ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿವಾದವನ್ನು ಎತ್ತಿಹಿಡಿಯಲು ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿರುವ ಚೀನಾಗೆ ತಿರುಗೇಟು ನೀಡಿದ್ದು, ಜಾಗತಿಕ ಒಮ್ಮತಕ್ಕೆ ಬೀಜಿಂಗ್ ತಲೆದೂಗಬೇಕು, ಭವಿಷ್ಯದಲ್ಲಿ ಇಂತಹ ನಡೆಗಳಿಂದ ದೂರ ಇರಬೇಕು ಎಂದು ಎಚ್ಚರಿಕೆ ನೀಡಿದೆ.
ಚೀನಾದ ಸಹಾಯದೊಂದಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನವು ಪದೇ ಪದೆ ಕಾಶ್ಮೀರ ವಿವಾದವನ್ನು ಎತ್ತಿಹಿಡಿಯುತ್ತಿದೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಇತರ ರಾಷ್ಟ್ರಗಳ 15 ಸದಸ್ಯರನ್ನೊಳಗೊಂಡ ಮಂಡಳಿಯು ಕಾಶ್ಮೀರ ವಿವಾದವು ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವಿಷಯವೆಂದು ಅಭಿಪ್ರಾಯಪಟ್ಟಿದ್ದು, ಇತರ ದೇಶಗಳ ಸಹಾಯ ಪಡೆಯುವಲ್ಲಿ ಪಾಕಿಸ್ತಾನ ಮತ್ತೆ ವಿಫಲವಾಗಿದೆ.
-
Raveesh Kumar, MEA on China holding informal closed-door consultation on Kashmir in UNSC: In our view, China should seriously reflect on this global consensus, draw the proper lessons and refrain from taking such action in the future. https://t.co/J1nlvJwUSp
— ANI (@ANI) January 16, 2020 " class="align-text-top noRightClick twitterSection" data="
">Raveesh Kumar, MEA on China holding informal closed-door consultation on Kashmir in UNSC: In our view, China should seriously reflect on this global consensus, draw the proper lessons and refrain from taking such action in the future. https://t.co/J1nlvJwUSp
— ANI (@ANI) January 16, 2020Raveesh Kumar, MEA on China holding informal closed-door consultation on Kashmir in UNSC: In our view, China should seriously reflect on this global consensus, draw the proper lessons and refrain from taking such action in the future. https://t.co/J1nlvJwUSp
— ANI (@ANI) January 16, 2020
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ದುರುಪಯೋಗ ಪಡಿಸಿಕೊಳ್ಳಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಬಹು ರಾಷ್ಟ್ರಗಳ ಅಭಿಪ್ರಾಯಕ್ಕೆ ಚೀನಾ ತಲೆದೂಗಬೇಕು ಹಾಗೂ ಕಾಶ್ಮೀರದ ವಿಚಾರದಲ್ಲಿ ಮೂಗು ತೂರಿಸಬಾರದು ಎಂದು ಹೇಳಿದ್ದಾರೆ.
ಇನ್ನು ಇದೇ ವೇಳೆ ಭಾರತದಲ್ಲಿ ಈ ಬಾರಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (ಎಸ್ಸಿಒ)ಶೃಂಗಸಭೆಗೆ ಶಾಂಘೈ ಕೂಟದ ಎಲ್ಲಾ ಎಂಟು ರಾಷ್ಟ್ರಗಳಿಗೂ ಆಹ್ವಾನ ನೀಡಲಾಗಿದೆ ಎಂದು ಹೇಳುವ ಮೂಲಕ ಪಾಕಿಸ್ತಾನದ ಪಾಲ್ಗೊಳ್ಳುವಿಕೆಯನ್ನು ರವೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.