ರೀವಾ/ಮಧ್ಯಪ್ರದೇಶ : ಬನ್ಸಾಗರ್ ಯೋಜನೆ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 40 ಜನ ಆರೋಪಿಗಳ ವಿರುದ್ಧ ವಿಶೇಷ ನ್ಯಾಯಾಲಯ ಆರೋಪಕ್ಕೆ ಪಟ್ಟಿ ಸಲ್ಲಿಕೆಯಾಗಿದೆ.
40 ಆರೋಪಿಗಳ ವಿರುದ್ಧ ರೀವಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಇದರಲ್ಲಿ, ಆಗಿನ ಬನ್ಸಾಗರ್ ಸಿಇ ಸೇರಿದಂತೆ, ಅಧೀಕ್ಷಕ ಎಂಜಿನಿಯರ್‌ಗಳು ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಮತ್ತು ಇತರೆ ಸಂಸ್ಥೆಯ ನಿರ್ವಾಹಕರು ಸೇರಿದ್ದಾರೆ. ಹಗರಣ ಸಂಬಂಧ ದಾಖಲಾದ ದೂರಿನ ಅನ್ವಯ ನಡೆದ ಆರಂಭಿಕ ತನಿಖೆಯಲ್ಲಿ, 214 ಕೋಟಿ ರೂ.ಗಳ ಸಾಮಗ್ರಿಗಳ ವಂಚನೆ ಬಹಿರಂಗವಾಗಿದೆ. 2008 ರಲ್ಲಿ ಪ್ರಕರಣ ದಾಖಲಿಸಿ ಇಒಡಬ್ಲ್ಯೂ ತನಿಖೆ ಪ್ರಾರಂಭಿಸಿದಾಗ, ಈ ಹಗರಣದ ಸ್ವರೂಪ ಬೆಳಕಿಗೆ ಬಂದಿತ್ತು. ಬಹುಕೋಟಿ ವಂಚನೆಯ ಪ್ರಕರಣ ಇದಾಗಿದ್ದು, 1,250 ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿದೆ ಎಂದು ತಿಳಿದು ಬಂದಿದೆ. ಬನ್ಸಾಗರ್ ಜಲಸಂಪನ್ಮೂಲ ಇಲಾಖೆಯ ಈ ಹಗರಣವು ಮಧ್ಯಪ್ರದೇಶದಲ್ಲಿ ಇದುವರೆಗೆ ನಡೆದ ಹಗರಣಗಳಲ್ಲೇ ಅತೀ ದೊಡ್ಡ ಅತಿದೊಡ್ಡ ಹಗರಣವೆಂದು ಸಾಬೀತಾಗಿದೆ.
ಈ ಕುರಿತು ಮಾಹಿತಿ ನೀಡಿರುವ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಂಜು ಪಾಂಡೆ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಬಿಹಾರ ಮೂರು ರಾಜ್ಯಗಳಿಗೆ ಸೇರಿದ ಬನ್ಸಾಗರ್ ಯೋಜನೆಯಲ್ಲಿ, ಅಂದಿನ ಮೂವರು ಮುಖ್ಯ ಎಂಜಿನಿಯರ್‌ಗಳು ಸಾಮಗ್ರಿಗಳ ಖರೀದಿ ಮತ್ತು ಪೂರೈಕೆಯ ಹೆಸರಿನಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಈ ಸಂಬಂಧ 12 ವರ್ಷಗಳ ಹಿಂದೆ ಎಫ್‌ಐಆರ್ ದಾಖಲಿಸಲಾಗಿತ್ತು. ಈ ಹಗರಣದ ಮೊತ್ತ ಬರೋಬ್ಬರಿ 1,250 ಕೋಟಿಗಿಂತ ಹೆಚ್ಚು ಎಂದು ತಿಳಿಸಿದ್ದಾರೆ.