ETV Bharat / bharat

10 ಕೋಟಿ ಮೌಲ್ಯದ ಕೇಬಲ್ ಕತ್ತರಿಸಿ ಹಾನಿಗೊಳಿಸಿದ ಚೈನೀಸ್​ ಇಂಜಿನಿಯರ್​ ಬಂಧನ - ಆಂಧ್ರದ ಚಿತ್ತೂರಿನಲ್ಲಿ ಚೈನೀಸ್​ ಇಂಜಿನಿಯರ್​ ಬಂಧನ

ಕಂಪನಿಯೊಂದರ ಕೇಬಲ್ ಕತ್ತರಿಸಿ ನಷ್ಟಕ್ಕೆ ಕಾರಣನಾದ ಚೀನಾ ಇಂಜಿನಿಯರ್​ನ್ನು ಆಂಧ್ರದ ಚಿತ್ತೂರಿನಲ್ಲಿ ಬಂಧಿಸಲಾಗಿದೆ.

Chinese engineer arrested for cutting cable at chittoor
ಚೈನೀಸ್​ ಇಂಜಿನಿಯರ್​ ಬಂಧಿಸಿದ ಪೊಲೀಸರು
author img

By

Published : Oct 29, 2020, 9:12 PM IST

ಚಿತ್ತೂರು (ಆಂಧ್ರ ಪ್ರದೇಶ) : ಕೇಬಲ್ ಅಳವಡಿಕೆಯ ವೇಳೆ ಕಂಪನಿಯೊಂದರ ಬೆಳೆ ಬಾಳುವ ಕೇಬಲ್​ಗಳನ್ನು ಕತ್ತರಿಸಿ ಹಾನಿಗೊಳಿಸಿದ ಆರೋಪದಲ್ಲಿ ಚೀನಾ ಮೂಲದ ಇಂಜಿನಿಯರ್​ ಒಬ್ಬನ್ನು ಆಂಧ್ರ ಪೊಲೀಸರು ಬಂಧಿಸಿದ್ದಾರೆ.

ಫಾಂಗ್ ಚಾಂಗಿಜ್ ಬಂಧಿತ ಆರೋಪಿ. ಈತ ಚಿತ್ತೂರು ಜಿಲ್ಲೆ ಎರ್ಪೆಡು ಮಂಡಲದ ವಿಕೃತಮಾಲಾದಲ್ಲಿರುವ ಫಾಕ್ಸ್ ಲಿಂಕ್ ಇಂಡಿಯಾ ಪ್ರೈ.ಲಿ ಎಂಬ ಕಂಪನಿಗೆ ಕೇಬಲ್ ಅಳವಡಿಸಲು ಬಂದಿದ್ಧ. ಈ ವೇಳೆ ಕಂಪನಿಯ ಬೆಳೆ ಬಾಳುವ ಕೇಬಲ್​ಗಳನ್ನು ಕತ್ತರಿಸಿ ಹಾನಿಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಚೈನೀಸ್​ ಇಂಜಿನಿಯರ್​ ಬಂಧಿಸಿದ ಪೊಲೀಸರು

ಕೇಬಲ್ ಕತ್ತರಿಸಿದ್ದರಿಂದ ಕಂಪನಿಗೆ ಸುಮಾರು 10 ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ಈ ತಿಂಗಳ 21 ರಂದು ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಚೀನಾ ಮೂಲದ ಕಂಪನಿಯೊಂದರ ವ್ಯಕ್ತಿಯ ಆದೇಶದ ಮೇರೆಗೆ ತಾನು ಕೃತ್ಯವೆಸಗಿರುವುದಾಗಿ ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.