ನವದೆಹಲಿ: ಕೊರೊನಾ ಸೋಂಕು ಹರಡುವ ಪರಿ ಮತ್ತಷ್ಟು ತೀವ್ರತೆ ಪಡೆದುಕೊಂಡಿರುವ ಬೆನ್ನಲ್ಲೇ ಆಗಸ್ಟ್ 5ರಿಂದ ದೇಶಾದ್ಯಂತ ಯೋಗ ಹಾಗೂ ಜಿಮ್ ಸೆಂಟರ್ಗಳು ಓಪನ್ ಆಗ್ತಿವೆ. ಅದಕ್ಕಾಗಿ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ ರಿಲೀಸ್ ಮಾಡಿದೆ.
ಲಾಕ್ಡೌನ್ ಕಾರಣ ರಾತ್ರಿ ವೇಳೆ ಹೇರಿಕೆ ಮಾಡಲಾಗಿದ್ದ ಕರ್ಫ್ಯೂ ಆಗಸ್ಟ್ 5ರ ನಂತರ ಸಂಪೂರ್ಣವಾಗಿ ತೆಗೆದು ಹಾಕಲಾಗಿದ್ದು, ಇದರ ಜತೆಗೆ ಯೋಗ ಕೇಂದ್ರಗಳು, ಜಿಮ್ನಾಸ್ಟಿಕ್ ತೆರೆಯಲು ಅನುಮತಿ ನೀಡಲಾಗಿದೆ. ಇದೀಗ ಅದಕ್ಕಾಗಿ ಹೊಸದಾಗಿ ಮಾರ್ಗಸೂಚಿ ಹೊರಡಿಸಲಾಗಿದೆ.
-
#CoronaVirusUpdates#IndiaFightsCorona
— Ministry of Health (@MoHFW_INDIA) August 3, 2020 " class="align-text-top noRightClick twitterSection" data="
Guidelines issued on Preventive Measures to Contain Spread of #COVID19 in Yoga Institutes & Gymnasiums.https://t.co/AmC6FIDTPa pic.twitter.com/LBThuEtuIb
">#CoronaVirusUpdates#IndiaFightsCorona
— Ministry of Health (@MoHFW_INDIA) August 3, 2020
Guidelines issued on Preventive Measures to Contain Spread of #COVID19 in Yoga Institutes & Gymnasiums.https://t.co/AmC6FIDTPa pic.twitter.com/LBThuEtuIb#CoronaVirusUpdates#IndiaFightsCorona
— Ministry of Health (@MoHFW_INDIA) August 3, 2020
Guidelines issued on Preventive Measures to Contain Spread of #COVID19 in Yoga Institutes & Gymnasiums.https://t.co/AmC6FIDTPa pic.twitter.com/LBThuEtuIb
ಮಾರ್ಗಸೂಚಿ ಇಂತಿವೆ
- ಜಿಮ್ ಹಾಗೂ ಯೋಗ ಶಿಬಿರದಲ್ಲಿ 6 ಅಡಿ ಅಂತರ ಕಡ್ಡಾಯ
- ಸಾನಿಟೈಸ್ ಬಳಕೆ, ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಬಳಕೆ ಕಡ್ಡಾಯ
- 65 ವರ್ಷಕ್ಕೂ ಮೇಲ್ಪಟ್ಟವರಿಗೆ ಜಿಮ್, ಯೋಗ ಶಿಬಿರಕ್ಕೆ ಪ್ರವೇಶವಿಲ್ಲ
- ಗರ್ಭಿಣಿ ಮಹಿಳೆಯರು, 10 ವರ್ಷಕ್ಕೂ ಕಡಿಮೆ ವಯಸ್ಸಿನವರಿಗೆ ಪ್ರವೇಶ ನಿರಾಕರಣೆ
- ಪ್ರವೇಶ ದ್ವಾರದಲ್ಲಿ ದೇಹದಲ್ಲಿನ ಉಷ್ಣತೆ ಪರಿಶೀಲನೆ
- ಜಿಮ್ಗೆ ಹೋಗುವ ಎಲ್ಲರೂ ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಕಡ್ಡಾಯ
- ಎಲ್ಲ ಜಿಮ್, ಯೋಗ ಶಿಬಿರಗಳಲ್ಲಿ ಮೂರು ದಿನ ಮೊದಲೇ ಸ್ಯಾನಿಟೈಸ್
- ಜಿಮ್ನೊಳಗೆ ಹೋಗುವಾಗ ಎಲ್ಲರಿಗೂ ಥರ್ಮಲ್ ಸ್ಕ್ರಿನಿಂಗ್
ಮಾರ್ಚ್ ತಿಂಗಳಲ್ಲಿ ಲಾಕ್ಡೌನ್ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಜಿಮ್, ಯೋಗ ಶಿಬಿರ ಓಪನ್ ಆಗುತ್ತಿವೆ. ಆದರೆ ಸ್ವಿಮ್ಮಿಂಗ್ ಪೂಲ್, ಸಿನಿಮಾ ಹಾಲ್ಗಳು ಆಗಸ್ಟ್ 31ರವರೆಗೆ ಬಂದ್ ಇರಲಿವೆ.