ETV Bharat / bharat

ಕಡಲೆಕಾಯಿ, ಮಾಂಸದ ತುಂಡುಗಳಲ್ಲಿತ್ತು 45 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ...! - ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿಗಳು

ಏರ್ ಇಂಡಿಯಾ ವಿಮಾನದಲ್ಲಿ ದುಬೈನಿಂದ ದೆಹಲಿಗೆ ಬಂದಿದ್ದ ಮುರಾದ್ ಆಲಂ ಎಂಬ ವ್ಯಕ್ತಿಯು ಕಡಲೆಕಾಯಿ, ಬೇಯಿಸಿದ ಮಾಂಸದ ತುಂಡುಗಳು ಹಾಗೂ ಬಿಸ್ಕತ್ ಪ್ಯಾಕೆಟ್​ಗಳ ಒಳಗೆ ಅಡಗಿಸಿಟ್ಟು ಸಾಗಿಸುತ್ತಿದ್ದ 45 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನು ಸಿಐಎಸ್ಎಫ್ ಸಿಬ್ಬಂದಿಗಳು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ.

CISF
ವಿದೇಶಿ ಕರೆನ್ಸಿ
author img

By

Published : Feb 13, 2020, 1:11 AM IST

ನವದೆಹಲಿ: ಕಡಲೆಕಾಯಿ, ಬೇಯಿಸಿದ ಮಾಂಸದ ತುಂಡುಗಳು ಹಾಗೂ ಬಿಸ್ಕತ್ ಪ್ಯಾಕೆಟ್​ಗಳ ಒಳಗೆ ಅಡಗಿಸಿಟ್ಟು ವ್ಯಕ್ತಿಯೋರ್ವ ಸಾಗಿಸುತ್ತಿದ್ದ 45 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿಗಳು ಬುಧವಾರ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.

ಮಂಗಳವಾರ ಸಂಜೆ ಏರ್ ಇಂಡಿಯಾ ವಿಮಾನದಲ್ಲಿ ದುಬೈನಿಂದ ದೆಹಲಿಗೆ ಬಂದಿದ್ದ ಮುರಾದ್ ಆಲಂ ಎಂಬಾತನನ್ನು ಅನುಮಾನದ ಮೇರೆಗೆ ಭದ್ರತಾ ಸಿಬ್ಬಂದಿಗಳು ತಡೆಹಿಡಿದಿದ್ದಾರೆ. ಎಕ್ಸರೆ ಸ್ಕ್ರೀನಿಂಗ್​ ವೇಳೆ ಆತನ ಬ್ಯಾಗ್​ನಲ್ಲಿ ಅನುಮಾನಾಸ್ಪದ ವಸ್ತುಗಳಿರುವುದು ಗಮನಕ್ಕೆ ಬಂದಿದೆ ಎಂದು ಸಿಐಎಸ್ಎಫ್ ವಕ್ತಾರ ಹಾಗೂ ಸಹಾಯಕ ಇನ್ಸ್‌ಪೆಕ್ಟರ್ ಜನರಲ್ ಹೇಮೇಂದ್ರ ಸಿಂಗ್ ತಿಳಿಸಿದ್ದಾರೆ.

ಇದು ವಿದೇಶಿ ಕರೆನ್ಸಿಗಳ ಕಳ್ಳಸಾಗಣೆಯ ಸ್ಪಷ್ಟ ಪ್ರಕರಣವಾಗಿದೆ. ಮುರಾದ್ ಆಲಂನನ್ನು ಬಂಧಿಸಿ ಆತನಿಂದ 45 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡಿದ್ದು, ಕಸ್ಟಮ್ಸ್ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಮೇಂದ್ರ ಸಿಂಗ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.