ETV Bharat / bharat

ವಿಶೇಷ ಲೇಖನ: 'ಜಗತ್ತು ಕೊರೊನಾ ವಿರುದ್ಧ ಹೋರಾಡುತ್ತಿರುವ ಸಂದರ್ಭವನ್ನು ಚೀನಾ ದುರ್ಬಳಕೆ ಮಾಡಿಕೊಳ್ಳುತ್ತಿದೆ'

ಸುಮಾರು ಆರು ದಶಕಗಳ ಹಿಂದೆ ಜಗತ್ತಿನ ಎರಡು ಮಹಾಶಕ್ತಿಗಳಾದ ಅಮೆರಿಕ ಮತ್ತು ರಷ್ಯಾ ರಾಷ್ಟ್ರಗಳ ನಡುವೆ ಪರಮಾಣು ಅಸ್ತ್ರಗಳ ಪ್ರಯೋಗದ ಹಂತಕ್ಕೆ ತಂದು ಬಿಟ್ಟಿದ್ದ ಕ್ಯೂಬಾ ಕ್ಷಿಪಣಿ ಬಿಕ್ಕಟ್ಟಿನ ಲಾಭವನ್ನು ಪಡೆದುಕೊಳ್ಳುವ ಮೂಲಕ 1962 ರ ಚಳಿಗಾಲದಲ್ಲಿ ಭಾರತದ ಮೇಲೆ ದಾಳಿ ಮಾಡಿದ ಚೀನಾದ ಕಾರ್ಯತಂತ್ರವನ್ನು ಈ ಗಾಲ್ವಾನ್‌ ಪ್ರಕರಣ ಸಂಪೂರ್ಣವಾಗಿ ನೆನಪಿಸುತ್ತದೆ.

China
ಭಾರತ-ಚೀನಾ
author img

By

Published : Jun 17, 2020, 7:30 PM IST

ಭಾರತ-ಚೀನಾ ಗಡಿ ಪ್ರದೇಶದಲ್ಲಿ ಉಂಟಾಗಿರುವ ಸಂಘರ್ಷದ ಪರಿಸ್ಥಿತಿಯು ಕೊರೊನಾ ವೈರಸ್ ವಿರುದ್ಧ ಇಡೀ ಜಗತ್ತು ಸಮರ ನಡೆಸುತ್ತಿರುವ ಈ ಸಂದರ್ಭದಲ್ಲಿ ಅದರ ಲಾಭ ಪಡೆಯಲು ಮತ್ತು ಅಮೆರಿಕದ ದೇಶೀಯ ಸಮಸ್ಯೆಗಳ ಪರಿಸ್ಥಿತಿಯನ್ನ ತಮ್ಮ ಪರವಾಗಿ ಬದಲಾಯಿಸಿಕೊಳ್ಳಲು ಚೀನಾ ಸರ್ಕಾರವು ಕೈಗೊಂಡಿರುವ ಭಾರಿ ಎಚ್ಚರಿಕೆಯ ಮತ್ತು ಲೆಕ್ಕಾಚಾರದ ಯೋಜನೆ ಎನ್ನುತ್ತಾರೆ ಮಿಲಿಟರಿ ಮತ್ತು ಕಾರ್ಯತಂತ್ರದ ತಜ್ಞರು. ಸುಮಾರು ಆರು ದಶಕಗಳ ಹಿಂದೆ ಜಗತ್ತಿನ ಎರಡು ಮಹಾಶಕ್ತಿಗಳಾದ ಅಮೆರಿಕ ಮತ್ತು ರಷ್ಯಾ ರಾಷ್ಟ್ರಗಳ ನಡುವೆ ಪರಮಾಣು ಅಸ್ತ್ರಗಳ ಪ್ರಯೋಗದ ಹಂತಕ್ಕೆ ತಂದು ಬಿಟ್ಟಿದ್ದ ಕ್ಯೂಬಾ ಕ್ಷಿಪಣಿ ಬಿಕ್ಕಟ್ಟಿನ ಲಾಭವನ್ನು ಪಡೆದುಕೊಳ್ಳುವ ಮೂಲಕ 1962 ರ ಚಳಿಗಾಲದಲ್ಲಿ ಭಾರತದ ಮೇಲೆ ದಾಳಿ ಮಾಡಿದ ಚೀನಾದ ಕಾರ್ಯತಂತ್ರವನ್ನು ಈ ಗಾಲ್ವಾನ್‌ ಪ್ರಕರಣ ಸಂಪೂರ್ಣವಾಗಿ ನೆನಪಿಸುತ್ತದೆ.

1962 ರಲ್ಲಿ ವರ್ಷ ಆರಂಭವಾದ ಕ್ಯೂಬಾ ಕ್ಸಿಪಣಿ ಬಿಕ್ಕಟ್ಟು, ಅಕ್ಟೋಬರ್ 16 ರಂದು ಎರಡು ಮಹಾಶಕ್ತಿಗಳ ನಡುವೆ ಪೂರ್ಣ ಪ್ರಮಾಣದ ಸಂಘರ್ಷದ ಹಂತಕ್ಕೆ ಬಂದು ಬಿಟ್ಟಿತ್ತು.

ಇದಾದ ನಾಲ್ಕು ದಿನಗಳಲ್ಲಿ ಅಂದರೆ ಅಕ್ಟೋಬರ್‌ 20, 1962ರಲ್ಲಿ ಕ್ಯೂಬಾದಲ್ಲಿ ಸೋವಿಯತ್ ರಷ್ಯಾ ಕ್ಷಿಪಣಿಗಳನ್ನು ನಿಯೋಜಿಸಿದ್ದ ಸಂದರ್ಭ ಎರಡು ಮಹಾಶಕ್ತಿಗಳಾದ ಅಮೆರಿಕ ಮತ್ತು ಹಿಂದಿನ ಯುಎಸ್ಎಸ್ಆರ್(ಸೋವಿಯತ್ ಸಮಾಜವಾದಿ ಗಣರಾಜ್ಯಗಳ ಒಕ್ಕೂಟ) ರಾಷ್ಟ್ರಗಳು ಯುದ್ಧ ಬಿಕ್ಕಟ್ಟಿನಲ್ಲಿ ತೊಡಗಿದ್ದ ಆ ಸಂದರ್ಭದಲ್ಲಿ ಭಾರತ-ಚೀನಾ ಯುದ್ಧದಲ್ಲಿ ಮಧ್ಯಪ್ರವೇಶಿಸುವ ಸ್ಥಿತಿಯಲ್ಲಿರದಿದ್ದಾಗ ಕಾದು ಹೊಂಚು ಹಾಕಿದ್ದ ಚೀನಾ, ಭಾರತದ ಮೇಲೆ ದಾಳಿ ಮಾಡಿತ್ತು.

ಅಂದಿನ ಅಮೆರಿಕ ಅಧ್ಯಕ್ಷ ಜಾನ್ ಎಫ್. ಕೆನಡಿ 1962ರ ಅಕ್ಟೋಬರ್ 22 ರಂದು ಕ್ಯೂಬಾದ ನೌಕಾ ದಿಗ್ಬಂಧನಕ್ಕೆ ಆದೇಶಿಸಿದರು. ಬಳಿಕ ಅಂತಿಮವಾಗಿ ಎರಡು ಶಕ್ತಿ(ಅಮೆರಿಕ ಮತ್ತು ಸೋವಿಯತ್‌ ರಷ್ಯಾ)ಗಳ ನಡುವಿನ ತೀವ್ರ ಮಾತುಕತೆಯ ನಂತರ ಅದನ್ನು 1962 ರ ನವೆಂಬರ್ 21 ರಂದು ತೆಗೆದುಹಾಕಲಾಯಿತು.

ಸರಿ ಸುಮಾರು ಅದೇ ಸಂದರ್ಭದಲ್ಲಿ ಚೀನಾ ಅಂದರೆ, 1962ರ ಅಕ್ಟೋಬರ್ 20 ರಂದು ಭಾರತದ ವಿರುದ್ಧ ತನ್ನ ಯುದ್ಧವನ್ನು ಪ್ರಾರಂಭಿಸಿತು. ಬಳಿಕ, ತನ್ನ ಮಿಲಿಟರಿ ಉದ್ದೇಶಗಳನ್ನು ಸಾಧಿಸಿದ ನಂತರ 1962 ರ ನವೆಂಬರ್‌ನಲ್ಲಿ ಏಕಪಕ್ಷೀಯವಾಗಿ ಕದನ ವಿರಾಮವನ್ನು ಘೋಷಿಸಿತು.

ಚೀನಾದ ಪ್ರಧಾನ ಮಂತ್ರಿ ಝೌ ಎನ್ಲೈ 1962 ರ ಅಕ್ಟೋಬರ್ 19 ರಂದು ಏಕಪಕ್ಷೀಯ ನಿರ್ಧಾರದ ಅನ್ವಯ ಕದನ ವಿರಾಮವನ್ನು ಘೋಷಣೆ ಮಾಡಿದರು. ಅದು 1962ರ ನವೆಂಬರ್ 21 ರಿಂದ ಜಾರಿಗೆ ಬಂದಿತು.

"ಚೀನಾ ಭಾರತದ ಮೇಲೆ ನಡೆಸಿರುವ ದಾಳಿ ಸಮಯ ಬಹಳ ಮುಖ್ಯ. ಈ ಆಕ್ರಮಣ ಮತ್ತು ಪ್ರಕ್ಷುಬ್ಧ ವಾತಾವರಣ, ಸಂಭವಿಸಿದ ಸಾವು-ನೋವುಗಳು ನಿಜವಾಗಿಯೂ ಆಕಸ್ಮಿಕವಲ್ಲ ಅಥವಾ ಇದು ಸ್ಥಳೀಯ ವಿಷಯ ಅಲ್ಲವೇ ಅಲ್ಲ" ಎಂದು ಶಾಂಘೈನಲ್ಲಿ ಭಾರತದ ಕಾನ್ಸುಲ್ ಜನರಲ್ ಆಗಿದ್ದ ನವದೆಹಲಿ ಮೂಲದ ಮಾಜಿ ರಾಜತಾಂತ್ರಿಕ ರಾಯಭಾರಿ ವಿಷ್ಣು ಪ್ರಕಾಶ್ ಹೇಳಿದ್ದಾರೆ.

"ಇದು ಸ್ಪಷ್ಟವಾಗಿ ಯೋಜನೆ ಮಾಡಿಕೊಂಡು, ಚೀನಾದ ಲೆಕ್ಕಚಾರದ ಕ್ರಮ. ದಾಳಿಯ ಸಮಯ ಮತ್ತು ಹಲವಾರು ಇತರ ಅಂಶಗಳಿಂದಾಗಿ ಸ್ಪಷ್ಟವಾಗಿ ಇದು ಸಂಘಟಿತ ದಾಳಿ ಆಗಿದೆ. ಇದರ ಜೊತೆಗೆ ಮೇಲಿನ ಉನ್ನತ ಆದೇಶ ಬರದ ಹೊರತು ಈ ರೀತಿ ದಾಳಿ ಖಂಡಿತವಾಗಿಯೂ ಸಾಧ್ಯವಿಲ್ಲ" ಎಂದು ರಾಯಭಾರಿ ವಿಷ್ಣು ಪ್ರಕಾಶ್ ಈಟಿವಿ ಭಾರತಕ್ಕೆ ತಿಳಿಸಿದರು.

ದಕ್ಷಿಣ ಕೊರಿಯಾದ ಭಾರತದ ರಾಯಭಾರಿಯಾಗಿ ಕೆಲಸ ಮಾಡಿ ಮತ್ತು ಕೆನಡಾದ ಹೈ ಕಮಿಷನರ್ ಆಗಿದ್ದ ಮಾಜಿ ರಾಜತಾಂತ್ರಿಕ ವಿಷ್ಣು ಪ್ರಕಾಶ್‌, ಈ ವರ್ಷದ ಆರಂಭದಲ್ಲಿ ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ರೋಗವು ಉಲ್ಬಣಗೊಂಡಾಗಿನಿಂದ ಅದರ ಎಲ್ಲಾ ಆಗುಹೋಗುಗಳನ್ನು, ಚೀನಾದ ಉಲ್ಲಂಘನೆಯನ್ನು ಗಮನಸೆಳೆದಿದ್ದಾರೆ.

ಪ್ರತಿ ದೇಶವು ಏನನ್ನಾದರೂ ಯೋಜಿಸುವಾಗ ಸಮಯವನ್ನು ನೋಡುತ್ತದೆ ಮತ್ತು ಕಪಟಿ ಚೀನಾ ದೇಶವು ಕೋವಿಡ್ -19 ಬಿಕ್ಕಟ್ಟನ್ನು ತನ್ನ ಲಾಭಕ್ಕೆ ಒಂದು ಸೂಕ್ತ ಸಮಯ ಎಂದು ನೋಡಿದೆ ಎಂದು ಭಾರತೀಯ ಸೇನೆಯ ಉತ್ತರ ಕಮಾಂಡ್‌ನ GOCಯಾಗಿ ಲಡಾಖ್ ಪ್ರದೇಶದಲ್ಲಿ ಚೀನಾ ಬಳಿಯ ದೇಶದ ಗಡಿ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿದ್ದ ಲೆಫ್ಟಿನೆಂಟ್ ಜನರಲ್ (ನಿವೃತ್ತ) ದೀಪೇಂದ್ರ ಸಿಂಗ್ ಹೂಡಾ ಹೇಳುತ್ತಾರೆ.

"ಪ್ರತಿಯೊಬ್ಬರೂ ಏನನ್ನಾದರೂ ಯೋಜಿಸಿದಾಗ ಸೂಕ್ತ ಸಮಯವನ್ನು ನೋಡುತ್ತಾರೆ ಮತ್ತು ಇದು ಒಂದು ಚೀನಾದ ಬಹು ದೊಡ್ಡ ಮಹತ್ವದ ಕ್ರಮವಾಗಿದೆ. ಆದ್ದರಿಂದ ಅವರು ಬಳಸಬಹುದಾದ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಪರಿಸ್ಥಿತಿಗಳು ಯಾವುವು ಎಂಬುದನ್ನು ಅವರು ಖಂಡಿತವಾಗಿ ನೋಡುತ್ತಾರೆ" ಎಂದು ಡಿಎಸ್ ಹೂಡಾ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

"ಭಾರತ ದೇಶವು ಕೊರೊನಾ ವೈರಸ್ ಮತ್ತು ಅದರ ಆರ್ಥಿಕ ಸಮಸ್ಯೆಗಳ ವಿರುದ್ಧ ಹೋರಾಡುತ್ತಿರುವುದನ್ನು ಅವರು ನೋಡಿದ್ದಾರೆ. ಆದ್ದರಿಂದ ದಾಳಿ ಮಾಡಲು ಇದು ಒಂದು ಸೂಕ್ತ ಕ್ಷಣ ಎಂದು ಅವರು ಭಾವಿಸಿದ್ದಾರೆ" ಎಂದು ಜನರಲ್ ಹೂಡಾ ಹೇಳಿದ್ದಾರೆ.

ಕಳೆದ 5-6 ವರ್ಷಗಳಲ್ಲಿ ಚೀನಾ ತನ್ನ ಮಿಲಿಟರಿ ಮತ್ತು ಸ್ಟ್ರಾಟಜಿ ಹಾಗೂ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುತ್ತಿದೆ. ಆ ಮೂಲಕ ಅದು ತನ್ನ ನೆರೆಹೊರೆ ದೇಶಗಳೊಂದಿಗೆ ಇರುವ ಯಥಾಸ್ಥಿತಿ ಬದಲಾಯಿಸುವ ಅವಕಾಶವನ್ನು ಎದುರು ನೋಡುತ್ತಿತ್ತು ಎಂದು ಭಾರತದ ಪ್ರಮುಖ ಥಿಂಕ್ ಟ್ಯಾಂಕ್ ಅಬ್ಸರ್ವರ್ ರಿಸರ್ಚ್ ಫೌಂಡೇಶನ್ (ORF) ನಲ್ಲಿ ಪರಮಾಣು ಮತ್ತು ಬಾಹ್ಯಾಕಾಶ ನೀತಿ ಉಪಕ್ರಮದ ಮುಖ್ಯಸ್ಥ ಡಾ. ರಾಜೇಶ್ವರಿ ರಾಜಗೋಪಾಲನ್ ಹೇಳುತ್ತಾರೆ.

"ಸ್ಪಷ್ಟವಾಗಿ, ಅವರು ಪಕ್ಕಾ ಪ್ಲಾನ್‌ ಮಾಡಿ ಈ ಕೆಲಸ ಮಾಡಿದ್ದಾರೆ. ಇದು ರಾತ್ರೋ ರಾತ್ರಿ ಆದ ಬೆಳವಣಿಗೆ ಖಂಡಿತಾ ಅಲ್ಲವೇ ಅಲ್ಲ" ಎಂದು ರಾಜೇಶ್ವರಿ ರಾಜಗೋಪಾಲನ್ ಈಟಿವಿ ಭಾರತಕ್ಕೆ ತಿಳಿಸಿದರು.

ವಿಶೇಷವಾಗಿ ಅತ್ಯಂತ ಎತ್ತರದ ಮತ್ತು ದುರ್ಗಮ ಪ್ರದೇಶಗಳಲ್ಲಿ ಚೀನಾ ತನ್ನ ಸೈನ್ಯ ಮತ್ತು ವಾಯುಪಡೆ ಎರಡನ್ನೂ ಒಳಗೊಂಡ ಜಂಟಿ ತಾಲೀಮು ನಡೆಸುವ ಮೂಲಕ ತನ್ನ ಮಿಲಿಟರಿಯಲ್ಲಿನ ಕಾರ್ಯಾಚರಣೆಯ ಅನುಭವದ ಕೊರತೆಯನ್ನು ನೇಗಿಕೊಳ್ಳಲು ಪ್ರಯತ್ನಿಸುತ್ತಿದೆ ಎನ್ನುತ್ತಾರೆ ಡಾ. ರಾಜೇಶ್ವರಿ ರಾಜಗೋಪಾಲನ್.

"ನಾವು ಕಳೆದ 5-7 ವರ್ಷಗಳಲ್ಲಿ ಟಿಬೆಟ್ ಸ್ವಾಯತ್ತ ಪ್ರದೇಶ ಮತ್ತು ಚೀನಾ-ಭಾರತ ಗಡಿ ಪ್ರದೇಶಗಳಲ್ಲಿನ ಪಿಎಲ್‌ಎ(ಪೀಪಲ್ಸ್‌ ಲಿಬರೇಶನ್‌ ಆರ್ಮಿ) ಯುದ್ಧ ತಾಲೀಮುಗಳನ್ನು ನೋಡುತ್ತಿದ್ದೇವೆ. ಪಿಎಲ್‌ಎ ಮತ್ತು ಪಿಎಲ್‌ಎ ವಾಯುಪಡೆ ಎರಡನ್ನೂ ಒಳಗೊಂಡ ತಮ್ಮ ಜಂಟಿ ಮಿಲಿಟರಿ ತಾಲೀಮನ್ನು ತಮ್ಮ ಕಾರ್ಯಾಚರಣಾ ಸಾಮರ್ಥ್ಯಗಳಲ್ಲಿ ಕಂಡು ಬಂದ ಯಾವುದೇ ಅಂತರವನ್ನು ಪರಿಹರಿಸಲು ಮತ್ತು ಜಂಟಿ ಸಾಮರ್ಥ್ಯವನ್ನು ಹೆಚ್ಚಿಸಲು, ವಿಶೇಷವಾಗಿ ಹೆಚ್ಚಿನ ದುರ್ಗಮ ಪ್ರದೇಶಗಳಲ್ಲಿ ಈ ಪ್ರಯತ್ನ ನಡೆಸುವುದನ್ನ ನಾವು ನೋಡಿದ್ದೇವೆ" ಎಂದು ಡಾ.ರಾಜೇಶ್ವರಿ ಹೇಳುತ್ತಾರೆ.

ಈ ವರ್ಷದ ಆರಂಭದ ಜನವರಿ ತಿಂಗಳಿಂದ ಹಿಡಿದು ಚೀನಾ, ತನ್ನ ಎಲ್ಲಾ ನೆರೆಹೊರೆ ದೇಶಗಳೊಂದಿಗೆ ಕಿರಿಕ್‌ ಮಾಡುವುದರಲ್ಲಿ ಮುಂಚೂಣಿಯಲ್ಲಿದೆ. ಅದು ಭಾರತವನ್ನು ಸಹ ಬಿಟ್ಟಿಲ್ಲ ಎಂದು ಅವರು ಹೇಳುತ್ತಾರೆ.

"ಸ್ಪಷ್ಟವಾಗಿ, ಅವರು ಇದಕ್ಕಾಗಿ ತುಂಬಾ ಸಮಯದಿಂದ ಯೋಜನೆ ರೂಪಿಸಿದ್ದಾರೆ. ಮತ್ತು ಇಡೀ ಪ್ರಪಂಚವು ಚೀನಾದಲ್ಲಿ ಹುಟ್ಟಿದ ಕೊರೊನಾ ವೈರಸ್ ಮಹಾಮಾರಿ ವಿರುದ್ಧ ಹೋರಾಡುವಲ್ಲಿ ತೊಡಗಿರುವ ಈ ಒಂದು ಸಮಯ ತಮ್ಮ ಬೇಳೆ ಬೇಯಿಸಿಕೊಳ್ಲಲು ಸೂಕ್ತವೆಂದು ಅವರು ಭಾವಿಸಿದ್ದಾರೆ" ಎಂದು ಡಾ.ರಾಜೇಶ್ವರಿ ಹೇಳಿದರು.

ಕಳೆದ ತಿಂಗಳು, ಪೂರ್ವ ಲಡಾಖ್ ಪ್ರದೇಶದಲ್ಲಿ ಚೀನಾ ಮತ್ತು ಭಾರತೀಯ ಸೇನಾ ಸೈನಿಕರ ನಡುವೆ ಸಂಘರ್ಷದ ವಿಡಿಯೋಗಳು ಹೊರಬಂದಾಗ ಈ ಸಮಸ್ಯೆ ಮೊದಲಿಗೆ ಪ್ರಾರಂಭವಾಗಿರುವುದು ಸ್ಪಷ್ಟವಾಯಿತು.

ಇದಾದ ಬಳಿಕ, ಎರಡೂ ದೇಶಗಳು ಭಾರೀ ಶಸ್ತ್ರಾಸ್ತ್ರಗಳನ್ನ ಇಟ್ಟುಕೊಂಡು ಗಡಿಯಲ್ಲಿ ಮೊಕ್ಕಾಂ ಹೂಡಿದ್ದವು. ಬಹುತೇಕ ಯುದ್ಧದ ಸನ್ನಿವೇಶ ನಿರ್ಮಾಣವಾಗಿತ್ತು. ತಮ್ಮ ತಮ್ಮ ಬಲವರ್ಧನೆಗೆ ಯತ್ನಿಸಿದವು. ಆದರೆ, ರಾಜತಾಂತ್ರಿಕ ಮಾರ್ಗಗಳು ಮತ್ತು ಉನ್ನತ ಮಿಲಿಟರಿ ಕಮಾಂಡರ್‌ಗಳ ನಡುವಿನ ಮಾತುಕತೆಗಳ ಮೂಲಕ ಪರಿಸ್ಥಿತಿಯನ್ನು ಸುಧಾರಿಸಲು ಎರಡೂ ದೇಶಗಳು ಪ್ರಯತ್ನ ನಡೆಸಿದವು. ಆದರೆ, ಕಪಟಿ ಚೀನಾ ಈ ಮಧ್ಯೆ ನರಿ ಬುದ್ಧಿ ಪ್ರದರ್ಶಿಸಿದೆ.

ಎರಡು ದೇಶಗಳ ಸಾಂಕೇತಿಕ ಕ್ರಮವಾಗಿ, ಜೂನ್ 6 ರಂದು ಲೆಫ್ಟಿನೆಂಟ್ ಜನರಲ್ ಮಟ್ಟದಲ್ಲಿ ತಮ್ಮ ಉನ್ನತ ಕಮಾಂಡರ್‌ಗಳ ನಡುವೆ ನಡೆದ ಮಾತುಕತೆಯ ನಂತರ ಎರಡೂ ದೇಶಗಳು ತಮ್ಮ ಸೈನ್ಯವನ್ನು ಸುಮಾರು 2.5 ಕಿಲೋಮೀಟರ್‌ಗಳಷ್ಟು ದೂರದಿಂದ ಹಿಂದಕ್ಕೆ ಕರೆಸಿಕೊಂಡವು. ನಂತರ, ಸ್ಥಳೀಯ ಮಿಲಿಟರಿ ಕಮಾಂಡರ್ ಮಟ್ಟದಲ್ಲಿ ಮಾತುಕತೆ ನಡೆಯಿತು.

ಇಷ್ಟಾದ ಬಳಿಕವೂ, ಸೋಮವಾರ ರಾತ್ರಿ ಭಾರತೀಯ ಸೇನೆ ಮತ್ತು ಚೀನಾದ ಸೈನಿಕರ ನಡುವೆ ಹಿಂಸಾತ್ಮಕ ಸಂಘರ್ಷ ಏರ್ಪಟ್ಟಿದೆ. ಕರ್ನಲ್ ಸೇರಿದಂತೆ ಭಾರತದ 20 ಯೋಧರು ಈ ಘರ್ಷಣೆಯಲ್ಲಿ ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆ ಧೃಡಪಡಿಸಿದೆ. ಆದರೆ, ಕಪಟಿ ಚೀನಾ ತನ್ನ ಸಾವು-ನೋವುಗಳನ್ನು ಅಧಿಕೃತವಾಗಿ ಖಚಿತಪಡಿಸಿಲ್ಲ.

ಮಂಗಳವಾರ ತಡರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಹಿರಿಯ ಮಿಲಿಟರಿ ಕಮಾಂಡರ್‌ಗಳ ನಡುವೆ ಜೂನ್ 6 ರಂದು ನಡೆದ ಮಾತುಕತೆ ಸಂದರ್ಭ ಬರಲಾದ ಒಮ್ಮತದ ತೀರ್ಮಾನವನ್ನ ಉಲ್ಲಂಘಿಸಿ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಸೇನೆ ಯಥಾಸ್ಥಿತಿ ಬದಲಾಯಿಸುತ್ತಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಆರೋಪಿಸಿದೆ.

"ಭಾರತೀಯ ಭೂಪ್ರದೇಶವನ್ನು ಕಬಳಿಸುವ ಚೀನಾದ ಕಾರ್ಯತಂತ್ರದ ಬಗ್ಗೆ ಹಲವು ಮಂದಿ ಮಾತನಾಡಿದ್ದಾರೆ. ಆದರೆ, ಎರಡು ಹೆಜ್ಜೆ ಮುಂದಕ್ಕೆ ಇಟ್ಟು ಮತ್ತು ಒಂದು ಹೆಜ್ಜೆ ಹಿಂದಕ್ಕೆ ಇಡುವುದು ಚೀನಾದ ಪ್ರಸಿದ್ಧ ತಂತ್ರ" ಎನ್ನುತ್ತಾರೆ ಚೀನಾದ ಕಾರ್ಯತಂತ್ರದ ಕುರಿತ ಪ್ರಶ್ನೆಗೆ ಉತ್ತರಿಸಿದ ವಿಷ್ಣು ಪ್ರಕಾಶ್.

ಚೀನಾದೊಂದಿಗೆ 2017 ರ ಡೋಕ್ಲಾಮ್ ಪ್ರಕ್ಷುಬ್ಧ ವಾತಾವರಣ ಏರ್ಪಟ್ಟಿದ್ದ ಸಮಯದಲ್ಲಿ ಸೇನಾ ಮುಖ್ಯಸ್ಥರಾಗಿದ್ದ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸಲಾಮಿ ಹೋಳು ಮಾಡುವ ಚೀನಾದ ಕಾರ್ಯತಂತ್ರ ಭಾರತದ ಪ್ರಾದೇಶಿಕ ಸಮಗ್ರತೆಗೆ ದೊಡ್ಡ ಆತಂಕವಾಗಿದೆ ಎಂದು ಕರೆದಿದ್ದರು.

"ನಿಧಾನವಾಗಿ ವಿಸ್ತರಣಾ ತಂತ್ರ ಜಾರಿ ಮಾಡುವುದರಲ್ಲಿ ಚೀನಿಯರು ಹಿಂದಿನಿಂದಲೂ ಮಾಸ್ಟರ್‌ಗಳಾಗಿದ್ದಾರೆ" ಎಂದು ರಾಯಭಾರಿ ವಿಷ್ಣು ಪ್ರಕಾಶ್ ಹೇಳಿದ್ದಾರೆ.

ಈ ಮೂಲಕ ಚೀನಾ ಖಂಡಿತವಾಗಿಯೂ ದಾಳಿಕೋರ ಮತ್ತು ಆಕ್ರಮಣಕಾರಿಯಿಂದ ಕೂಡಿದ ಒಂದು ರೀತಿಯ ರಾಜತಾಂತ್ರಿಕತೆಗೆ ಬದಲಾಗಿದೆ ಎನ್ನುತ್ತಾರೆ ವಿಷ್ಣು ಪ್ರಕಾಶ್.‌

"ಆಸ್ಟ್ರೇಲಿಯಾ ಮತ್ತು ಇತರ ದೇಶಗಳು ಸೇರಿ ದಕ್ಷಿಣ ಚೀನಾ ಸಮುದ್ರ ಪ್ರದೇಶದ ಇತರ ದೇಶಗಳೊಂದಿಗೆ ಅವರು ವರ್ತಿಸಿದ ರೀತಿಯನ್ನು ನೋಡಿ" ಎಂದು ಅವರು ಈಟಿವಿ ಭಾರತಕ್ಕೆ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಚೀನಾದ ವಿಸ್ತರಣಾವಾದಿ ನೀತಿಗಳಿಂದಾಗಿ ಸಂಕಷ್ಟ ಅನುಭವಿಸಿದ ನೆರೆಯ ರಾಷ್ಟ್ರಗಳಲ್ಲಿ ಭಾರತ ಏಕೈಕ ರಾಷ್ಟ್ರವಲ್ಲ ಎಂದು ಕಾರ್ಯತಂತ್ರದ ತಜ್ಞರು ಹೇಳುತ್ತಾರೆ.

"ಚೀನಾ ದೇಶವು ನಾವು ಭಾರೀ ಬೆಳೆದಿದ್ದೇವೆ ಎಂದು ಭಾವಿಸಿದೆ. ನಮ್ಮ ಮುಂದೆ ಅಮೆರಿಕ ದುರ್ಬಲ ದೇಶ ಎಂದು ಅವರು ತಿಳಿದಿದ್ದಾರೆ. ವಿಶೇಷವಾಗಿ ಚೀನಾ ಪ್ರಧಾನಿ, ಕ್ಸಿ ಜಿನ್‌ಪಿಂಗ್ ಇದನ್ನು ನಂಬುತ್ತಾರೆ. ಆದ್ದರಿಂದ ಹೆಚ್ಚಿನ ಪ್ರಮಾಣದ ಆತ್ಮವಿಶ್ವಾಸ ಮತ್ತು ದುರಹಂಕಾರ ಅವರಿಗಿದೆ" ಎಂದು ಒಆರ್‌ಎಫ್‌ನ ಡಾ.ರಾಜೇಶ್ವರಿ ರಾಜಗೋಪಾಲನ್ ಹೇಳಿದ್ದಾರೆ.

ಆದರೂ, ಈ ವರ್ಷದ ಆರಂಭದಿಂದಲೂ ತೈವಾನ್, ವಿಯೆಟ್ನಾಂ, ಮಲೇಷ್ಯಾ ಮತ್ತು ಇಂಡೋನೇಷ್ಯಾ ಸೇರಿದಂತೆ ಹಲವಾರು ದೇಶಗಳನ್ನು ಗುರಿಯಾಗಿಸಿಕೊಂಡು ರೂಪಿಸಿದ ಚೀನಾದ ನೀತಿಗಳಿಗೆ ಹಿನ್ನಡೆ ಉಂಟಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

"ಪ್ರತಿಯೊಬ್ಬರೂ ಚೀನೀ ಆಕ್ರಮಣದ ಬಗ್ಗೆ ಎಚ್ಚರಗೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ, ಆದ್ದರಿಂದ ಚೀನೀ ಸಾಹಕ್ಕೆ ಹಿನ್ನಡೆ ಆಗುತ್ತದೆ" ಎಂದು ಅವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

-ಕೃಷ್ಣಾನಂದ್ ತ್ರಿಪಾಠಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.