ಚೀನಾ (ಪಿಟಿಐ): ಚೀನಾ ವುಹಾನ್‌ನಲ್ಲಿ ಶುರುವಾದ ಕೋವಿಡ್-19 ವೈರಸ್ ದಾಳಿಗೆ ತುತ್ತಾದವರ ಸಂಖ್ಯೆ ಇದೀಗ 2 ಸಾವಿರ ತಲುಪಿದೆ. ಜಾಗತಿಕವಾಗಿ ವಿವಿಧ ದೇಶಗಳಿಗೆ ಹಬ್ಬುತ್ತಲೇ ಇರುವ ಮಾರಕ ವೈರಸ್ ಸಾಕಷ್ಟು ಆತಂಕ ಸೃಷ್ಟಿಸುತ್ತಿದೆ.
ಚೀನಾದ ಆರೋಗ್ಯ ಆಯೋಗವು ವೈರಸ್ ಸೋಂಕಿಗೆ ಒಳಗಾದ 1,693 ಹೊಸ ಪ್ರಕರಣಗಳನ್ನು ವರದಿ ಮಾಡಿದ್ದು, ದೇಶಾದ್ಯಂತ 75,000 ಪ್ರಕರಣ ದಾಖಲಾಗಿವೆ. ಇದರಲ್ಲಿ ಬಹುತೇಕ ಪ್ರಕರಣಗಳು ಹುಬೈ ಪ್ರಾಂತ್ಯದಲ್ಲೇ ದಾಖಲಾಗಿವೆ ಅನ್ನೋದನ್ನು ಇಲ್ಲಿ ಗಮನಿಸಬೇಕು. ಕಳೆದ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಈ ವೈರಸ್ ಹುಬೈನಲ್ಲಿ ಕಾಣಿಸಿಕೊಂಡಿದ್ದು ಬಳಿಕ ರಾಷ್ಟ್ರವ್ಯಾಪಿ, ಜಗತ್ತಿನಾದ್ಯಂತ ಹರಡೋಕೆ ಶುರುವಾಗಿದೆ.
ಕಳೆದ 24 ಗಂಟೆಗಳಲ್ಲಿ 136 ಸಾವು:
ಹುಬೈ ಪ್ರದೇಶದಲ್ಲಿ ಕಳೆದ ಇಪ್ಪತ್ತ ನಾಲ್ಕು ಗಂಟೆಗಳ ಅವಧಿಯಲ್ಲಿ ಒಟ್ಟು 136 ಸಾವು ಸಂಭವಿಸಿದ್ದು ರೋಗ ಬಾಧೆಯ ತೀವ್ರತೆಯನ್ನು ತಿಳಿಸುತ್ತದೆ.
ಸೋಂಕು ಹರಡುವಿಕೆ ತಡೆಗಟ್ಟಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದು ಈ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ ಎಂದು ಅಧ್ಯಕ್ಷ ಜಿನ್ಪಿಂಗ್ ತಿಳಿಸಿದ್ದಾರೆ.