ವಿಶಾಖಪಟ್ಟಣಂ: ಆಂಧ್ರದಲ್ಲಿ ಮತ್ತೆ ವಿಷ ಅನಿಲ ಸೋರಿಕೆಯಾಗಿದೆ. ಸೈನರ್ ಫಾರ್ಮ್ ಕಂಪನಿಯಲ್ಲಿ ರಾಸಾಯನಿಕ ಅನಿಲ ಸೋರಿಕೆಯಾಗಿದ್ದು, ಇಬ್ಬರು ಮೃತಪಟ್ಟಿರುವ ಘಟನೆ ಇಲ್ಲಿನ ಪರವಾಡ ಫಾರ್ಮ್ ಸಿಟಿಯಲ್ಲಿ ಸಂಭವಿಸಿದೆ.
ಸೈನರ್ ಫಾರ್ಮ್ ಕಂಪನಿಯಿಂದ ಮಧ್ಯರಾತ್ರಿ ರಿಯಾಕ್ಟರ್ನಿಂದ ಬೆಂಜಿನ್ ಲೀಕ್ ಆಗಿದೆ. ರಾಸಾಯನಿಕ ಅನಿಲ ಸೋರಿಕೆಯಿಂದಾಗಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಸುದ್ದಿ ತಿಳಿದ ಸಂಬಂಧಪಟ್ಟ ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿ, ಮಾಹಿತಿ ಕಲೆ ಹಾಕುತ್ತಿದ್ದಾರೆ. ಇನ್ನು ಈ ವಿಷ ಅನಿಲದಿಂದ ಅಲ್ಲಿನ ವಾಸಿಸುವ ಜನಕ್ಕೆ ತೊಂದರೆಯಾಗುವ ಲಕ್ಷಣಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
-
Chief Minister YS Jagan Mohan Reddy has enquired about the accident at Sainar Life Sciences Pharma company at Parawada, Visakhapatnam. Accident occurred due to leakage at 11.30 PM last night. Factory was shut down immediately as a precautionary measure: Andhra Pradesh CM's Office https://t.co/ogbuc3QfoY
— ANI (@ANI) June 30, 2020 " class="align-text-top noRightClick twitterSection" data="
">Chief Minister YS Jagan Mohan Reddy has enquired about the accident at Sainar Life Sciences Pharma company at Parawada, Visakhapatnam. Accident occurred due to leakage at 11.30 PM last night. Factory was shut down immediately as a precautionary measure: Andhra Pradesh CM's Office https://t.co/ogbuc3QfoY
— ANI (@ANI) June 30, 2020Chief Minister YS Jagan Mohan Reddy has enquired about the accident at Sainar Life Sciences Pharma company at Parawada, Visakhapatnam. Accident occurred due to leakage at 11.30 PM last night. Factory was shut down immediately as a precautionary measure: Andhra Pradesh CM's Office https://t.co/ogbuc3QfoY
— ANI (@ANI) June 30, 2020
ನಿನ್ನೆ ರಾತ್ರಿ 11.30ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಈ ಘಟನೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದಾರೆ. ಈಗಾಗಲೇ ಆ ಕಂಪನಿಯನ್ನು ಮುಚ್ಚಲಾಗಿದೆ ಎಂದು ಆಂಧ್ರ ಸಿಎಂ ಕಚೇರಿ ಟ್ವೀಟ್ ಮಾಡಿದೆ.
ಈ ಘಟನೆ ಕುರಿತು ಕಂಪನಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.