ETV Bharat / bharat

ಮನೆ-ಮನೆಗೂ ಉಚಿತ ಸ್ಮಾರ್ಟ್​ಫೋನ್ ನೀಡುವುದಾಗಿ ಒಡಿಶಾ ಸಿಎಂ ಘೋಷಣೆ!​

ಸ್ವಾಭಿಮಾನ್ ಅಂಚಲ್ ಯಾವಾಗಲೂ ತನ್ನ ಹೃದಯದಲ್ಲಿ ಇರುತ್ತದೆ. ಅದನ್ನು ಅಭಿವೃದ್ಧಿ ಹೊಂದಿದ ಪ್ರದೇಶವನ್ನಾಗಿ ಮಾಡಲು ಪ್ರಯತ್ನಗಳು ಮುಂದುವರಿಯುತ್ತವೆ ಎಂದು ಹೇಳಿ, ಸ್ವಾಭಿಮಾನ್ ಅಂಚಲ್ ಕುಟುಂಬಗಳಿಗೆ ಸ್ಮಾರ್ಟ್​​ಫೋನ್ ವಿತರಣಾ ಕಾರ್ಯಕ್ರಮ ಪ್ರಾರಂಭಿಸುತ್ತಿರುವುದಾಗಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಿಸಿದರು.

smartphone
ಸ್ಮಾರ್ಟ್​​ಫೋನ್​
author img

By

Published : Nov 17, 2020, 9:40 PM IST

ಭುವನೇಶ್ವರ: ಒಡಿಶಾದ ಮಲ್ಕಂಗಿರಿ ಜಿಲ್ಲೆಯ ಮಾವೋವಾದಿಗಳನ್ನು ಪರಿವರ್ತಿಸುವ ಸಲುವಾಗಿ ಈ ಪ್ರದೇಶದ ಎಲ್ಲಾ ಮನೆಗಳಿಗೆ ಸ್ಮಾರ್ಟ್‌ ಫೋನ್‌ಗಳನ್ನು ಉಚಿತವಾಗಿ ನೀಡುವುದಾಗಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪ್ರಕಟಣೆ ಹೊರಡಿಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್​ ಮೂಲಕ ಪ್ರದೇಶದ ಜನರೊಂದಿಗೆ ಸಂವಹನ ನಡೆಸಿದ ಮುಖ್ಯಮಂತ್ರಿ, ಎಡಪಂಥೀಯ ಉಗ್ರಗಾಮಿಗಳಿಗೆ (ಎಲ್‌ಡಬ್ಲ್ಯುಇ) ಹಿಂಸಾಚಾರದಿಂದ ದೂರವಿಡಲು ಮತ್ತು ಅವರನ್ನು ಮುಖ್ಯವಾಹಿನಿಗೆ ಮರಳಲು ಹಾಗೂ ಅಭಿವೃದ್ಧಿ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಕರೆ ನೀಡಿದರು.

ಸ್ವಾಭಿಮಾನ್ ಅಂಚಲ್ ಯಾವಾಗಲೂ ತನ್ನ ಹೃದಯದಲ್ಲಿ ಇರುತ್ತದೆ. ಅದನ್ನು ಅಭಿವೃದ್ಧಿ ಹೊಂದಿದ ಪ್ರದೇಶವನ್ನಾಗಿ ಮಾಡಲು ಪ್ರಯತ್ನಗಳು ಮುಂದುವರಿಯುತ್ತವೆ ಎಂದು ಹೇಳಿ, ಸ್ವಾಭಿಮಾನ್ ಅಂಚಲ್ ಕುಟುಂಬಗಳಿಗೆ ಸ್ಮಾರ್ಟ್ ​​ಫೋನ್ ವಿತರಣಾ ಕಾರ್ಯಕ್ರಮ ಪ್ರಾರಂಭಿಸುತ್ತಿರುವುದಾಗಿ ಘೋಷಿಸಿದರು.

ಡಿಜಿಟಲ್ ಕ್ರಾಂತಿಯ ಪ್ರಯೋಜನಗಳನ್ನು ಕೊನೆಯ ಮೈಲಿಗೆ ಕೊಂಡೊಯ್ಯಲು ಮತ್ತು ಸಾಮಾಜಿಕ ಭದ್ರತಾ ಯೋಜನೆಗಳನ್ನು ಚುರುಕುಗೊಳಿಸಲು ಹೆಚ್ಚುವರಿ ಮೂರು 4ಜಿ ಮೊಬೈಲ್ ಟವರ್‌ ಸ್ಥಾಪಿಸಲಾಗುವುದು. 100 ಕೋಟಿ ರೂ. ಹೂಡಿಕೆಯೊಂದಿಗೆ 11 ಕೆವಿ 3 ಫೇಸ್ ವಿದ್ಯುತ್​ ಲೈನ್ ಸಂಪರ್ಕ, ಕಾಂಕ್ರೀಟ್ ರಸ್ತೆಗಳ ನಿರ್ಮಾಣ, 78 ಕಿ.ಮೀ. ಸುಸಜ್ಜಿತ ರಸ್ತೆ ಮತ್ತು ಏಳು ಸೇತುವೆ ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.