ETV Bharat / bharat

ವಿಮಾನದ ಮೂಲಕ ಸಾಗಿಸಲು ಸಜ್ಜಾಗಿದ್ದ 5.1 ಕೋಟಿ ರೂ. ಮೌಲ್ಯದ ಗಾಂಜಾ-ಡ್ರಗ್ಸ್​​ ವಶ!

ದೋಹಾಗೆ ಹೊರಡಲು ಸಿದ್ಧವಾಗಿದ್ದ ಸರಕು ಸಾಗಿಸುವ ವಿಮಾನವನ್ನು ಕಸ್ಟಮ್ಸ್​​​ ಅಧಿಕಾರಿಗಳು ತಪಾಸಣೆ ನಡೆಸಿದಾಗ ಅದರಲ್ಲಿ 5.1 ಕೋಟಿ ರೂ. ಮೌಲ್ಯದ ಗಾಂಜಾ ಮತ್ತು ಡ್ರಗ್ಸ್​​ ಮಾತ್ರೆಗಳು ಪತ್ತೆಯಾಗಿವೆ. ಇದರಲ್ಲಿ ಭಾಗಿಯಾಗಿರುವ ವ್ಯಾಪಾರಿ ಮತ್ತು ಖಾಸಗಿ ಏಜೆಂಟ್​ನನ್ನು ಕಸ್ಟಮ್ಸ್​ ಅಧಿಕಾರಿಗಳು ಬಂಧಿಸಿದ್ದಾರೆ.

5.1 ಕೋಟಿ ರೂ. ಮೌಲ್ಯದ ಗಾಂಜಾ, ಡ್ರಗ್ಸ್​​ ವಶ
5.1 ಕೋಟಿ ರೂ. ಮೌಲ್ಯದ ಗಾಂಜಾ, ಡ್ರಗ್ಸ್​​ ವಶ
author img

By

Published : Feb 9, 2021, 8:28 PM IST

ಚೆನ್ನೈ: ದೋಹಾಗೆ ಹೊರಡಲು ಸಿದ್ಧವಾಗಿದ್ದ ಸರಕು ಸಾಗಿಸುವ ವಿಮಾನದಲ್ಲಿದ್ದ 5.1 ಕೋಟಿ ರೂ. ಮೌಲ್ಯದ ಗಾಂಜಾ ಮತ್ತು ಡ್ರಗ್ಸ್​​ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ ಭಾಗಿಯಾಗಿರುವ ಉದ್ಯಮಿ ಮತ್ತು ಖಾಸಗಿ ಏಜೆಂಟ್​ನನ್ನು ಕಸ್ಟಮ್ಸ್​ ಅಧಿಕಾರಿಗಳು ಬಂಧಿಸಿದ್ದಾರೆ.

5.1 ಕೋಟಿ ರೂ. ಮೌಲ್ಯದ ಗಾಂಜಾ, ಡ್ರಗ್ಸ್​​ ವಶ
5.1 ಕೋಟಿ ರೂ. ಮೌಲ್ಯದ ಗಾಂಜಾ, ಡ್ರಗ್ಸ್​​ ವಶ

ಹಳೆಯ ವಿಮಾನ ನಿಲ್ದಾಣದಲ್ಲಿ ಹಾರಲು ಸಿದ್ಧವಾಗಿದ್ದ ಸರಕು ಸಾಗಿಸುವ ವಿಮಾನವನ್ನು ಕಸ್ಟಮ್ಸ್​​​ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಇದರಲ್ಲಿ ರಫ್ತು ಕಂಪನಿಯೊಂದರಿಂದ ಬಂದ 7 ಪಾರ್ಸಲ್‌ಗಳು ಚೆನ್ನೈಗೆ ಸೇರಿದ್ದವು. ಅಧಿಕಾರಿಗಳು ಆ ಪಾರ್ಸಲ್​ಗಳನ್ನು ನೋಡಿ ಅನುಮಾನಗೊಂಡು ಪರೀಕ್ಷಿಸಿದಾಗ ಅದರಲ್ಲಿ ಗಾಂಜಾ ಮತ್ತು ಡ್ರಗ್ಸ್​ ಇರುವುದು ತಿಳಿದು ಬಂದಿದೆ.

ಓದಿ: ತಪ್ಪಿಸಿಕೊಳ್ಳುವ ಭರದಲ್ಲಿ ಮಾಲೀಕನ ಕೈಗೆ ಮೊಬೈಲ್​ ಕೊಟ್ಟು ಪರಾರಿಯಾದ ಕಳ್ಳ!

ಪಾರ್ಸಲ್​​ಗಳನ್ನು ತೆಗೆದು ನೋಡಿದಾಗ 54 ಡಿಜಿಟಲ್ ತೂಕದ ಯಂತ್ರ, 4.44 ಕೆಜಿ ಗಾಂಜಾ, 700 ಗ್ರಾಂ ಮೆಥಾಂಫೆಟಮೈನ್ ಮತ್ತು 1.2 ಕೆಜಿ ಡ್ರಗ್ಸ್​​ ಮಾತ್ರೆಗಳು ಕಂಡುಬಂದಿವೆ. ನಂತರ ಅಧಿಕಾರಿಗಳು ಎಲ್ಲಾ ಡ್ರಗ್ಸ್​ಗಳನ್ನು ಮುಟ್ಟುಗೋಲು ಹಾಕಿ, ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.