ETV Bharat / bharat

ಜಿಂದಾಲ್​ ಉಕ್ಕಿನ ಕಾರ್ಖಾನೆಯಲ್ಲಿ ಡೀಸೆಲ್​ ಟ್ಯಾಂಕ್ ಸ್ಫೋಟ: ನಾಲ್ವರಿಗೆ ಗಾಯ, ಇಬ್ಬರ ಸ್ಥತಿ ಗಂಭೀರ

author img

By

Published : Jun 11, 2020, 3:50 PM IST

ಗ್ಯಾಸ್ ಕಟ್ಟರ್​ನಿಂದ ಕತ್ತರಿಸುವಾಗ ಡೀಸೆಲ್ ಟ್ಯಾಂಕ್​ ಸ್ಫೋಟಗೊಂಡ ಘಟನೆ ಚತ್ತೀಸ್​ಗಢದ ಪತ್ರಾಲಪ್ಲಿ ಗ್ರಾಮದ ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್‌ನಲ್ಲಿ ನಡೆದಿದೆ. ಘಟನೆಯಲ್ಲಿ ನಾಲ್ವರು ಕಾರ್ಮಿಕರು ಗಾಯಗೊಂಡಿದ್ದಾರೆ.

Four injured in fuel tank blast at steel plant
ಚತ್ತೀಸ್​ಗಢದ ಉಕ್ಕಿನ ಕಾರ್ಖಾನೆಯಲ್ಲಿ ಡೀಸೆಲ್​ ಟ್ಯಾಂಕ್ ಸ್ಪೋಟ

ರಾಯ್‌ಗಢ (ಚತ್ತೀಸ್​ಗಢ): ಇಂಧನ ಟ್ಯಾಂಕ್ ಸ್ಫೋಟಗೊಂಡು ನಾಲ್ವರು ಕಾರ್ಮಿಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ಉಕ್ಕಿನ ಕಾರ್ಖಾನೆಯೊಂದರಲ್ಲಿ ನಡೆದಿದೆ.

ರಾಯ್‌ಪುರದಿಂದ 250 ಕಿ.ಮೀ ದೂರದ ಪತ್ರಾಲಪ್ಲಿ ಗ್ರಾಮದ ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್‌ನಲ್ಲಿ ಹಳೆಯ ಡೀಸೆಲ್ ಟ್ಯಾಂಕ್​​ನ್ನು ಗ್ಯಾಸ್ ಕಟ್ಟರ್ ಮೂಲಕ ಕತ್ತರಿಸುವಾಗ ಘಟನೆ ನಡೆದಿದೆ ಎಂದು ಕೋಟ್ರಾ ರಸ್ತೆ ಪೊಲೀಸ್ ಠಾಣೆಯ ಅಧಿಕಾರಿ ಯುವರಾಜ್ ತಿವಾರಿ ಹೇಳಿದ್ದಾರೆ.

ಗ್ಯಾಸ್ ಕಟ್ಟರ್‌ನಿಂದ ಡೀಸೆಲ್ ಟ್ಯಾಂಕ್ ಕತ್ತರಿಸುವಾಗ ಅದರೊಳಗಿದ್ದ ಅಲ್ಪ ಸ್ವಲ್ಪ ಡೀಸೆಲ್​ಗೆ ಬೆಂಕಿ ತಗುಲಿ ಸ್ಫೋಟ ಸಂಭವಿಸಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನೆಯಲ್ಲಿ ನಾಲ್ವರಿಗೆ ಸುಟ್ಟ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳ ಪೈಕಿ ಇಬ್ಬರನ್ನು ರಾಯ್​ಪುರ ಹಾಗೂ ಗಂಭೀರವಾಗಿ ಗಾಯಗೊಂಡ ಇನ್ನಿಬ್ಬರನ್ನು ರಾಯ್​ಗಢದ ಆಸ್ಪತ್ರೆಗೆ ದಾಖಲಿಸಲಾಗಿದೆ. ತನಿಖೆಯ ಬಳಿಕವಷ್ಟೆ ಸ್ಪೋಟಕ್ಕೆ ನಿಖರ ಕಾರಣ ತಿಳಿದು ಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.