ETV Bharat / bharat

ಕೊರಳ ಚಿನ್ನಕ್ಕೆ ಕೈ ಹಾಕಿದ ಕಳ್ಳರು... ತಕ್ಕ ಪಾಠ ಕಲಿಸಿದ ತಾಯಿ - ಮಗಳು!

author img

By

Published : Sep 3, 2019, 7:42 PM IST

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಹಾಗೂ ಆಕೆಯ ಮಗಳ ಚಿನ್ನದ ಚೈನ್​ ಕಸಿದುಕೊಳ್ಳಲು ಯತ್ನಿಸಿದ ಕಳ್ಳರಿಬ್ಬರು ರೆಡ್​ ಹ್ಯಾಂಡ್​ ಆಗಿ ಸಿಕ್ಕಿಹಾಕಿಕೊಂಡ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಕಳ್ಳರನ್ನು ತಾಯಿ ಹಾಗೂ ಮಗಳು ಬೈಕ್​ನಿಂದ ಕೆಳಹಾಕಿ ಧರ್ಮದೇಟು ನೀಡಿ ಚಳಿ ಬಿಡಿಸಿದ್ದಾರೆ.

Chain snatchers caught red-handed

ನವದೆಹಲಿ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ತಾಯಿ-ಮಗಳ ಚಿನ್ನದ ಚೈನ್​ ಕಸಿದುಕೊಳ್ಳಲು ಯತ್ನಿಸಿದ ಕಳ್ಳರಿಬ್ಬರು ರೆಡ್​ ಹ್ಯಾಂಡ್​ ಆಗಿ ಸಿಕ್ಕಿಹಾಕಿಕೊಂಡ ಘಟನೆ ನಗರದ ನಂಗ್ಲೋಯಿನಲ್ಲಿ ನಡೆದಿದೆ.

ತಾಯಿ ಹಾಗೂ ಮಗಳು ನಂಗ್ಲೋಯಿ ರಸ್ತೆ ಬದಿಯಲ್ಲಿ ನಿಂತಿದ್ದಾಗ ಬೈಕ್​ನಲ್ಲಿ ಹೆಲ್ಮೆಟ್​ ಧರಿಸಿಕೊಂಡು ಬಂದ ಇಬ್ಬರು ಕಳ್ಳರು ಇವರನ್ನು ಗಮನಿಸಿದ್ದಾರೆ. ಆ ವೇಳೆ ಬೈಕ್​ನ ಹಿಂಬದಿ ಸವಾರ ತಾಯಿಯ ಕೊರಳಲ್ಲಿದ್ದ ಚಿನ್ನದ ಸರಕ್ಕೆ ಕೈ ಹಾಕಿ ಕಿತ್ತಿದ್ದಾನೆ. ಆ ಸಂದರ್ಭ ಹಿಂದೆ ಮುಂದೆ ನೋಡದ ತಾಯಿ ಧೈರ್ಯದಿಂದ ಆತನ ಕೈ ಹಿಡಿದು ಕೆಳಗೆ ಎಳೆದಿದ್ದಾಳೆ. ಈ ವೇಳೆ ಮಗಳು ಕೂಡಾ ಸಾಥ್​ ನೀಡಿ ಆತನಿಗೆ ಹಿಗ್ಗಾ ಮುಗ್ಗ ಥಳಿಸಿದ್ದಾಳೆ. ಬಳಿಕ ಸ್ಥಳಿಯರೆಲ್ಲಾ ಸೇರಿ ಕಳ್ಳನಿಗೆ ಸರಿಯಾಗಿ ಧರ್ಮದೇಟು ನೀಡಿದ್ದಾರೆ.

ಬೈಕ್​ನಿಂದ ಕೆಳಹಾಕಿ ತಕ್ಕ ಪಾಠ ಕಲಿಸಿದ ತಾಯಿ-ಮಗಳು

ಇದೇ ವೇಳೆ ಬೈಕ್​ನ ಮುಂಬದಿ​ ಸವಾರ ಓಡಲು ಯತ್ನಿಸಿದ್ದು, ಸ್ಥಳದಿಂದ ಆ ಕ್ಷಣ ತಪ್ಪಿಸಿಕೊಂಡಿದ್ದಾನೆ. ಬಳಿಕ ಈ ಇಬ್ಬರು ಕಳ್ಳರನ್ನೂ ಪೊಲೀಸರು ಬಂಧಿಸಿದ್ದಾರೆ.

Intro:Body:

delhi

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.