ (inhaler) ಬಳಸಬೇಕು.

  • ಹೊಟ್ಟೆ ನೋವು ಮತ್ತು ಮಕ್ಕಳಲ್ಲಿ ಚರ್ಮದ ಸಂವೇದನೆ ಹಾಗೂ ಮೇಲ್ಮೈ ಬದಲಾಗುತ್ತಿದೆ. ಅದಕ್ಕೆ ನಿಮ್ಮ ಅಭಿಪ್ರಾಯ.

ತಿನ್ನದ ಆಹಾರ ಅಜೀರ್ಣವಾದಾಗ, ಮಲಬದ್ಧತೆಯಿಂದ ಹೊಟ್ಟೆನೋವು ಕಾಣಿಸಿಕೊಳ್ಳುವುದು ಸಹ. ಆಗ ಆಸ್ಪತ್ರೆಯ ಬಾಗಿಲು ತಟ್ಟುವುದು ಒಳ್ಳೆಯದು. ಸ್ಯಾನಿಟೈಸರ್‌ ಅತಿಯಾದ ಬಳಕೆಯಿಂದಾಗಿ ಚರ್ಮದ ಮೇಲೆ ಗಾಯಗಳಾಗುತ್ತಿವೆ. ಅದರ ಬದಲಿಗೆ ಸೋಪ್​​ನಿಂದ ಹೆಚ್ಚು ಕೈ ತೊಳೆಯುವಂತೆ ನಾನು ಸೂಚಿಸುತ್ತೇನೆ. ಮಕ್ಕಳ ಚರ್ಮ ಮೃಧುವಾಗಿರುತ್ತದೆ. ಮಕ್ಕಳ ಕೈ ತೊಳೆಯಲು ಸೋಪ್​ ಉತ್ತಮ. ಮಕ್ಕಳ ಚರ್ಮ ಮೃಧುವಾಗಿರುವ ಕಾರಣ, ರೋಗವು ಸಹ ಬಹುಬೇಗನೆ ಹರಡುತ್ತದೆ. ದಡಾರ, ದದ್ದು, ಸಿಡುಬು, ಅಲರ್ಜಿ ಈ ರೀತಿ ಚರ್ಮದ ರೋಗಗಳು ಮಕ್ಕಳಲ್ಲಿ ಕಾಣಿಸಿಕೊಂಡಿರುವ ಕುರಿತು ವರದಿಯಾಗಿವೆ.

ಹೀಗಾಗಿ, ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿರೆ, ಮಕ್ಕಳ ಮೇಲೆ ಹೆಚ್ಚು ಗಮನ ಕೊಡಬೇಕು. ಮತ್ತು ಮಕ್ಕಳ ಆರೋಗ್ಯವನ್ನು ಉತ್ತಮಗೊಳಿಸಲು ಪ್ರಯತ್ನಿಸಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.