ETV Bharat / bharat

ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ: ಸಂತ್ರಸ್ತೆ ಸೇರಿ ಮೂವರ ಮರ್ಡರ್​​ - Six held for raping, killing minor and her two kin

ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ, ಸಂತ್ರಸ್ತೆ ಹಾಗೂ ಆಕೆಯ ಕುಟುಂಬಸ್ಥರನ್ನು ಹತ್ಯೆಗೈದ ಆರೋಪಿಗಳನ್ನು ಛತ್ತೀಸ್​ಗಢ ಪೊಲೀಸರು ಬಂಧಿಸಿದ್ದಾರೆ.

Six held for raping, killing minor and her two kin
ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ
author img

By

Published : Feb 4, 2021, 3:47 PM IST

ಕೊರ್ಬಾ (ಛತ್ತೀಸ್​ಗಢ): 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ, ಸಂತ್ರಸ್ತೆ ಹಾಗೂ ಆಕೆಯ ತಂದೆ, 4 ವರ್ಷದ ಕಂದಮ್ಮನನ್ನು ಪಾಪಿಗಳು ಕೊಲೆ ಮಾಡಿರುವ ಘಟನೆ ಛತ್ತೀಸ್​ಗಢದ ಕೊರ್ಬಾದಲ್ಲಿ ನಡೆದಿದೆ.

ಜನವರಿ 29 ರಂದು ಘಟನೆ ನಡೆದಿದ್ದು, ಮೊನ್ನೆ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಆರು ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ಕೊರ್ಬಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್​ ಮೀನಾ ತಿಳಿಸಿದ್ದಾರೆ. ಆರೋಪಿಗಳನ್ನು ಸಂತ್ರಾಮ್ ಮಜ್ವಾರ್ (45), ಅಬ್ದುಲ್ ಜಬ್ಬರ್ (29), ಅನಿಲ್ ಕುಮಾರ್ ಸಾರ್ಥಿ (20), ಪರ್ದೇಶಿ ರಾಮ್ ಪನಿಕಾ (35), ಆನಂದ್ ರಾಮ್ ಪನಿಕಾ (25) ಮತ್ತು ಉಮ್ಶಂಕರ್ ಯಾದವ್ (21) ಎಂದು ಗುರುತಿಸಲಾಗಿದೆ.

ಘಟನೆ ಹಿನ್ನೆಲೆ

ಪ್ರಮುಖ ಆರೋಪಿಯಾಗಿರುವ ಸಂತ್ರಾಮ್ ಮಜ್ವಾರ್ ಮನೆಯಲ್ಲಿ​ ಸಂತ್ರಸ್ತೆಯ ತಂದೆ ಕೆಲಸ ಮಾಡುತ್ತಿದ್ದರು. ಇವರಿಗೆ 16 ಹಾಗೂ 4 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಜ. 29ರಂದು ಈ ಮೂವರನ್ನು ಮಜ್ವಾರ್, ತನ್ನ ಕಾರಿನಲ್ಲಿ ಅವರ ಊರಿಗೆ ಡ್ರಾಪ್​ ಮಾಡಲು ಕರೆದೊಯ್ಯುವ ವೇಳೆ ಈತನ ಸ್ನೇಹಿತರು ಅಡ್ಡ ಹಾಕಿದ್ದಾರೆ. ಮಜ್ವಾರ್ ಹಾಗೂ ಎಲ್ಲಾ ಆರೋಪಿಗಳು ಕುಡಿದು, ಬಾಲಕಿಯರು ಹಾಗೂ ತಂದೆಯನ್ನು ಗುಡ್ಡದ ಬಳಿ ಕರೆದೊಯ್ದಿದ್ದಾರೆ. ಹದಿಹರೆಯದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಮೂವರನ್ನೂ ಕಲ್ಲು ಹಾಗೂ ದೊಣ್ಣೆಯಿಂದ ಹೊಡೆದು ಸಾಯಿಸಿದ್ದಾರೆ.

ಇದನ್ನೂ ಓದಿ: ಮುದ್ದಾದ ಮಗಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣು!

ಮೃತ ವ್ಯಕ್ತಿ ಮಗನು ಪೊಲೀಸ್​ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾನೆ. ತನಿಖೆ ಚುರುಕುಗೊಳಿಸಿದ ಪೊಲೀಸರು ಸಂತ್ರಾಮ್ ಮಜ್ವಾರ್​ನನ್ನು ವಶಕ್ಕೆ ಪಡೆದು ಸತ್ಯ ಬಾಯ್ಬಿಡಿಸಿದ್ದಾರೆ. ಆರೋಪಿಗಳನ್ನು ಅರೆಸ್ಟ್ ಮಾಡಿರುವ ಪೊಲೀಸರು, ಅತ್ಯಾಚಾರ, ಕೊಲೆ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.