ETV Bharat / bharat

'ಮಹಿಳೆಗೆ ರಕ್ಷಣೆಯಿಲ್ಲದ ಆಶ್ರಯ ಮನೆ'.. ಲೈಂಗಿಕ ದೌರ್ಜನ್ಯ ಎಸಗಿದ ಮ್ಯಾನೇಜರ್​ ಬಂಧನ - Chhattisgarh latest news

ಎನ್‌ಜಿಒ ಶ್ರೀಶಿವಮಂಗಲ್ ಶಿಕ್ಷಣ ಸಮಿತಿ 2014ರಿಂದ ಉಜ್ವಲ ಹೋಮ್ ಬಿಲಾಸ್ಪುರ್​ ನಿರ್ವಹಿಸುತ್ತಿದೆ. ಇದರ ಮ್ಯಾನೇಜರ್​ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪದಲ್ಲಿ ಬಂಧನವಾಗಿದ್ದಾನೆ.

Chhattisgarh
ಲೈಂಗಿಕ ದೌರ್ಜನ್ಯ
author img

By

Published : Jan 22, 2021, 12:05 PM IST

ಬಿಲಾಸ್ಪುರ (ಛತ್ತೀಸ್​ಗಢ): ಮಹಿಳೆಯರ ಆಶ್ರಯ ಮನೆಯ ಮ್ಯಾನೇಜರ್​ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ 19 ವರ್ಷದ ಯುವತಿ ಮತ್ತು ಇತರ ಇಬ್ಬರು ಯುವತಿಯರು ಆಶ್ರಯ ಮನೆಯಿಂದ ಹೊರ ಬಂದಿದ್ದಾರೆ. ಈ ವೇಳೆ, ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಮ್ಯಾನೇಜರ್​ ನನ್ನು ಪೊಲೀಸರು ಬಂಧಿಸಿದ್ದಾರೆ.

"ಮೂವರು ಮಹಿಳೆಯರ ಹೇಳಿಕೆಗಳನ್ನು ದಾಖಲಿಸಿ ಸಿಆರ್​ಪಿಸಿ ಸೆಕ್ಷನ್ 164ರ ಅಡಿ ಕೇಸ್​ ದಾಖಲಿಸಿದ್ದೇವೆ. ಮೂವರು ಯುವತಿಯರಲ್ಲಿ ಒಬ್ಬರು ಆಶ್ರಯ ವ್ಯವಸ್ಥಾಪಕ ಜಿತೇಂದ್ರ ಮೌರ್ಯನಿಂದ ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, ಆತನಿಂದ ದೈಹಿಕ ಹಲ್ಲೆಗೂ ಒಳಗಾಗಿದ್ದಾಗಿ ಆರೋಪಿಸಿದ್ದಾರೆ. ಸಂತ್ರಸ್ತರ ಹೇಳಿಕೆಯ ಆಧಾರದ ಮೇಲೆ ಮೌರ್ಯನನ್ನು ಬಂಧಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ " ಎಂದು ಬಿಲಾಸ್ಪುರ್ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಅಗ್ರವಾಲ್ ಹೇಳಿದ್ದಾರೆ.

ಎನ್‌ಜಿಒ ಶ್ರೀಶಿವಮಂಗಲ್ ಶಿಕ್ಷಣ ಸಮಿತಿ 2014ರಿಂದ ಉಜ್ವಲ ಹೋಮ್ ಬಿಲಾಸ್ಪುರ್​ನ್ನು ನಿರ್ವಹಿಸುತ್ತಿದೆ. ಆದರೆ, ಜನವರಿ 17ರಿಂದ ಒಂದಿಲ್ಲೊಂದು ವಿವಾದಗಳು ಕೇಳಿ ಬರುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.