ಬೀಜಿಂಗ್(ಚೀನಾ): ತನ್ನ ಅಪರಾಧ ಕಾನೂನುಗಳಲ್ಲಿ ಕೆಲವು ಮಹತ್ವದ ತಿದ್ದುಪಡಿ ತರಲು ಚೀನಾ ಮುಂದಾಗಿದೆ. 14ರಿಂದ 12 ವರ್ಷ ವಯಸ್ಸಿನೊಳಗಿರುವ ಬಾಲಕರು ಅಪರಾಧ ಮಾಡಿದರೆ ಅದನ್ನು ಸಾಮಾನ್ಯ ಅಪರಾಧ ಎಂಬಂತೆ ಪರಿಗಣಿಸಲಾಗುತ್ತದೆ. ಈ ಮೂಲಕ ಮಕ್ಕಳಿಂದ ನಡೆಯುವ ಗಂಭೀರ ಅಪರಾಧಗಳನ್ನು ತಡೆಯಲು ಸಿದ್ಧತೆ ನಡೆಸಿದೆ.
ಈ ಮೊದಲು 14 ಹಾಗೂ 16 ವಯಸ್ಸಿನೊಳಗಿನವರು ಅಪರಾಧ ಮಾಡಿದರೆ ಅದನ್ನು ಸಾಮಾನ್ಯ ಅಪರಾಧ ಎಂದು ಗುರ್ತಿಸಲಾಗುತ್ತಿತ್ತು. ಈಗ ಹೊಸ ತಿದ್ದುಪಡಿಯಿಂದಾಗಿ ಬಾಲಾಪರಾಧಿಗಳ ವಯಸ್ಸನ್ನು 12ಕ್ಕೆ ಇಳಿಸಲಾಗಿದೆ.
ಓದಿ: ತವಾಂಗ್ ಸೆಕ್ಟರ್ನಲ್ಲಿ ಕಟ್ಟೆಚ್ಚರ.. ಚೀನಾ ದಾಳಿ ನಡೆಸಲು ಅಸಾಧ್ಯ ಎಂದ ಐಟಿಬಿಪಿ
ಕೆಲವು ಅಪರಾಧಗಳಿಗೆ ಮಾತ್ರ ಈ ತಿದ್ದುಪಡಿ ಅನ್ವಯವಾಗಲಿದ್ದು, ಉದ್ದೇಶಪೂರ್ವಕ ಹತ್ಯೆ ಅಥವಾ ಉದ್ದೇಶಪೂರ್ವಕ ಹಲ್ಲೆಯಿಂದ ಆದ ಸಾವು ಹಾಗೂ ಇತರ ಅಪರಾಧದಿಂದ ವ್ಯಕ್ತಿ ತೀವ್ರ ಅಂಗ ವೈಕಲ್ಯಕ್ಕೆ ಒಳಗಾದರೆ ಅಂತಹ ಬಾಲಾಪರಾಧಿಗಳ ವಯಸ್ಸು 14ರಿಂದ 12 ಇದ್ದರೆ ಅನ್ನು ಸಾಮಾನ್ಯ ವ್ಯಕ್ತಿಯ ಅಪರಾಧ ಎಂದು ಪರಿಗಣಿಸಲಾಗುತ್ತದೆ.
ಚೀನಾದ ಶಾಸಕಾಂಗವಾದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ನ ಸ್ಟ್ಯಾಂಡಿಂಗ್ ಕಮಿಟಿಯಲ್ಲಿ ಈ ತಿದ್ದುಪಡಿ ಅಂಗೀಕಾರವಾಗಿದೆ. ಈ ಕಾನೂನು ಮಾರ್ಚ್ 1ರಿಂದ ಜಾರಿಗೆ ಬರಲಿದೆ. ಈ ಕಾನೂನಿನಲ್ಲಿ ಗಂಭೀರ ಅಪರಾಧಗಳಲ್ಲಿ ಬಾಲಕರನ್ನೇ ಅಪರಾಧಕ್ಕೆ ಜವಾಬ್ದಾರರನ್ನಾಗಿ ಮಾಡಲಾಗುತ್ತದೆ.
ಕೆಲವು ವರ್ಷಗಳಿಂದ ಅಪ್ರಾಪ್ತರು ಗಂಭೀರ ಅಪರಾಧಗಳನ್ನು ಮಾಡಿ, ಶಿಕ್ಷೆಯಿಂದ ಪಾರಾಗುತ್ತಿದ್ದರು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಈ ರೀತಿಯ ಹೊಸ ಕಾನೂನನ್ನು ಜಾರಿಗೊಳಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
2019ರಲ್ಲಿ 10 ವರ್ಷದ ಬಾಲಕಿಯ ಹತ್ಯೆಗೆ ಸಂಬಂಧಿಸಿದಂತೆ, 13 ವರ್ಷದ ಬಾಲಕ ಗಂಭೀರ ಶಿಕ್ಷೆಯಿಂದ ಪಾರಾಗಿದ್ದರ ಹಿನ್ನೆಲೆಯಲ್ಲಿ ಜನಾಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದಾಗಿ ಅಪರಾಧ ಕಾನೂನಿಗೆ ಸ್ವಲ್ಪ ತಿದ್ದುಪಡಿ ತರಲಾಗಿದೆ.