ಗೋರಖ್ಪುರ್ (ಉತ್ತರ ಪ್ರದೇಶ): ಮಕರ ಸಂಕ್ರಾಂತಿ ಹಿನ್ನೆಲೆ ದೇಶದ ನಾನಾ ಭಾಗದಲ್ಲಿ ಸಂಭ್ರಮ ಜೋರಾಗಿದೆ. ಬೆಳ್ಳಂಬೆಳಗ್ಗೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಆರಂಭಗೊಂಡಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಬೆಳಗ್ಗೆ 4ಗಂಟೆಗೆ ಬಾಬಾ ಗೋರಖ್ನಾಥ್ ಮಂದಿರಕ್ಕೆ ಭೇಟಿ ನೀಡಿ ಖಿಚ್ಡಿ ಪ್ರಸಾದ ಅರ್ಪಿಸಿದ್ದಾರೆ.
ಸಿಎಂ ಖಿಚ್ಡಿ ಅರ್ಪಿಸಿದ ಬಳಿಕ ದೇವಾಲಯಕ್ಕೆ ಆಗಮಿಸಿದ್ದ ಭಕ್ತರು ಖಿಚ್ಡಿ ಅರ್ಪಿಸಿದರು.
ಯೋಗಿ ಆದಿತ್ಯಾನಾತ್ ಹಲವು ವರ್ಷಗಳಿಂದ ಗೋರಖ್ನಾಥ್ ದೇವಾಲಯಕ್ಕೆ ಆಗಮಿಸಿ ಖಿಚ್ಡಿ ಅರ್ಪಿಸುವ ಸಂಪ್ರದಾಯ ಮುಂದುವರಿಸಿಕೊಂಡು ಬಂದಿದ್ದಾರೆ. ಖಿಚ್ಡಿ ಅರ್ಪಿಸಿದ ಬಳಿಕ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿದ ಯೋಗಿ ಅಲ್ಲಿನ ವ್ಯವಸ್ಥೆಯ ಕುರಿತು ಮಾಹಿತಿ ಪಡೆದುಕೊಂಡರು. ಅಲ್ಲದೇ ದೇವಾಲಯದಲ್ಲಿ ನೆರೆದಿದ್ದ ನೂರಾರು ಭಕ್ತರಿಗೆ ಕೊರೊನಾ ನಿಯಮಗಳ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.
ಇನ್ನೊಂದೆಡೆ ಪವಿತ್ರ ಗಂಗಾ ನದಿಯಲ್ಲಿ ಲಕ್ಷಾಂತರ ಭಕ್ತರು ಪುಣ್ಯಸ್ನಾನ ಮಾಡಿದರು. ಮಕರ ಸಂಕ್ರಾಂತಿಯ ಹಿನ್ನೆಲೆ ಗಂಗಾನದಿಯಲ್ಲಿ ಪುಣ್ಯಸ್ನಾನ ನೆರವೇರಿಸಿದ್ದಾರೆ.
ಇದನ್ನೂ ಓದಿ: ಜನರು ವಿಶ್ವಾಸ ಇಡುವ ರೀತಿಯಲ್ಲಿ ಸರ್ಕಾರ ಕಾರ್ಯ ನಿರ್ವಹಿಸಬೇಕು:ತಿವಾರಿ