ETV Bharat / bharat

ಅಪಾಯಕಾರಿ ದರೋಡೆಕೋರನ ಬಂಧನ: ಶಾಹ್ದೋಲ್​ ಪೊಲೀಸರ ಕಾರ್ಯಾಚರಣೆ - ಮಹಮ್ಮದ್ ಅಖ್ತರ್

ಉತ್ತರಪ್ರದೇಶ ಮೂಲದ ದರೋಡೆಕೋರ ಅತೀಕ್ ಅಹ್ಮದ್ ಅನ್ಸಾರಿ ಆಪ್ತ ಮಹಮ್ಮದ್ ಅಖ್ತರ್​ನನ್ನು ಮಧ್ಯಪ್ರದೇಶದ ಶಾಹ್ದೋಲ್​ ಪೊಲೀಸರು ಬಂಧಿಸಿದ್ದಾರೆ.

ಮಹಮ್ಮದ್ ಅಖ್ತರ್​
ಮಹಮ್ಮದ್ ಅಖ್ತರ್​
author img

By

Published : Jul 10, 2020, 7:48 AM IST

ಶಾಹ್ದೋಲ್​ (ಮಧ್ಯಪ್ರದೇಶ): ಉತ್ತರಪ್ರದೇಶ ಮೂಲದ ದರೋಡೆಕೋರ ಅತೀಕ್ ಅಹ್ಮದ್ ಅನ್ಸಾರಿ ಆಪ್ತ ಮಹಮ್ಮದ್ ಅಖ್ತರ್​ನನ್ನು ಶಾಹ್ದೋಲ್​ ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಶಾಹ್ದೋಲ್​ ಪೊಲೀಸ್ ವರಿಷ್ಠಾಧಿಕಾರಿ ಸತ್ಯೇಂದ್ರ ಕುಮಾರ್ ಶುಕ್ಲಾ, ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಆತ ಶಾಹ್ದೋಲ್​ಗೆ ಬರಲು ಕಾರಣವೇನು ಮತ್ತು ಕಾನ್ಪುರ ಎನ್​ಕೌಂಟರ್​ ಆರೋಪಿ ವಿಕಾಸ್​ ದುಬೆಯೊಂದಿಗೆ ಸಂಬಂಧ ಹೊಂದಿದ್ದಾನೆಯೇ ಎಂಬುದರ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದಿದ್ದಾರೆ.

ಇನ್ನು ಅಖ್ತರ್,​ ಪೊಲೀಸ್​ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದು, ಉತ್ತರಪ್ರದೇಶದಲ್ಲಿ ಅನೇಕ ದರೋಡೆಕೋರರನ್ನು ಹತ್ಯೆ ಮಾಡಿದ ಬಳಿಕ ನಾನು ಇಲ್ಲಿಗೆ ಬಂದಿದ್ದೇನೆ ಎಂದಿದ್ದಾನೆ.

ಅಖ್ತರ್​ ವಿರುದ್ಧ ಪ್ರಯಾಗರಾಜ್‌ನ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 12ಕ್ಕೂ ಹೆಚ್ಚು ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.