ನವದೆಹಲಿ : ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನಾ ನಿರತ ರೈತರು ಮತ್ತು ಕೇಂದ್ರ ಸರ್ಕಾರದ ನಡುವಿನ ಬಿಕ್ಕಟ್ಟನ್ನು ಪರಿಹರಿಸಲು ಮತ್ತೊಂದು ಸುತ್ತಿನ ನಿಗದಿಯಾಗಿದೆ.
ಡಿಸೆಂಬರ್ 30 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಸರ್ಕಾರ ಮತ್ತು ರೈತ ನಾಯಕರ ನಡುವೆ ಮಾತುಕತೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಸಭೆ ಆರಂಭವಾಗಲಿದೆ ಎಂಬ ಮಾಹಿತಿ ದೊರತಿದೆ.
ಓದಿ : ಡಿ.29ಕ್ಕೆ ಮತ್ತೊಂದು ಸುತ್ತಿನ ಮಾತುಕತೆಗೆ ರೈತ ಸಂಘಟನೆ ಒಪ್ಪಿಗೆ.. ಆದರೆ, ಪಟ್ಟುಬಿಟ್ಟಿಲ್ಲ..
ಈ ಹಿಂದೆ ಸಿಂಘು ಗಡಿಯಲ್ಲಿ ಸಭೆ ನಡೆಸಿದ್ದ 40 ರೈತ ಸಂಘಗಳ ಜಂಟಿ ಸಮಿತಿ ಡಿಸೆಂಬರ್ 29ರಂದು ಕೇಂದ್ರ ಸರ್ಕಾರದೊಂದಿಗೆ ಸಭೆ ನಡೆಸುವುದಾಗಿ ಸಮಯ ನಿಗದಿ ಮಾಡಿತ್ತು. ಸದ್ಯ ಸಿಂಘು ಗಡಿ ಪ್ರತಿಭಟನೆಯ ಕೇಂದ್ರ ಬಿಂದುವಾಗಿದ್ದು, ದಿನೇ ದಿನೇ ರೈತರ ಪ್ರತಿಭಟನೆಗೆ ಬೆಂಬಲ ಹೆಚ್ಚಾಗುತ್ತಿದೆ. ಇದುವರೆಗೆ ಕೇಂದ್ರ ಸರ್ಕಾರ ಮತ್ತು ರೈತ ನಾಯಕರ ನಡುವೆ ನಡೆದ ಎಲ್ಲಾ ಮಾತುಕತೆಗಳು ವಿಫಲವಾಗಿದ್ದು, ಈ ಬಾರಿಯ ಸಭೆಯಾದರೂ ಸಫಲವಾಗುತ್ತಾ ಎಂಬವುದನ್ನು ಕಾದು ನೋಡಬೇಕಿದೆ.