ನವದೆಹಲಿ: ಅಧಿಕೃತ ಭಾಷೆಗಳ ಕಾಯ್ದೆಗೆ ತಿದ್ದುಪಡಿ ತರುವ ಯಾವುದೇ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರೈ ಸ್ಪಷ್ಟಪಡಿಸಿದ್ದಾರೆ.
ಸುಪ್ರೀಂಕೋರ್ಟ್ ಸಲಹೆ ನೀಡಿರುವ ಹಿಂದಿ ಮತ್ತು ಇಂಗ್ಲಿಷ್ ಅನ್ನು ಕೂಡ ಅಧಿಕೃತ ಭಾಷೆಯನ್ನಾಗಿ ಸ್ವೀಕರಿಸುವ ಪ್ರಸ್ತಾಪ ಕೇಂದ್ರದ ಮುಂದಿಲ್ಲ ಎಂದು ತಮಿಳುನಾಡಿನ ಎಂಡಿಎಂಕೆ ಪಕ್ಷದ ಸಂಸ್ಥಾಪಕ ಹಾಗೂ ಸಂಸದ ವೈಕೊ ಅವರ ಪ್ರಶ್ನೆಗೆ ರೈ ರಾಜ್ಯಸಭೆಯಲ್ಲಿ ಸ್ಪಷ್ಟನೆ ನೀಡಿದರು.
ದಕ್ಷಿಣ ಮತ್ತು ಉತ್ತರ ಭಾರತದ ಅದರಲ್ಲೂ ಹಳ್ಳಿ ಜನರು ಸಂವಹನವನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಆಡಳಿತ ನಿಯಮಗಳನ್ನು ಬಿಡುಗಡೆ ಮಾಡಿದೆ. ಮೂರು ಭಾಷೆಗಳ (ಹಿಂದಿ, ಇಂಗ್ಲೀಷ್ ಮತ್ತು ಪ್ರಾದೇಶಿಕ ಭಾಷೆ) ಸೂತ್ರವಿದೆ. ಪಾಯಿಂಟ್ ನಂಬರ್ 3ರ ಅಧಿಕೃತ ಭಾಷೆ ರೆಸೆಲೂಷನ್, 1968ರಲ್ಲಿ ರಾಜ್ಯಗಳ ಅನುಮತಿಯೊಂದಿಗೆ ತ್ರಿಭಾಷಾ ಸೂತ್ರ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ಹಿಂದಿಯೇತರ ಪ್ರದೇಶಗಳಲ್ಲಿರುವ ಸರ್ಕಾರದ ಕಚೇರಿಗಳ ನಾಮಫಲಕ, ಸೂಚನಾ ಫಲಕಗಳಲ್ಲಿ ಮೊದಲು ಆಯಾ ಪ್ರಾದೇಶಿಕ ಭಾಷೆ, ನಂತರ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಬರೆಯಬೇಕೆಂಬ ಆದೇಶವಿದೆ.
ಮಹಾಮಾರಿ ಕೋವಿಡ್-19 ಭೀತಿಯ ನಡುವೆಯೇ ಇದೇ 14 ರಿಂದ ಮುಂಗಾರು ಸಂಸತ್ ಅಧಿವೇಶನ ಆರಂಭವಾಗಿದೆ.