ETV Bharat / bharat

ದೆಹಲಿ ಮೆಟ್ರೋ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್​ - ದೆಹಲಿ ಮೆಟ್ರೋ ನಿಲ್ದಾಣ

ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಭದ್ರತೆಗಾಗಿ ನಿಯೋಜಿಸಲಾದ ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್​ಎಫ್​) ಸಿಬ್ಬಂದಿಯೊಬ್ಬರಿಗೆ ಕೊರೊನಾ ವೈರಸ್​ ದೃಢಪಟ್ಟಿದ್ದು,ಇದರೊಂದಿಗೆ ದೆಹಲಿಯ ಸಿಐಎಸ್​ಎಫ್​ನಲ್ಲಿ ಒಟ್ಟು ಕೋವಿಡ್​-19 ಸೋಂಕಿತರ ಸಂಖ್ಯೆ ಮೂರಕ್ಕೆ ತಲುಪಿದೆ.

CISF Jawan deployed at Delhi Metro tests positive for Coronavirus
ದೆಹಲಿ ಮೆಟ್ರೋ ನಿಲ್ದಾಣ ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್​
author img

By

Published : May 1, 2020, 2:25 PM IST

ದೆಹಲಿ: ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಭದ್ರತೆಗಾಗಿ ನಿಯೋಜಿಸಲಾದ ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್​ಎಫ್​) ಸಿಬ್ಬಂದಿಯೊಬ್ಬರಿಗೆ ಕೊರೊನಾ ವೈರಸ್​ ಇರುವುದು ದೃಢಪಟ್ಟಿದೆ.

ಇದರೊಂದಿಗೆ ದೆಹಲಿಯ ಸಿಐಎಸ್​ಎಫ್​ನಲ್ಲಿ ಒಟ್ಟು ಕೋವಿಡ್​-19 ಸೋಂಕಿತರ ಸಂಖ್ಯೆ ಮೂರಕ್ಕೆ ತಲುಪಿದೆ. ಉಳಿದ ಇಬ್ಬರು ಸಿಬ್ಬಂದಿ ದೆಹಲಿ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ವೈರಸ್​ ಭೀತಿ ಹಿನ್ನೆಲೆ, ಪ್ರಧಾನಿ ಮೋದಿ ಮಾರ್ಚ್​ನಲ್ಲಿ ದೇಶಾದ್ಯಂತ ಲಾಕ್​ಡೌನ್ ಘೋಷಿಸಿದ ನಂತರ ದೆಹಲಿ ಮೆಟ್ರೋ ರೈಲು ನಿಗಮ ತನ್ನ ಸೇವೆಗಳನ್ನ ಬಂದ್ ಮಾಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.