ರಾಯ್ಪುರ್(ಛತ್ತಿಸಘಡ್): ಭೀಕರ ರಸ್ತೆ ಅಪಘಾತವೊಂದರಲ್ಲಿ ಬಾಲ ಕಲಾವಿದ ಶಿವಲೇಖ್ ಸಿಂಗ್(14) ದುರ್ಮರಣವನ್ನಪ್ಪಿರುವ ಘಟನೆ ಛತ್ತೀಸಘಡ್ನ ರಾಯ್ಪುರ್ನಲ್ಲಿ ನಡೆದಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಶಿವಲೇಖ್ ತಮ್ಮ ತಂದೆ-ತಾಯಿ ಜತೆಗೆ ನಿನ್ನೆ ಕಾರಿನಲ್ಲಿ ಬಿಲಾಸಪುರದಿಂದ ರಾಯ್‍ಪುರಕ್ಕೆ ಪ್ರಯಾಣ ಮಾಡುತ್ತಿದ್ದ ವೇಳೆ ಮಧ್ಯಾಹ್ನ 3ಗಂಟೆಗೆ ಟ್ರಿಕ್ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅರಿಫ್ ಶೇಖ್ ಮಾಹಿತಿ ನೀಡಿದ್ದಾರೆ. ಶಿವಲೇಖ ತಂದೆ ಶಿವೇಂದ್ರ ಸಿಂಗ್ ಹಾಗೂ ತಾಯಿ ಲೇಖನಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೊಬ್ಬ ವ್ಯಕ್ತಿ ನವೀನ್ ಸಿಂಗ್ ಎಂಬುವವರೂ ಗಾಯಗೊಂಡಿದ್ದು, ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಹಿಂದೆ ಅನೇಕ ಧಾರಾವಾಹಿಗಳಲ್ಲಿ ನಟನೆ ಮಾಡಿರುವ ಶಿವಲೇಖ್ ಸಿಂಗ್ ಸಂಕಟಮೋಚನ್ ಹನುಮಾನ್, ಸಸುರಲ್ ಸಿಮರ್ ಕಾ, ಅಗ್ನಿಫೆರಾ ಸೇರಿ ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಅಭಿನಯಿಸಿದ್ದು, ಅನೇಕ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದಾರೆ.