ETV Bharat / bharat

ಕೋವಿಡ್​ ವಿರುದ್ಧ ಹೋರಾಡಲು ಐದು ರಾಜ್ಯಗಳಿಗೆ ಕೇಂದ್ರದಿಂದ ವಿಶೇಷ ತಂಡ

author img

By

Published : Oct 16, 2020, 5:26 PM IST

ಹೆಚ್ಚಿನ ಕೋವಿಡ್​ ಪ್ರಕರಣಗಳು ವರದಿಯಾಗುತ್ತಿರುವ ಕೇರಳ, ಕರ್ನಾಟಕ, ರಾಜಸ್ಥಾನ, ಛತ್ತೀಸ್​ಗಢ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಉನ್ನತ ಮಟ್ಟದ ತಜ್ಞರ ತಂಡವನ್ನು ಕಳುಹಿಸುತ್ತಿದೆ.

Centre rushes teams to 5 States to fight COVID-19
ಕೋವಿಡ್​ ವಿರುದ್ಧ ಹೋರಾಟ

ನವದೆಹಲಿ: ಹಬ್ಬದ ದಿನಗಳು ಮುಂಬರಲಿದ್ದು, ಈ ಸಂದರ್ಭದಲ್ಲಿ ಹೆಚ್ಚಿನ ಕೋವಿಡ್​ ಪ್ರಕರಣಗಳು ವರದಿಯಾಗುತ್ತಿರುವ ರಾಜ್ಯಗಳಲ್ಲಿ ಪರಿಣಾಮಕಾರಿ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

ಕೇರಳ, ಕರ್ನಾಟಕ, ರಾಜಸ್ಥಾನ, ಛತ್ತೀಸ್​ಗಢ ಮತ್ತು ಪಶ್ಚಿಮ ಬಂಗಾಳದಲ್ಲಿ ಅಧಿಕ ಸೋಂಕಿತರು ಪತ್ತೆಯಾಗುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ, ಈ ರಾಜ್ಯಗಳಿಗೆ ಉನ್ನತ ಮಟ್ಟದ ತಜ್ಞರ ತಂಡವನ್ನು ಕಳುಹಿಸುತ್ತಿದೆ. ಈ ಮೂಲಕ ಕೋವಿಡ್​ ಪರಿಸ್ಥಿತಿಯನ್ನು ನಿಯಂತ್ರಿಸಲು ಹಾಗೂ ಅಲ್ಲಿನ ಸರ್ಕಾರಗಳಿಗೆ ಸಹಾಯ ಮಾಡಲು ನಿರ್ಧರಿಸಿದೆ.

ಪ್ರತಿ ತಂಡದಲ್ಲಿ ಓರ್ವ ಜಂಟಿ ಕಾರ್ಯದರ್ಶಿ, ಸಾರ್ವಜನಿಕ ಆರೋಗ್ಯಧಿಕಾರಿ, ಸೋಂಕು ತಡೆಗಟ್ಟುವ ಕ್ರಮಗಳನ್ನು ಹಾಗೂ ಕ್ಲಿನಿಕಲ್ ಮ್ಯಾನೇಜ್‌ಮೆಂಟ್ ಪ್ರೋಟೋಕಾಲ್‌ಗಳನ್ನು ನೋಡಿಕೊಳ್ಳಲು ಓರ್ವ ವೈದ್ಯ ಇರುತ್ತಾರೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

ಈ ಐದು ರಾಜ್ಯಗಳ ಪೈಕಿ, ಕೇರಳದಲ್ಲಿ ಹಠಾತ್ ಆಗಿ ಕೇಸ್​ಗಳ ಸಂಖ್ಯೆ ಹೆಚ್ಚಾಗಿದೆ. ಈವರೆಗೆ ರಾಜ್ಯದಲ್ಲಿ 3,17,929 ಜನರಿಗೆ ವೈರಸ್​ ಅಂಟಿದ್ದು, 1089 ಮಂದಿ ಬಲಿಯಾಗಿದ್ದಾರೆ. 2,22,231 ಸೋಂಕಿತರು ಗುಣಮುಖರಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 3,09,417 ಪ್ರಕರಣಗಳು, 5,808 ಸಾವುಗಳು ವರದಿಯಾಗಿದ್ದು, 2,71,563 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಕರ್ನಾಟಕದಲ್ಲಿ 7,43,348 ಮಂದಿ ಕೊರೊನಾ ಸುಳಿಯಲ್ಲಿ ಸಿಲುಕಿದ್ದು, 10,283 ಜನರು ಮೃತಪಟ್ಟಿದ್ದಾರೆ. ರಾಜಸ್ಥಾನದಲ್ಲಿ 1,67,279 ಕೇಸ್​ಗಳು, 1,708 ಸಾವುಗಳು ವರದಿಯಾಗಿದೆ. ಇನ್ನು ಛತ್ತೀಸ್​ಗಢದಲ್ಲಿ 1,53,515 ಸೋಂಕಿತರು ಪತ್ತೆಯಾಗಿದ್ದು, 1385 ಮಂದಿ ಸಾವನ್ನಪ್ಪಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.