ಮಹಾಸಮುಂದ್(ಛತ್ತಿಸ್ಗಡ): ಜಾರ್ಖಂಡ್ನ ಮಹಾಸಮುಂಡ್ ಜಿಲ್ಲೆಯ ಬಾಲಕಿಯೊಬ್ಬಳು ಪ್ರಧಾನಿ ಮೋದಿ ಜೊತೆ ಚಂದ್ರನ ಅಂಗಳಕ್ಕೆ ಚಂದ್ರಯಾನ - 2 ಇಳಿಯುವುದನ್ನ ನೋಡುವ ಅವಕಾಶ ಪಡೆದುಕೊಂಡಿದ್ದಾಳೆ.
ಮಹಾಸಮುಂದ್ ಜಿಲ್ಲೆಯ ಸೆಂಟ್ರಲ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಶ್ರೀಜಲ್ ಚಂದ್ರಕರ್ ಎಂಬ ಬಾಲಕಿ ಇಂತಾ ಅವಕಾಶ ಪಡೆದುಕೊಂಡಿದ್ದಾಳೆ. ಆನ್ಲೈನ್ ಮೂಲಕ ನಡೆದ ಕ್ವಿಜ್ನಲ್ಲಿ ಜಯ ಗಳಿಸಿರುವ ಶ್ರೀಜಲ್ ಚಂದ್ರಕರ್ ಸೆಪ್ಟೆಂಬರ್ 7 ರಂದು ಚಂದ್ರಯಾನ-2 ಚಂದ್ರನ ದಕ್ಷಿಣ ಧೃವದಲ್ಲಿ ಇಳಿಯಲಿರುವ ಕ್ಷಣವನ್ನ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಜೊತೆ ಕಣ್ತುಂಬಿಕೊಳ್ಳಲಿದ್ದಾಳೆ.
ಈ ಬಗ್ಗೆ ಈ ಟಿವಿ ಭಾರತ್ ಜೊತೆ ಮಾತನಾಡಿರುವ ಶ್ರೀಜಲ್, ನಾನು ಇಂತಾ ಅವಕಾಶ ಪಡೆದುಕೊಳ್ಳುತ್ತೇನೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ನನ್ನ ತಂದೆ ಮತ್ತು ಶಿಕ್ಷಕರ ಸಹಾಯದಿಂದ ನಾನು ಜಯಗಳಿಸಲು ಸಾಧ್ಯವಾಯಿತು ಎಂದಿದ್ದಾರೆ.
ಇನ್ನು ಪ್ರಧಾನಿ ಮೋದಿ ಜೊತೆ ಮಾತನಾಡಲು ಅವಕಾಶ ಸಿಕ್ಕರೆ ದೇಶದ ಅಭಿವೃದ್ಧಿಗೆ ನಿಮ್ಮ ಮುಂದಿನ ಯೋಜನೆಗಳು ಏನು ಎಂಬ ವಿಚಾರವನ್ನ ಕೇಳುತ್ತೇನೆ ಎಂದಿದ್ದಾಳೆ.