ETV Bharat / bharat

ವಿಶೇಷ ವರದಿ: ಕೋವಿಡ್ ಸೈಟೋಕಿನ್ ಸ್ಟಾರ್ಮ್‌ಗೆ ಔಷಧ ಕಂಡುಹಿಡಿದ ಸಿನ್ಸಿನಾಟಿ ಚಿಲ್ಡ್ರನ್ಸ್‌ ಎಚ್‌ಎಲ್‌ಎಚ್‌ ಸಂಶೋಧನೆ ವಿಭಾಗ

ಉರಿಯೂತವನ್ನು ಕಡಿಮೆ ಮಾಡಲು ಬಳಸುವ ರುಕ್ಸಾಲಿಟಿನಿಬ್ ಎಂಬ ಔಷಧವನ್ನು ದಿನಕ್ಕೆ ಎರಡು ಬಾರಿ 5 ಮಿ.ಗ್ರಾಂ ಪ್ರಮಾಣದಲ್ಲಿ ಕೋವಿಡ್-19 ರೋಗಿಗಳಿಗೆ ನೀಡಲಾಗಿತ್ತು. ಇದರ ಜೊತೆಗೆ ಕೋವಿಡ್-19 ರೋಗಿಗಳಿಗೆ ಸಾಮಾನ್ಯ ಚಿಕಿತ್ಸೆಯನ್ನೂ ನೀಡಲಾಗಿತ್ತು. ಇನ್ನೊಂದೆಡೆ 21 ರೋಗಿಗಳಿಗೆ ಖಾಲಿ ಔಷಧವನ್ನು ನೀಡಿ, ಔಷಧದ ಸಮಗ್ರ ಪರಿಣಾಮವನ್ನು ಅಧ್ಯಯನ ನಡೆಸಲಾಗಿದೆ.

Cincinnati children's HLH research points to treatment for COVID-19 cytokine storms
ಕೋವಿಡ್ ಸೈಟೋಕಿನ್ ಸ್ಟಾರ್ಮ್‌ಗೆ ಔಷಧ
author img

By

Published : Jun 3, 2020, 11:16 PM IST

ಹೈದರಾಬಾದ್: ಸಿನ್ಸಿನಾಟಿ ಚಿಲ್ಡ್ರನ್ಸ್‌ ಆಸ್ಪತ್ರೆಯಲ್ಲಿ ಮಕ್ಕಳಲ್ಲಿ ರೋಗ ನಿರೋಧಕ ಖಾಯಿಲೆ (ಎಚ್‌ಎಲ್‌ಎಚ್‌) ಅನ್ನು ಗುಣಪಡಿಸುವ ಸಂಬಂಧ ಜೀವಾಂತರ ಇಲಿಯನ್ನು ಅಭಿವೃದ್ಧಿ ಪಡಿಸಲಾಗಿದ್ದು, ಕೋವಿಡ್‌ ಸಾಂಕ್ರಾಮಿಕ ರೋಗಕ್ಕೆ ಚಿಕಿತ್ಸೆ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.

ಸಿನ್ಸಿನಾಟಿ ಚಿಲ್ಡ್ರನ್ಸ್‌ ಕ್ಯಾನ್ಸರ್ ಪಥಾಲಜಿಸ್ಟ್‌ ಗಾಂಗ್ ಹುವಾಂಗ್ ಈ ಪ್ರಯೋಗ ಇಲಿಯನ್ನು ಅಭಿವೃದ್ಧಿಪಡಿಸುವಲ್ಲಿ ಶ್ರಮಿಸಿದ್ದರು. ಇವರೇ ಕೋವಿಡ್‌ಗೆ ಔಷಧ ಕಂಡುಹಿಡಿಯುವ ತಂಡದಲ್ಲೂ ಇದ್ದಾರೆ. ಕೋವಿಡ್​-19 ರೋಗಿಗಳಲ್ಲಿ ಹಿಮ್ಮುಖ ಉಸಿರಾಟ ಮತ್ತು ಬಹು ಅಂಗಾಂಗ ಉರಿಯೂತದ ಕುರಿತು ನಡೆಸಿದ ಸಂಶೋಧನೆಯಲ್ಲಿ ಭಾಗವಹಿಸಿದ್ದು, ಈ ಸಂಶೋಧನೆಯಲ್ಲಿ ಕಂಡುಕೊಂಡ ಔಷಧದ ಸಣ್ಣ ಪ್ರಾಯೋಗಿಕ ಚಿಕಿತ್ಸೆಯೂ ಯಶಸ್ಸು ಕಂಡಿದೆ. ಎರಡನೇ ಹಂತದ ಚಿಕಿತ್ಸಾ ಅಧ್ಯಯನದ ಡೇಟಾವನ್ನು ಅಲರ್ಜಿ ಆಂಡ್ ಕ್ಲಿನಿಕಲ್ ಇಮ್ಯುನಾಲಜಿ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ. ಚೀನಾದ ವುಹಾನ್‌ನಲ್ಲಿ ಫೆಬ್ರವರಿ 9 ರಿಂದ ಫೆಬ್ರವರಿ 28ರ ವರೆಗೆ ತೀವ್ರ ಕೋವಿಡ್ 19 ಕಂಡುಬಂದ 43 ರೋಗಿಗಳಲ್ಲಿ ಈ ಔಷಧವನ್ನು ಪ್ರಯಗಿಸಲಾಗಿತ್ತು. ಟಾಂಗ್ಜಿ ಮೆಡಿಕಲ್ ಕಾಲೇಜು ಟಾಂಗ್ಜಿ ಹಾಸ್ಪಿಟಲ್‌ನ ಹೆಮಟಾಲಜಿ ವಿಭಾಗದ ಜಿಯಾನ್‌ಫೆಂಗ್ ಝೌ ಈ ಅಧ್ಯಯನದ ಮುಖ್ಯ ರೂವಾರಿ. ಇವರು ವುಹಾನ್‌ನ ಹುವಾಝಾಂಗ್ ವಿಜ್ಞಾನ ವಿಶ್ವವಿದ್ಯಾಲಯದಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಹುವಾಂಗ್‌, ಸಿನ್ಸಿನಾಟಿ ಚಿಲ್ಡ್ರನ್ಸ್‌ ಎಚ್‌ಎಲ್‌ಎಚ್‌ ಸೆಂಟರ್ ಮತ್ತು ಕ್ಯಾನ್ಸರ್ ಆಂಡ್‌ ಬ್ಲಡ್ ಡಿಸೀಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ರುಕ್ಸೊಲಿಟಿನಿಬ್‌ನಲ್ಲಿದೆ ಪರಿಹಾರ

ರುಕ್ಸೊಲಿಟಿನಿಬ್ ಅನ್ನು ಸೇವಿಸುವ ರೋಗಿಗಳನ್ನು ಯಾದೃಚ್ಛಿಕವಾಗಿ ಆಯ್ಕೆ ಮಾಡಿಕೊಂಡು, ಉರಿಯೂತವನ್ನು ತಡೆಯುವ 5 ಮಿ.ಗ್ರಾಂ ಡೋಸ್ ಅನ್ನು ದಿನಕ್ಕೆ ಎರಡು ಬಾರಿ ನೀಡಲಾಗುತ್ತಿತ್ತು. ಇದರ ಜೊತೆಗೆ ಕೋವಿಡ್ 19 ಗೆ ನೀಡಲಾಗುವ ಚಿಕಿತ್ಸೆಯನ್ನೂ ನೀಡಲಾಗುತ್ತಿತ್ತು. ಇನ್ನೊಂದೆಡೆ 21 ರೋಗಿಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ಖಾಲಿ ಮಾತ್ರೆಗಳನ್ನು ನೀಡಲಾಗುತ್ತಿತ್ತು. ಜೊತೆಗೆ ಇವರಿಗೂ ಕೋವಿಡ್‌ಗೆ ನೀಡಲಾಗುವ ಸಾಮಾನ್ಯ ಚಿಕಿತ್ಸೆ ನೀಡಲಾಗುತ್ತಿತ್ತು. ರುಕ್ಸೊಲಿಟಿನಿಬ್ ಸ್ವೀಕರಿಸಿದ ರೋಗಿಗಳು ತುಂಬಾ ಬೇಗ ಚೇತರಿಸಿಕೊಂಡರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಎದೆಯ ಸಿಟಿ ಸ್ಕ್ಯಾನಿಂಗ್‌ನಲ್ಲಿ ಸುಧಾರಣೆಯನ್ನು ಈ ರೋಗಿಗಳು ತೋರಿಸಿದ್ದಾರೆ. ಲಿಂಫೋಪೆನಿಯಾದಿಂದ ಬೇಗ ಚೇತರಿಸಿಕೊಂಡರು ಮತ್ತು ರುಕ್ಸೊಲಿಟಿನಿಬ್‌ನ ಅಡ್ಡ ಪರಿಣಾಮದ ಕುರಿತ ಅತ್ಯಂತ ವರದಿಯೂ ಅತ್ಯಂತ ಸಂತೃಪ್ತಿದಾಯಕವಾಗಿತ್ತು. ಈ ಚಿಕಿತ್ಸೆ ಅಧ್ಯಯನದಿಂದ ದೊಡ್ಡ ಮಟ್ಟದ ಗಾತ್ರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಪ್ರಯೋಗ ನಡೆಸಬಹುದು. ಈ ಮಾತ್ರೆಯನ್ನು ಸೇವಿಸದ ರೋಗಿಗಳಿಗೆ ಹೋಲಿಸಿದರೆ, ರುಕ್ಸೊಲಿಟಿನಿಬ್‌ ರೋಗಿಗಳಲ್ಲಿ ಸುಧಾರಣೆಯ ಸಮಯ ಗಮನಾರ್ಹವಾಗಿ ಕಡಿಮೆ ಇತ್ತು. ಶೇ. 90 ರಷ್ಟು ರೋಗಿಗಳು ಕೇವಲ 14 ದಿನಗಲಲ್ಲಿ ಸಿಟಿ ಸ್ಕ್ಯಾನ್ ಸುಧಾರಣೆಯಾಗಿದ್ದನ್ನು ಕಂಡುಕೊಂಡಿದ್ದರು. ಈ ಮಾತ್ರೆಯನ್ನು ಸೇವಿಸದ ಮೂರು ರೋಗಿಗಳು ಶ್ವಾಸಕೋಶ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ರುಕ್ಸೊಲಿಟಿನಿಬ್ ಸ್ವೀಕರಿಸಿದ ಎಲ್ಲ ತೀವ್ರತರದ ರೋಗಿಗಳೂ ಬದುಕುಳಿದಿದ್ದಾರೆ.

ಈ ಔಷಧದ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಬೇಕು. ದೊಡ್ಡ ಮಟ್ಟದ ಮೂರನೇ ಹಂತದ ಅಧ್ಯಯನವನ್ನು ಇನ್ಸೈಟ್ ಮತ್ತು ನೊವಾರ್ಟಿಸ್ ಮಾಡುತ್ತಿದೆ. ಹುವಾಂಗ್ ಪ್ರಕಾರ 400 ರಷ್ಟು ತೀವ್ರ ಕೋವಿಡ್ 19 ರೋಗಿಗಳ ಮೇಲೆ ಈ ಔಷಧ ಪ್ರಯೋಗಿಸಲಾಗುತ್ತಿದೆ. ಕೆಲವೇ ತಿಂಗಳುಗಳಲ್ಲಿ ಅಧ್ಯಯನದ ಆರಂಭಿಕ ವಿವರಣೆ ಲಭ್ಯವಾಗಲಿದೆ. ಕೋವಿಡ್ 19 ರೋಗಿಗಳಲ್ಲಿ ತೀವ್ರ ಗುಣಲಕ್ಷಣಗಳನ್ನು ಹೊಂದಿದ್ದು, ಸೈಟೋಕಿನ್ ಮತ್ತು ಉರಿಯೂತವನ್ನು ಹೊಂದಿರವವರಲ್ಲಿ ಈ ವಿಧಾನ ಉತ್ತಮವಾಗಿ ಕೆಲಸ ಮಾಡುತ್ತಿರುವ ಪ್ರಥಮ ಔಷಧ ಇದಾಗಿದೆ. ದಿನಕ್ಕೆ ಎರಡು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವ ರೋಗಿಗಳಲ್ಲಿ ಗಮನಾರ್ಹವಾದ ಇತರ ಯಾವುದೇ ಅಡ್ಡ ಪರಿಣಾಮಗಳೂ ಇಲ್ಲ.

ಸೈಟೋಕಿನ್ ಸ್ಟಾರ್ಮ್‌ ಅನ್ನು ಕಡಿಮೆ ಮಾಡುವುದು

ಕೋವಿಡ್ 19 ರೋಗವನ್ನು ಹೊಂದಿದ ರೋಗಿಗಳಲ್ಲಿ ಕಂಡುಬರುವ ಸೈಟೋಕಿನ್ ಸ್ಟಾರ್ಮ್‌ ಎಂಬುದು, ಸೆಕೆಂಡರಿ ಎಚ್‌ಎಲ್‌ಎಚ್‌ ಹೊಂದಿರುವ ಮಕ್ಕಳಲ್ಲಿ ರೋಗನಿರೋಧಕ ವ್ಯವಸ್ಥೆಯಿಂದಾಗಿ ಕೋಶಗಳು ಊದಿಕೊಳ್ಳುವುದಕ್ಕೆ ಹೋಲಿಕೆಯಾಗುತ್ತದೆ. ಕೋವಿಡ್ 19 ರೋಗಕ್ಕೆ ಔಷಧವನ್ನು ಸಂಶೋಧನೆ ಮಾಡುತ್ತಿರುವ ಹುವಾಂಗ್ ಮತ್ತು ವಿಶ್ವದ ಇತರ ವಿಜ್ಞಾನ ಸಮುದಾಯವು ಈ ಎರಡೂ ಸಂಗತಿಗಳನ್ನು ಗಮನಿಸಿದವು. ಎರಡೂ ಸಮಸ್ಯೆಗಳು ಒಂದೇ ರೀತಿಯವು ಎಂಬುದನ್ನು ಕಂಡುಕೊಂಡರು. ಲ್ಯಾಬ್‌ನಲ್ಲಿ ಮಾನವ ಸೆಕೆಂಡರಿ ಎಚ್‌ಎಲ್‌ಎಚ್‌ ಅನ್ನು ಅನುಕರಿಸುವ ಲ್ಯಾಬೊರೇಟರಿ ಇಲಿಯಲ್ಲಿ ಕಂಡುಬರುವ ಹಲವು ಗುಣಲಕ್ಷಣಗಳು ಹೋಲಿಕೆಯಾಗುತ್ತಿರುವುದನ್ನೂ ಅವರು ಕಂಡುಕೊಂಡಿದ್ದಾರೆ.

ಪ್ರೀಕ್ಲಿನಿಕಲ್ ಲ್ಯಾಬೊರೇಟರಿ ಸಂಶೋಧನೆಯಲ್ಲಿ ಸೆಕೆಂಡರಿ ಎಚ್‌ಎಲ್‌ಎಚ್‌ಗೆ ಚಿಕಿತ್ಸೆ ನೀಡಲು ರುಕ್ಸೊಲಿಟಿನಿಬ್ ಔಷಧವನ್ನು ಚೀನಾದ ವುಹಾನ್‌ನಲ್ಲಿನ ಸಂಶೋಧಕರ ಸಹಾಯದಿಂದ ಕಂಡುಕೊಳ್ಳಲಾಗಿದೆ. ಲ್ಯುಕೇಮಿಯಾ ಸೇರಿದಂತೆ ಇತರ ರಕ್ತ ಸಂಬಂಧಿ ರೋಗಗಳಿಗೆ ಚಿಕಿತ್ಸೆ ನೀಡಲೂ ಈ ಔಷಧವನ್ನು ಬಳಸಲಾಗುತ್ತಿದೆ. ವುಹಾನ್‌ನಲ್ಲಿರುವ ನಮ್ಮ ಸಂಶೋಧಕರನ್ನು ನಾನು ಸಂಪರ್ಕಿಸಿ, ನಾವು ಕಂಡುಕೊಂಡಿದ್ದನ್ನು ವಿವರಿಸಿದೆ. ಕೋವಿಡ್ 19 ರೋಗವನ್ನು ತೀವ್ರತರವಾಗಿ ಹೊಂದಿರುವ ರೋಗಿಗಳಲ್ಲಿ ಬಹು ಅಂಗ ಉರಿಯೂತವನ್ನು ತಡೆಯಲು ಈ ಔಷದವನ್ನು ಬಳಸಬಹುದು ಎಂದು ಶಿಫಾರಸು ಮಾಡಿದೆವು. ರೋಗ ತೀವ್ರ ವೇಗದಲ್ಲಿ ಹರಡುತ್ತಿತ್ತು. ನೂರಾರು ಜನರು ಸಾವನ್ನಪ್ಪುತ್ತಿದ್ದರು. ಈಗಿರುವ ಔಷಧವೇ ಹಲವು ಜೀವಗಳನ್ನು ರಕ್ಷಿಸಬಹುದು ಎಂದು ನಾವು ಯೋಚಿಸಿದೆವು. ಈ ಔಷಧವನ್ನು ಎಲ್ಲರಿಗೂ ಬಳಸುವುಂತೆ ನಾವು ಪ್ರೋತ್ಸಾಹಿಸಿದೆವು. ಚೀನಾದ ಸಹೋದ್ಯೋಗಿಗಳ ಸಹಭಾಗಿತ್ವದಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ನಾವು ಈ ಸಾಧನೆ ಮಾಡಿದ್ದೇವೆ. ಈ ರೋಗ ಹರಡುತ್ತಿರುವ ಹೊತ್ತಿನಲ್ಲಿ ಇಡೀ ವಿಶ್ವದ ವಿಜ್ಞಾನಿಗಳ ಬಳಗ ಇದಕ್ಕೆ ಔಷಧ ಕಂಡುಹಿಡಿಯುವಲ್ಲಿ ಭಾರಿ ಧಾವಂತದಲ್ಲಿತ್ತು ಎಂದು ಹುವಾಂಗ್ ಹೇಳಿದ್ದಾರೆ. ಈ ಅಧ್ಯಯನದ ವೇಳೆ, ಉರಿಯೂತಕ್ಕೆ ಸಂಬಂಧಿಸಿದ ಇತರ ಹಲವು ರೋಗಗಳಿಗೂ ರುಕ್ಸಾಲಿಟಿನಿಬ್ ಎಂಬ ಔಷಧ ಪರಿಣಾಮಕಾರಿಯಾಗುತ್ತದೆ ಎಂದು ಕಂಡುಬಂದಿದೆ. ಈ ಅಧ್ಯಯನಕ್ಕೆ ತಾಂಗ್ಜಿ ಹಾಸ್ಪಿಟಲ್‌ನ ತುರ್ತು ಸಂಶೋಧನೆ ಪ್ರಾಜೆಕ್ಟ್‌, ಹುವಾಝಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಕೂಡ ಧನಸಹಾಯ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.