ETV Bharat / bharat

ಬೆಂಗಳೂರಿಗೆ ನಮೋ ಆಗಮನ... ಚಂದ್ರಯಾನ-2 ಲ್ಯಾಂಡಿಂಗ್​ಗೆ ಸಾಕ್ಷಿಯಾಗಲಿದ್ದಾರೆ ಮೋದಿ

ಐತಿಹಾಸಿಕ ಚಂದ್ರಯಾನ-2 ಲ್ಯಾಂಡಿಂಗ್ ಕ್ಷಣವನ್ನ ಕಣ್ತುಂಬಿಕೊಳ್ಳಲು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಿದ್ದಾರೆ.

ಬೆಂಗಳೂರಿಗೆ ಮೋದಿ ಅಗಮನ
author img

By

Published : Sep 6, 2019, 9:51 PM IST

Updated : Sep 6, 2019, 10:38 PM IST

ಬೆಂಗಳೂರು: ಚಂದ್ರನ ಅಂಗಳಕ್ಕಿಳಿದು ಇತಿಹಾಸ ನಿರ್ಮಿಸಲು ಇಸ್ರೋ ಸಜ್ಜಾಗಿದ್ದು, ಈ ಐತಿಹಾಸಿಕ ಕ್ಷಣವನ್ನ ಕಣ್ತುಂಬಿಕೊಳ್ಳಲು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಿದ್ದಾರೆ.

ಬೆಂಗಳೂರಿನ ಯಲಹಂಕ ವಾಯುನೆಲೆಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನ ರಾಜ್ಯಪಾಲ ವಜುಭಾಯಿ ವಾಲಾ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ವಾಗತಿಸಿದ್ರು. ವಿಮಾನ ನಿಲ್ದಾಣದಿಂದ ಇಸ್ರೋ ಕಚೇರಿಗೆ ತೆರಳಲಿದ್ದು, ಮಧ್ಯರಾತ್ರಿ 1.40 ರ ಸುಮಾರಿಗೆ ಚಂದ್ರನ ಮೇಲೆ ವಿಕ್ರಮ್ ರೋವರ್​ ಲ್ಯಾಂಡ್​ ಆಗುವ ಐಸಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.ಇನ್ನು ಕೆಲವೇ ಗಂಟೆಗಳಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಇಳಿಯಲಿದ್ದು, ಭಾರತೀಯ ವಿಜ್ಞಾನಿಗಳ ಈ ಸಾಧನೆಯನ್ನ ನೋಡಲು ವಿಶ್ವವೇ ಕಾತರದಿಂದ ಕಾಯುತ್ತಿದೆ.

ಚಂದ್ರಯಾನ-2 ಲ್ಯಾಂಡಿಂಗ್​ಗೆ ಸಾಕ್ಷಿಯಾಗಲಿದ್ದಾರೆ ಮೋದಿ

ರಾತ್ರಿ 9.30 ಕ್ಕೆ ಬೆಂಗಳೂರಿನ ಯಲಹಂಕ ವಾಯುನೆಲೆಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬರಮಾಡಿಕೊಂಡರು. ಅಲ್ಲಿಂದ ಇಸ್ರೋದ ಗೆಸ್ಟ್ ಹೌಸ್​​ಗೆ ರಾತ್ರಿ 10 ಕ್ಕೆ ತಲುಪಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ. ರಾತ್ರಿ 1.15ಕ್ಕೆ ಇಸ್ರೋಗೆ ಆಗಮಿಸಲಿರುವ ಪ್ರಧಾನಿ ಮೋದಿ, 1.30 ರಿಂದ ಬೆಳಗ್ಗೆ 7 ಗಂಟೆವರೆಗೂ ಇಸ್ರೋದಲ್ಲಿ ಇರಲಿದ್ದಾರೆ. ರಾತ್ರಿ 1 ಗಂಟೆ 55 ನಿಮಿಷಕ್ಕೆ 'ಪ್ರಗ್ಯಾನ್‌' ರೋವರ್‌ ಮತ್ತು 'ವಿಕ್ರಮ್‌' ಲ್ಯಾಂಡರ್‌ ಚಂದ್ರನ ಮೇಲೆ ಇಳಿಯಲಿದೆ ಪ್ರಧಾ‌ಇ ಮೋದಿ ಇದರ ನೇರ ಪ್ರಸಾರದ ವೀಕ್ಷಣೆ ಮಾಡಲಿದ್ದಾರೆ. ನೇರ ಪ್ರಸಾರದ ವೀಕ್ಷಣೆಗೆ ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಬಳಿಕ‌ ಸೆ.7 ರ ಬೆಳಗ್ಗೆ 7 ಕ್ಕೆ ಇಸ್ರೋದ ಗೆಸ್ಟ್ ಹೌಸ್ ಗೆ ವಾಪಸ್ ತೆರಳಿದ್ದು, 8.55 ಕ್ಕೆ ಯಲಹಂಕ ವಾಯುನೆಲೆಯಿಂದ ಮುಂಬೈಗೆ ಪ್ರಯಾಣ ಬೆಳೆಸಲಿದ್ದಾರೆ.

ಸಂಚಾರ ಬಂದ್ :

modi

ಯಲಹಂಕ ವಾಯುನೆಲೆಗೆ ಮೋದಿ ಆಗಮನದ ಹಿನ್ನೆಲೆಯಲ್ಲಿ ಏರ್ಪೋರ್ಟ್ ರಸ್ತೆ ಸಂಪೂರ್ಣ ಬಂದ್‌ ಮಾಡಲಾಗಿತ್ತು.ಝೀರೋ ಟ್ರಾಫಿಕ್ ನಲ್ಲಿ ಇಸ್ರೋ ಅತಿಥಿಗೃಹನತ್ತ ಮೋದಿ ತೆರಳಿದ್ದು, ಏರ್ಪೋರ್ಟ್ ಎರಡು ಮಾರ್ಗಗಳನ್ನ ಬಂದ್ ಮಾಡಲಾಗಿತ್ತು.

Intro:Body:Conclusion:
Last Updated : Sep 6, 2019, 10:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.